ಕೊರೋನ ಎಂದರೆ ಎಲ್ಲರೂ ನಿದ್ದೆಯಲ್ಲಾದರು ಒಮ್ಮೆ ಎದ್ದು ಕುಳಿತು ಕೊಳ್ಳುತ್ತಾರೆ. ಹೌದು ಅದು ಸೃಷ್ಟಿಸಿರುವ ಭಯಾನಕತೆ ಅಂತಂದು. ಅದರಿಂದಾಗಿ ಅದೆಷ್ಟೋ ಜನರು ತಮ್ಮ ಜೀವ ಕಳಕೊಂಡರು. ಅದೆಷ್ಟೋ ಕುಟುಂಬಗಳು ಬೀದಿಗೆ ಬಿದ್ದವು. ಅದೆಷ್ಟೋ ಮಕ್ಕಳು ತಮ್ಮ ಹೆತ್ತವರ ಕಳಕೊಂಡರು. ಎಲ್ಲೆಂದರಲ್ಲಿ ಬಾರಿ ನೋವು ಕಣ್ಣೀರು. ಮತ್ತೇನು ಕೊಟ್ಟಿಲ ಈ ರೋಗ. ಇದೀಗ ಮತ್ತೆ ಸುದ್ದಿಯಲ್ಲಿದೆ ಈ ಕೊರೋನದ ರೂಪಾಂತರಿ ವೈರಸ್. ಹೌದು ಆಫ್ರಿಕಾದಲ್ಲಿ ಕಂಡು ಬಂದ ಈ ತಳಿ ಇದೀಗ ಮತ್ತೆ ವಿಶ್ವ ವನ್ನೆ ತಲ್ಲಣ ಮಾಡಿದೆ.
ಹೌದು ಒಮೀಕ್ರಾನ್ ಎಂಬುದು ಕೋರೋನದ ರೂಪಾಂತರಿ ವೈರಸ್ ಆಗಿದ್ದು, ಮೊದಲ ಪ್ರಕರಣ ದಕ್ಷಿಣ ಆಫ್ರಿಕಾದಲ್ಲಿ ಪತ್ತೆ ಆಗಿತ್ತು. ಕೊರೋನಾ ಗಿಂತಲೂ ಸ್ವಲ್ಪ ಭಯಾನಕ ಎಂದರೂ ತಪ್ಪಾಗಲಾರದು. ಮೊನ್ನೆ ಮೊನ್ನೆ ತಾನೆ ದಕ್ಷಿಣ ಆಫ್ರಿಕಾದಲ್ಲಿ ಇದೆ ಎಂದು ಟಿವಿಯಲ್ಲಿ ನೋಡಿದ್ದೆವು . ಆದರೆ ಅದು ಭಾರತಕ್ಕೂ ಬಂದಿದೆ ಈಗ.
ನಮ್ಮದೇ ರಾಜ್ಯ ಕರ್ನಾಟಕದಲ್ಲಿ ಒಮಿಕ್ರಾನ್ ಮ ಮೊದಲ ಪ್ರಕರಣ ಕಂಡು ಬಂದಿದೆ. ಇದು ದೇಶದಲ್ಲೇ ಮೊದಲ ಪ್ರಕರಣ ಹೌದು ಇದೀಗ ಮತ್ತೊಮ್ಮೆ ಎಲ್ಲರಲ್ಲೂ ಭಯ ಹುಟ್ಟಿಕೊಂಡಿದೆ. ಮತ್ತೊಮ್ಮೆ ಕೋರೋಣ ಎಲ್ಲವನ್ನೂ ಬುಡ ಮೇಲಾಗಿಸುತ್ತದೆ ಎಂದು ಭಯ ಪಡುತ್ತಿದ್ದಾರೆ ಜನ. ದಕ್ಷಿಣ ಆಫ್ರಿಕಾಡಿಂದ ಬಂದಿದ್ದ ಇಬ್ಬರು ವ್ಯಕ್ತಿಗಳಲ್ಲಿ ಈ ಮಾದರಿಯ ವೈರಸ್ ಕಂಡು ಬಂದಿದ್ದು ಮುನ್ನೆಚರಿಕಾ ಕ್ರಮವಾಗಿ ಇದೀಗ ಅವರನ್ನು ನಿಗಾದಲ್ಲಿ ಇರಿಸಲಾಗಿದೆ.
ಯಾರು ಕೂಡ ಭಯ ಪಡದೆ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಬೇಕು. ಸಾಮಾಜಿಕ ಅಂತರ ಮಾಸ್ಕ್ ಧರಿಸುವುದು ನಿಲ್ಲಿಸಬಾರದು. ನಾವು ಮತ್ತೆ ಎಡವಿದಲ್ಲಿ ಮುಂದೆ ಎಲ್ಲವನ್ನೂ ನಾವೇ ಎದುರಿಸಬೇಕು ಹೀಗಿರುವಾಗ ಹಿಂದೆ ಮಾಡಿರುವ ತಪ್ಪನ್ನು ಮತ್ತೆ ಮಾಡದೆ ಜವಾಬ್ದಾರಿಯುತ ನಾಗರಿಕರಾಗಿ ಈ ಮಹಾ ಮಾರಿಯನ್ನು ಎದುರಿಸೋಣ.