ಪರೀಕ್ಷೆ ೨೬ ದಿನ ಮುಂಚೆ ಆಸ್ಪತ್ರೆಗೆ ದಾಖಲು ಆದರೂ ಕಷ್ಟಪಟ್ಟು IAS ಪಾಸ್ ಆಗೇಬಿಟ್ಟ ಈ ಹುಡುಗ? ಜ್ಯೋತಿಷಿ ಇವರ ಬಗ್ಗೆ ಏನು ಹೇಳಿದ್ದರು ಗೊತ್ತಾ?

382

ಜೀವನವೇ ಒಂದು ಸಂಘರ್ಷ, ಎದ್ದು ಹೋರಾಡಿದರೆ ಜಯ ಸಿಗುತ್ತದೆ, ಬಿದ್ದು ಹೊರಳಾಡಿದರೆ ಸೋಲೊಂದೆ ಗತಿ ಆಗುತ್ತದೆ. ಜೀವನದಲ್ಲಿ ಎಲ್ಲವನ್ನೂ ಎದುರಿಸಬೇಕು, ಕಷ್ಟಗಳ ಎದುರಿಸಿದಷ್ಟು ಗಟ್ಟಿಯಾಗಿ ಬೆಳೆಯುತ್ತೇವೆ ನಾವು. ಇಲ್ಲೊಬ್ಬ ಹುಡುಗನ ಕಥೆ ಹಾಗೆ ಇದೆ. ಕೈ ನೋಡಿ ಹೇಳಿದ್ದರು ಭವಿಷ್ಯವಾಣಿ, ಅದರಂತೆ ಅದೆಷ್ಟೋ ಅಡೆ ತಡೆ ಬಂದವು ಆದರೆ ಕೊನೆಗೆ ಏನಾಯಿತು? ತಿಳಿಯಲೇ ಬೇಕಾದ ರೋಚಕ ಕಥೆ ಇದು.

ಇವರ ಹೆಸರು ನವಜೀವನ್, ಮಹಾರಾಷ್ಟ್ರ ಮೂಲದ ವ್ಯಕ್ತಿ. ತಂದೆ ವೃತ್ತಿಯಲ್ಲಿ ರೈತ, ತಾಯಿ ಪ್ರಿಮರಿ ಸ್ಕೂಲ್ ಟೀಚರ್ ಆಗಿದ್ದರು. ಇಂಜಿನಿಯರಿಂಗ್ ವಿಭಾಗದಲ್ಲಿ ಪದವಿ ಮುಗಿಸಿ IAS ಆಗಬೇಕು ಎಂದು ಓದಲು ದೆಹಲಿಗೆ ತೆರಳಿದರು. ಆರಂಭಿಕ ಹಂತದಲ್ಲಿ ತುಂಬಾ ಕಷ್ಟಗಳು ಎದುರಾಯಿತು. ಏನೋ ಎಲ್ಲವೂ ಅವರ ವಿರುದ್ಧವಾಗಿ ನಡೆಯುವಂತೆ ಭಾಸವಾಗುತ್ತಿತ್ತು. ಆದರೂ ಹೇಗೋ ತಮ್ಮ ಮೊದಲ ಪ್ರಯತ್ನದಲ್ಲಿ ಐಎಎಸ್ ಪ್ರಿಲಿಮಿನರಿ ಪರೀಕ್ಷೆ ತೇರ್ಗಡೆ ಹೊಂದಿದರು. ಮುಂದಿನದು ದೊಡ್ಡ ಸವಾಲು ಅದಕ್ಕಾಗಿ ಮತ್ತಷ್ಟು ತಯಾರಿ ಮಾಡಬೇಕು. ಆದರೆ ಯಾಕೋ ಅವರಿಗೆ ಎಲ್ಲವೂ ಸರಿ ಹೋದಂತೆ ಕಾಣಲಿಲ್ಲ.

ಮನಸಿನೊಳಗೆ ಯಾರೋ ತಾನು ಒಳಿತಾಗ ಬಾರದು ಎಂಬಂತೆ ಮಾಡುತ್ತಿದ್ದಾರೆ ಎಂದು ಭಾವನೆ ಮೂಡಿದಾಗ, ಭವಿಷ್ಯ ಕೇಳಲು ಹೋದರು ಅವರ ಕೈ ನೋಡಿ 27 ವರ್ಷದ ವರೆಗೆ ಯಾವುದೇ ಸರ್ಕಾರಿ ನೌಕರಿ ಆಗುವುದಿಲ್ಲ ಅಲ್ಲಿಯ ವರೆಗೆ ಅದರ ಗೋಜಿಗೆ ಹೋಗುವುದು ಬೇಡ ಎಂದು ಹೇಳಿದಾಗ ಅವರು ಕುಗ್ಗಿದರು. ಅದಕ್ಕೆ ಸರಿ ಎಂಬಂತೆ ಅವರ ಮೊಬೈಲ್ ಕಳೆದು ಹೋಯಿತು. ಜ್ವರ ಕೂಡ ಬಂದಿತು. ಪರೀಕ್ಷೆಗೆ 26 ದಿನ ಇರುವಾಗ ಡೆಂಗ್ಯೂ ಜ್ವರ ಬಂತು. ಹೀಗೆ ಯಾವುದೇ ಮದ್ದು ನಾಟಲಿಲ್ಲ, ಕೊನೆಗೆ ಆಸ್ಪತ್ರೆ ದಾಖಲು ಮಾಡಿದರು ಆದ್ರೂ ಪ್ರಯೋಜನ ಆಗಲಿಲ್ಲ. ಸೀದಾ ತನ್ನ ಊರಿಗೆ ಕರೆದು ಕೊಂಡು ಹೋದರು ಅಲ್ಲಿ ಆಸ್ಪತ್ರೆ ಸೇರಿಸಿದಾಗ ಎಲ್ಲವೂ ಕೈ ಮೀರಿತ್ತು.

ಕೊನೆಗೆ ICU ನಲ್ಲಿ ಇಡುವ ಪರಿಸ್ಥಿತಿ ಬಂದಿತು. ತಂದೆ ಹೇಳಿದ್ದು ಒಂದೇ ಮಾತು, ಸೋಲೊಪ್ಪಿ ಕೊಳ್ಳುತ್ತಿಯೋ ಅಥವಾ ಹೊರಾಡುತ್ತಿಯೋ ಎಂದು. ಆಗಲೇ ಆತ ಕೂಡ ಹೋರಾಡಲು ನಿರ್ಧರಿಸಿ, ಡಾಕ್ಟರ್ ಬಳಿ ಹೇಳಿದ ಏನು ಔಷಧಿ ಸಿರಿಂಜು ಕೊಡುವುದಿದದ್ರು ಎಡಗೈ ಗೆ ಕೊಡಿ ಬಲ ಕೈಯಲ್ಲಿ 9 ಪೇಪರ್ ಪರೀಕ್ಷೆ ಬರೆಯುವುದು ಇದೆ ಎಂದು. ಡಾಕ್ಟರ ಕೂಡ ಅಚ್ಚರಿ ಯಿಂದ ಪರೀಕ್ಷೆ ಮುಂದಕ್ಕೆ ಬರೆಯಬಹುದು ಜೀವ ಮುಕ್ಯ ಎಂದಾಗ ಕೇಳದೆ ICU ನಲ್ಲೆ ಓದಲು ಆರಂಭ ಮಾಡಿದ. ಹೀಗೆ ಓದಿ ಕೊನೆಗೂ ಪರೀಕ್ಷೆ ಬರೆದೆ ಬಿಟ್ಟ.

ಆದರೆ ಭವಿಷ್ಯ ಹೇಳಿದ್ದು ಏನಾಯಿತು? ಹೌದು ಭವಿಷ್ಯ ಹೇಳಿದ ಹಾಗೆ ಆಗಲಿಲ್ಲ ತನ್ನ 26ನೆಯ ವಯಸ್ಸಿನಲ್ಲಿ 360ನೆಯ ರಾಂಕ್ ಪಡೆದು IAS ಪರೀಕ್ಷೆ ಪಾಸ್ ಮಾಡಿಯೇ ಬಿಟ್ಟ. ಇದಕ್ಕೆಲ್ಲ ಕಾರಣ ಹಠ ಮತ್ತು ಮಾಡಬೇಕು ಎಂಬ ಛಲ ಹೊರತು ಭವಿಷ್ಯವಾಣಿ ಅಲ್ಲ. ಸದಾ ಜೀವನದಲ್ಲಿ ತನ್ನಂಬಿಕೆ ಎಂಬುವುದು ಇರಲಿ. ಎಲ್ಲದಕ್ಕೂ ಮತ್ತೊಬ್ಬರ ನಂಬಿಕೊಂಡು ಬದುಕಬಾರದು.

Leave A Reply

Your email address will not be published.