ಪುರಿ ಜಗನ್ನಾಥ ದೇವರ ದೇವಸ್ಥಾನದ ಈ ಪವಾಡಗಳು ತಿಳಿದರೆ ಮೈಜುಮ್ಮೆನಿಸುವುದಂತೂ ಖಚಿತ. ಇಂದು ಕೂಡ ಕೃಷ್ಣ ನ ಪವಾಡಕ್ಕೆ ಬೆರಗಾಗದವರೇ ಇಲ್ಲ.

1,448

ಭಗವಾನ್ ಶ್ರೀಕೃಷ್ಣ ಮಹಾಭಾರತದ ದ ನಂತರ ತನ್ನ ದೇಹ ತ್ಯಾಗ ದ ನಂತರ ಅವರ ಇಡೀ ದೇಹವು ಪಂಚಭೂತಗಳಲ್ಲಿ ವಿಲೀನವಾಯಿತು. ಆದರೆ ಕೃಷ್ಣನ ಹೃದಯ ಮಾತ್ರ ಸಾಮಾನ್ಯ ಜನರಂತೆ ಬಡಿಯುತ್ತಿತ್ತು. ಮತ್ತು ದೇವರ ಹೃದಯವನ್ನು ಸಂಪೂರ್ಣವಾಗಿ ಸುರಕ್ಷಿಸಿ ಇಡಲಾಗಿತ್ತಂತೆ. ಇಂದಿಗೂ ಅದು ಸುರಕ್ಷಿತವಾಗಿ ಮರದ ವಿಗ್ರಹದೊಳಗೆ ಇಡಲಾಗಿದೆ. ಹಾಗೇನೇ ಇಂದಿಗೂ ಅದರಿಂದ ಹೃದಯದ ಬಡಿತ ಕೇಳಿಸುತ್ತದೆ. ಇದೆ ರೀತಿ ಅನೇಕ ಆಚರಿಗಳು ಇಂದಿಗೂ ಪುರಿ ಜಗನ್ನಾಥ ಮಂದಿರದಲ್ಲಿ ನಮಗೆ ಕಾಣಲು ಸಿಗುತ್ತದೆ.

ಕಲಿಯುಗದ ದೇವರೆಂದೇ ಜಗನ್ನಾಥ ಮಂದಿರದ ಕೃಷ್ಣನನ್ನು ನಂಬಲಾಗುತ್ತದೆ. ಜಗನ್ನಾಥ ಸ್ವಾಮಿ ತನ್ನ ಸಹೋದರಿ ಸುಭದ್ರ ಹಾಗು ಸಹೋದರ ಬಲರಾಮ ರೊಂದಿಗೆ ಪುರಿಯಲ್ಲಿ ನೆಲೆಸಿದ್ದಾರೆ. ಆದರೆ ಅಲ್ಲಿನ ಕೆಲವು ಅಚ್ಚರಿಯ ಸಂಗತಿ ಇಂದಿಗೂ ಜನರಲ್ಲಿ ಮೈನವಿರೇಳಿಸುತ್ತದೆ. ಮೊದಲನೇದಾಗಿ ಮಹಾಪ್ರಭುವಿನ ವಿಗ್ರಹವನ್ನು ೧೨ ವರ್ಷಗಳಿಗೊಮ್ಮೆ ಬದಲಾಯಿಸಲಾಗುತ್ತದೆ. ಈ ಸಮಯದಲ್ಲಿ ಇಡೀ ಪುರಿ ನಗರದಲ್ಲಿ ಕತ್ತಲೆ ಇರುತ್ತದೆ. ಇಡೀ ನಗರದಲ್ಲಿ ದೀಪಗಳನ್ನು ಆರಿಸಲಾಗುತ್ತದೆ, CRPF ತಂಡ ದೇವಾಲಯ ಸುತ್ತುವರೆಯುತ್ತಾರೆ. ಆ ಸಮಯದಲ್ಲಿ ಯಾರನ್ನು ಒಳಗೆ ಹೋಗಲು ಬಿಡುವುದಿಲ್ಲ.

ದೇವಾಲಯದ ಒಳಗು ಕೂಡ ಕತ್ತಲೆ ಇರುತ್ತದೆ. ಪೂಜೆ ಮಾಡುವ ಅರ್ಚಕರ ಕಣ್ಣಿಗೆ ಬಟ್ಟೆ ಕಟ್ಟಲಾಗುತ್ತದೆ. ಅರ್ಚಕರ ಕೈಗೆ ಗ್ಲೋವ್ಸ್ ಹಾಕಿಕೊಂಡು ಹಳೆಯ ವಿಗ್ರಹದಿಂದ ಬ್ರಹ್ಮ ದ್ರವ್ಯ ತೆಗೆದು ಹೊಸ ವಿಗ್ರಹದಲ್ಲಿ ಹಾಕುತ್ತಾರೆ. ಈ ಬ್ರಹ್ಮ ಪದಾರ್ಥ ಯಾವುದು ಎನ್ನುವುದು ಇಲ್ಲಿಯವರೆಗೂ ತಿಳಿದಿಲ್ಲ. ಸಾವಿರಾರು ವರ್ಷಗಳಿಂದ ಇದು ಒಂದು ವಿಗ್ರಹ ಇಂದ ಇನ್ನೊಂದು ವಿಗ್ರಹಕ್ಕೆ ವರ್ಗಾವಣೆ ಆಗುತ್ತಲೇ ಇದೆ. ಈ ದ್ರವ್ಯ ಅಲೌಕಿಕ ವಸ್ತುವಾಗಿದೆ. ಇದನ್ನು ಬರಿ ಕೈಯಲ್ಲಿ ಮುಟ್ಟಿದರೆ ದೇಹ ಛಿದ್ರವಾಗುತ್ತದೆ ಎನ್ನುತ್ತಾರೆ. ಯಾವ ವರ್ಷ ಎರಡು ಆಷಾಡ ಬರುತ್ತದೆಯೋ ಅಂದು ಎಲ್ಲ ವಿಗ್ರಹಗಳನ್ನು ಬದಲಾಯಿಸಲಾಗುತ್ತದೆ.

ಈ ತರಹ ಎರಡು ಆಷಾಡಗಳು ೧೯ ವರ್ಷಗಳ ನಂತರವೂ ಬರಬಹುದು ಹಾಗೇನೇ ೧೪ ವರ್ಷಗಳಿಗೂ ಬರಬಹುದು. ಈ ಸಮಯವನ್ನು ನವ್- ಕಲ್ವರ್ ಎಂದು ಕರೆಯುತ್ತಾರೆ. ಕೆಲವು ಅರ್ಚಕರ ಪ್ರಕಾರ ಈ ಬ್ರಹ್ಮ ದ್ರವ್ಯ ಮೊಲದಂತೆ ಜಿಗಿಯುತ್ತಿರುತ್ತಿತ್ತು ಎಂದು ಅದರ ಅನುಭವ ಆಗಿದೆ ಎಂದು ಹೇಳಿದ್ದಾರೆ. ಇಂದಿಗೂ ಕೂಡ ಜಗನ್ನಾಥ ದೇವಾಲಯದ ಜಾತ್ರೆ ಸಮಯದಲ್ಲಿ ಪುರಿಯ ರಾಜ ಸ್ವತಃ ಚಿನ್ನದ ಪೊರಕೆಯಲ್ಲಿ ದೇವಾಲಯ ಸ್ವಚ್ಛ ಗೊಳಿಸಿಯುತ್ತಾನೆ. ಜಗನ್ನಾಥ ದೇವಾಲಯದ ದ್ವಾರದಿಂದ ಒಳಗೆ ಬಂದ ತಕ್ಷಣ ಒಳಗೆ ಸಮುದ್ರದ ಅಲೆಗಳ ಧ್ವನಿ ಕೇಳಿಸುದಿಲ್ಲ. ಆದರೆ ದೇವಾಲಯದಲ್ಲಿ ಒಂದು ಹೆಜ್ಜೆ ಹಿಂದಿಟ್ಟರೆ ಸಾಗರದ ಸಡ್ಡು ಕೇಳುತ್ತದೆ.

ಬೇರೆ ದೇವಾಲಯದಲ್ಲಿ ಗೋಪುರದ ಮೇಲೆ ಹಕ್ಕಿಗಳು ಕೂರುವುದು ಹಾರಾಟ ಎಲ್ಲ ಮಾಡಿದರೆ ಈ ದೇವಾಲಯದಲ್ಲಿ ಆ ತಾರಾ ಯಾವುದೇ ಹಕ್ಕಿ ಹಾರಾಟ ಹಾಗು ಕೂರುವುದು ಇಲ್ಲ. ದೇವಾಲಯದ ಧ್ವಜವು ಯಾವತ್ತೂ ಗಾಳಿಯ ವಿರುದ್ಧ ದಿಕ್ಕಿನಲ್ಲಿ ಹರಡುತ್ತಿರುತ್ತದೆ. ದಿನದ ಯಾವುದೇ ಸಮಯದಲ್ಲಿ ನೆರಳು ಬೀಳುವುದಿಲ್ಲ. ಇಲ್ಲಿನ ಮುಖ್ಯ ಗೋಪುರದ ಮೇಲಿನ ದ್ವಜ ಪ್ರತಿ ದಿನ ಬದಲಾಯಿಸಲಾಗುತ್ತದೆ. ಬದಲಾಯಿಸದಿದ್ದರೆ ಮುಂದಿನ ೧೮ ವರ್ಷಗಳವರೆಗೆ ಮುಚ್ಚಲಾಗುತ್ತದೆ ಎಂದು ನಂಬಲಾಗಿದೆ. ಜಗನ್ನಾಥ ಮಂದಿರದಲ್ಲಿ ಪ್ರತಿದಿನ ಮಾಡುವ ಪ್ರಸಾದ ಇಂದಿಗೂ ಕಡಿಮೆಯಾಗುವದಿಲ್ಲ.

ಆದರೆ ಆಶ್ಚರ್ಯಕರ ವಿಷಯ ಎಂದರೆ ದೇವಸ್ಥಾನದ ಬಾಗಿಲು ಮುಚ್ಚಿದ ಕೂಡಲೇ ಪ್ರಸಾದವು ಕೂಡ ಕೊನೆಯಾಗುತ್ತದೆ. ಇಲ್ಲಿ ಪ್ರಸಾದ ಮಾಡಲು ಏಳು ಮಣ್ಣಿನ ಮಡಕೆಗಳನ್ನು ಬಳಸಲಾಗುತ್ತದೆ. ಒಂದರ ಮೇಲೆ ಒಂದು ಇಟ್ಟುಕೊಂಡು ಕಟ್ಟಿಗೆ ಇಂದ ಈ ಪ್ರಸಾದ ಬೇಯಿಸಲಾಗುತ್ತದೆ. ವಿಶೇಷ ಎಂದರೆ ಮೇಲಿನ ಮೊದಲ ಮಡಕೆ ಬೇಯುತ್ತದೆ ಮೊದಲಿಗೆ. ಬೆಂಕಿ ಗೆ ಹತ್ತಿರವಿರುವ ಮಡಕೆಯಲ್ಲಿನ ಭಕ್ಷ್ಯ ಕೊನೆಗೆ ಬೈದಿರುತ್ತದೆ. ಇದನೆಲ್ಲ ನೋಡಿದರೆ ಆಶರ್ಯದ ಜೊತೆಗೆ ಭರಪೂರ ದೇವರ ಮೇಲೆ ಭಕ್ತಿ ಬರುವುದು ಕೂಡ ಸಹಜ. – Brahmana priya.

Leave A Reply

Your email address will not be published.