ಪ್ರಧಾನಿ ಮೋದಿ ಅವರ ಕನಸಿನ ಇ- ಶ್ರಮ್ ಕಾರ್ಡ್ ಗೆ ನೋಂದಾಯಿಸಿಕೊಳ್ಳಿ 5 ಲಕ್ಷ ವರೆಗೆ ಉಚಿತ ಚಿಕಿತ್ಸೆ ಪಡೆಯಿರಿ? ಇನ್ನೇನು ಸೌಲಭ್ಯಗಳಿವೆ ಇದರಲ್ಲಿ ಬನ್ನಿ ತಿಳಿಯೋಣ?

694

ಪ್ರಧಾನಿ ಮೋದಿ ಅವರು ಯಾವಾಗಲೂ ಅಸಂಘಟಿತ ವಲಯದ ಕಾರ್ಮಿಕರ ಸಬಲೀಕರಣಕ್ಕೆ ಶ್ರಮಿಸುತ್ತಾ ಇದ್ದಾರೆ. ಬೇರೆ ಎಲ್ಲಾ ವಲಯಗಳಿಗೆ ಅವರದ್ದೇ ಆದ ಎಲ್ಲಾ ಸೌಲಭ್ಯ ಇದೆ ಆದರೆ ಈ ಅಸಂಘಟಿತ ವಲಯದ ಕಾರ್ಮಿಕರ ಕೇಳುವವರು ಯಾರು ಇಲ್ಲ ಅಂತಹವರಿಗೆ ಅನುಕೂಲ ಆಗಲಿ ಎಂದು ಜಾರಿಗೆ ತಂದಿರುವುದು ಈ ಇ ಶ್ರಮ್ ಕಾರ್ಡ್. ಹಾಗಾದರೆ ಯಾರಿಗೆಲ್ಲ ಇದರ ಲಾಭ ಪಡೆಯಬಹುದು ? ಏನಿದರ ಉಪಯೋಗ ಬನ್ನಿ ತಿಳಿಯೋಣ.

ಇದರಿಂದ ಸಿಗುವ ಲಾಭಗಳೇನು ?
2 ಲಕ್ಷದ ಉಚಿತ ವಿಮೆ , ಮಕ್ಕಳಿಗೆ ವಿದ್ಯಾರ್ಥಿವೇತನ, ಉಚಿತ ಸೈಕಲ್, ಉಚಿತ ಹೊಲಿಗೆ ಯಂತ್ರ, ನಿಮ್ಮ ಕೆಲಸಕ್ಕೆ ಉಚಿತ ಉಪಕರಣಗಳು ಮುಂತಾದ ಕಾರ್ಮಿಕ ಇಲಾಖೆಯ ಎಲ್ಲಾ ಯೋಜನೆಗಳ ಪ್ರಯೋಜನ. ಭವಿಷ್ಯದಲ್ಲಿ, ಪಡಿತರ ಚೀಟಿಯನ್ನು ಇದಕ್ಕೆ ಲಿಂಕ್ ಮಾಡಲಾಗುವುದು, ಇದರಿಂದ ದೇಶದ ಯಾವುದೇ ಪಡಿತರ ಅಂಗಡಿಯಿಂದ ಪಡಿತರ ಲಭ್ಯವಾಗುತ್ತದೆ. ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು? ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆ ಸಂಖ್ಯೆ ಮಾತ್ರ ಅಗತ್ಯವಿದೆ.

ಇ-ಶ್ರಮ್ ಕಾರ್ಡ್ ಪಡೆಯಲು ಯಾರೆಲ್ಲ ಅರ್ಹರು? ಮನೆಗೆಲಸದವಳು – ಸೇವಕಿ, ಅಡುಗೆಯವರು , ಸ್ವಚ್ಚತಾ ಸಿಬ್ಬಂಧಿಗಳು, ಕಾವಲುಗಾರ, ಕೂಲಿ, ರಿಕ್ಷಾ ಚಾಲಕ, ಕೈಗಾಡಿ ಮಾರಾಟಗಾರ, ಬೀದಿ ಬದಿ ವ್ಯಾಪಾರಿ, ಹೋಟೆಲ್  ವೈಟರ್, ಸ್ವಾಗತಕಾರ, ಗುಮಾಸ್ತ, ನಿರ್ವಾಹಕ, ಪ್ರತಿ ಅಂಗಡಿಯ ಸೇವಕ/ಮಾರಾಟಗಾರ/ಸಹಾಯಕ, ಆಟೋ ಚಾಲಕ, ಚಾಲಕ, ಪಂಕ್ಚರ್, ಬ್ಯೂಟಿ ಪಾರ್ಲರ್ ಕೆಲಸಗಾರ, ಕ್ಷೌರಿಕ, ಚಮ್ಮಾರ, ಟೈಲರ್, ಕಾರ್ಪೆಂಟರ್, ಪ್ಲಂಬರ್, ಎಲೆಕ್ಟ್ರಿಷಿಯನ್, ಪೇಂಟರ್, ಟೈಲ್ ಕೆಲಸಗಾರ, ವೆಲ್ಡರ್  ಕೆಲಸಗಾರ, NREGA ಕೆಲಸಗಾರ, ಇಟ್ಟಿಗೆ ಗೂಡು ಕೆಲಸಗಾರ, ಕಲ್ಲು ಒಡೆಯುವ ಕೆಲಸಗಾರ, ಗಣಿ ಕೆಲಸಗಾರ, ಫಾಲ್ಸ್ ಸೀಲಿಂಗ್ ಕೆಲಸಗಾರ, ಶಿಲ್ಪಿ, ಮೀನುಗಾರ, ಕುರುಬ, ಹೈನುಗಾರರು, ಎಲ್ಲಾ ದನಕರು ಮೆಯಿಸುವವರು, ಪೇಪರ್ ಹಾಕುವವರು, ಜೊಮಾಟೊ ಸ್ವಿಗ್ಗಿ ಡೆಲಿವರಿ ಬಾಯ್ಸ್, ಅಮೆಜಾನ್ ಫ್ಲಿಪ್‌ಕಾರ್ಟ್ ಡೆಲಿವರಿ ಬಾಯ್ಸ್ (ಕೊರಿಯರ್‌ಗಳು), ದಾದಿಯರು, ವಾರ್ಡ್‌ಬೋ  , ಆಯಾಗಳು, ದೇವಾಲಯದ ಅರ್ಚಕರು, ವಿವಿಧ ಸರ್ಕಾರಿ ಕಛೇರಿಗಳ ದೈನಂದಿನ ವೇತನದಾರರು, ಕಾರ್ಯಕರ್ತರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು.

ಅರ್ಜಿ ಸಲ್ಲಿಸುವುದು ಹೇಗೆ? 16 ರಿಂದ 59 ವರ್ಷ ವಯಸ್ಸಿನ ಎಲ್ಲಾ ವ್ಯಕ್ತಿಗಳು ,ನಿಮ್ಮ ಹತ್ತಿರದ ಯಾವುದೇ ಸೈಬರ್ ಕೇಂದ್ರ / ಸಾರ್ವಜನಿಕ ಸೇವಾ ಕೇಂದ್ರ ಪೋಸ್ಟ್ ಆಫೀಸ್‌ನಲ್ಲಿ ಅಥವಾ ನಿಮ್ಮಲ್ಲಿ ಇಂಟರ್ನೆಟ್ ಸೌಲಭ್ಯ ಇದ್ದರೆ ನೀವೇ ನೋಂದಣಿಯನ್ನು ಮಾಡಬಹುದು. ಈ ಪ್ರಯೋಜನವನ್ನು ಆದಷ್ಟು ಜನರು ಪಡೆಯಬೇಕು , ಮತ್ತಷ್ಟು ಜನರಿಗೆ ತಿಳಿಸಲು ಈ ವಿಷಯವನ್ನು ಆದಷ್ಟು ಶೇರ್ ಮಾಡಿರಿ. ನಿಮ್ಮ ಒಂದು ಒಳ್ಳೆಯ ನಿರ್ಧಾರ ಯಾವುದೋ ಒಂದು ಬದ ಕುಟುಂಬಕ್ಕೆ ಸಹಕಾರಿ ಆಗಲಿದೆ.

Leave A Reply

Your email address will not be published.