ಬಡತನ ನೀಗಿಸಲು ದುಬೈ ಗೆ ಹೋದರು ಹತ್ತನೇ ತರಗತಿ ಫೇಲ್ ಆದ ಇವರು ತನ್ನ ಕೌಶಲ್ಯದಿಂದ 400 ಕೋಟಿ ವ್ಯವಹಾರ ನಡೆಸುವ ದೊಡ್ಡ ಉದ್ಯಮವನ್ನೇ ಸ್ಥಾಪಿಸಿದ್ದಾರೆ

364

ಜೀವನದಲ್ಲಿ ಬರುವ ಕಷ್ಟಗಳು ಮನುಷ್ಯ ಹೇಗೆ ಬದುಕಬೇಕು ಎಂಬ ನೀತಿ ಪಾಠವನ್ನು ಹೇಳುತ್ತದೆ. ಕಷ್ಟಗಳು ಬಂದ್ದಾಗ ಮಾತ್ರ ಜೀವನದಲ್ಲಿ ಇನ್ನಾದರೂ ಸಾಧಿಸಬೇಕು ಎಂದು ಅನಿಸುವುದು. ಹಾಗೆಯೇ ನಡೆದ ಘಟನೆ ಇದು. ಊರಿನ ಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ, ಹೊಟ್ಟೆಪಾಡಿಗಾಗಿ ಕೆಲಸ ಅರಸಿ ದುಬೈ ಗೆ ಹೋಗಿದ್ದ ಆದರೆ ಇಂದು ಅವರು 4000ಕೋಟಿ ರುಪಾಯಿ ವಹಿವಾಟು ನಡೆಸುತ್ತಿದ್ದಾರೆ.

ಇವರ ಹೆಸರು ಧನಂಜಯ್, ತಂದೆ ಮಹಾದೇವ್ ಅವರು ವಾಯುಪಡೆಯ ಹವಾಲ್ದಾರ್ ಆಗಿ ಕೆಲಸ ಮಾಡುತ್ತಿದ್ದರು. ಒಂದು ಕಡೆಯಿಂದ ಇನ್ನೊಂದು ಕಡೆಗೆ ವರ್ಗಾವಣೆ ಆಗುತ್ತಲೇ ಇತ್ತು ಅದಕ್ಕಾಗಿ ಅವರು ತನ್ನ ಮಗನನ್ನು ಅಜ್ಜಿ ಮನೆಯಲ್ಲಿ ಬಿಟ್ಟಿದ್ದರು. ಸಣ್ಣ ಪ್ರಾಯದಲ್ಲಿ ಬಹಳ ಕಷ್ಟ ಪಟ್ಟಿದ್ದರು. ಹಾಕಲು ಚಪ್ಪಲಿ ಇಲ್ಲ, ಬಟ್ಟೆಯಿಲ್ಲ. ತಿನ್ನಲು ತಿನಿಸು ಇಲ್ಲ ಬರಿ ಎರಡು ರೀತಿಯಲ್ಲಿ ಇಡೀ ದಿನ ಕಳೆಯುತ್ತಿದ್ದರು.ಹೇಗೋ ವಿಧ್ಯಾಭ್ಯಾಸ ಮುಂದುವರೆಸಿ ಹತ್ತರ ವರೆಗೆ ಬಂದಾಗ ಮತ್ತೆ ತಂದೆ ತಾಯಿ ಜೊತೆಗೆ ಸೇರಿಕೊಂಡಿದ್ದರು.

ಅದು ಏನೋ ಗೊತ್ತಿಲ್ಲ ಹತ್ತನೇ ತರಗತಿಯಲ್ಲಿ ಫೇಲ್ ಆಗಿ ಅಂಗಡಿ ಒಂದರಲ್ಲಿ ಕೆಲಸಕ್ಕೆ ಸೇರಿಕೊಂಡರು ಆದರೆ ಅದು ಸಾಕಾಗುವುದಿಲ್ಲ ಎಂದು ಭಾವಿಸಿ ವಿದೇಶಕ್ಕೆ ಪ್ರಯಾಣ ಬೆಳೆಸಿದರು. Yಅಲ್ಲಿಯೂ ಒಂದು ಸಣ್ಣ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡರು. ಆದರೆ ಭಾರತೀಯರ ಬೇಡಿಕೆಗಳ ಬಗ್ಗೆ ಅಧ್ಯಯನ ನಡೆಸಿ ಭಾರತ ವಸ್ತುಗಳೇ ಸಿಗುವ ಅಂಗಡಿ ಇಟ್ಟರು. ಇದು ಅವರ ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿತು. ಬರೋಬ್ಬರಿ 9000 ಬಗೆಯ ಪ್ರಾಡಕ್ಟ್ ಇಲ್ಲಿ dorakuttadem ಹೆಚ್ಚಿನ ಭಾರತೀಯರು ಇಲ್ಲಿಯೇ ಬರುತ್ತಾರೆ ಯಾಕೆಂದರೆ ಭಾರತೀಯ ಮೂಲದ ಎಲ್ ವಸ್ತುಗಳು ಇಲ್ಲಿ ಸಿಗುತ್ತದೆ. ಹೀಗೆ ವ್ಯವಹಾರ ಮುಂದುವರೆದು ಪ್ರಸ್ತುತ ಈಗ ಅದು 4000ಕೋಟಿ ರೂಪಾಯಿ ವಹಿವಾಟು ನಡೆಸುತ್ತಿದೆ.

Leave A Reply

Your email address will not be published.