ಬರೀ 20 ಪೈಸೆ ಗೆ ಒಂದು ಕಿಲೋಮೀಟರ್ ಓಡುತ್ತೆ ಈ ಇ- ಸ್ಕೂಟರ್ ಯಾವುದು ಇದು? ಎಷ್ಟು ಇದರ ಬೆಲೆ?

449

ಆವಿಷ್ಕಾರಗಳು ಹಾಗೆ ನೋಡಿ, ಯಾವುದಾದರೂ ಒಂದು ಸಮಸ್ಯೆ ಎದುರಾದಾಗ ಅದಕ್ಕೆ ಪರಿಹಾರವಾಗಿ ಒಂದು ಆವಿಷ್ಕಾರ ನಡೆಯುತ್ತಲೇ ಇರುತ್ತದೆ. ಇತ್ತೀಚೆಗೆ ಹೆಚ್ಚುತ್ತಿರುವ ಪೆಟ್ರೋಲ್ ದರ ವಾಹನ ನಿರ್ವಹಣೆ ಅದೆಷ್ಟೋ ಆವಿಷ್ಕಾರಗಳಿಗೆ ಎಡೆ ಮಾಡಿ ಕೊಟ್ಟಿದೆ. ಪೆಟ್ರೋಲ್ ಇಲ್ಲದೆ ಓದುವ ಚಾರ್ಜ್ ಮಾಡುವ ವಾಹನಗಳು ಮಾರುಕಟ್ಟೆಗೆ ಬಂದವು, ಎಥೆನಾಲ್ ಬಳಸಿ ಸಂಚರಿಸುವ ವಾಹನಗಳು ಮಾರುಕಟ್ಟೆಗೆ ಬಂದವು. ಇದೀಗ ಚಾರ್ಜ್ ಮಾಡುವ ಬೈಕ್ ಸ್ಕೂಟರ್ ಗಳ ಮಧ್ಯೆಯೇ ಪೈಪೋಟಿ ಶುರು ಆಗಿದೆ.

ಹೌದು ಅದೆಷ್ಟೋ ಕಂಪನಿಯ ವಾಹನಗಳು ಈಗ ಮಾರುಕಟ್ಟೆಯಲ್ಲಿ ಇದೆ, ಅಂತಹುದೇ ಕಂಪನಿಗಳ ಸಾಲಲ್ಲಿ ನಿಲ್ಲುತ್ತದೆ ಈ ಹೊಸ ಸ್ಟಾರ್ಟ್ ಅಪ್ ಕಂಪನಿ. ಅದರ ಹೆಸರು “HOPES” ಹೌದು ಅದರ ಹೆಸರೇ ಹೇಳುವಂತೆ ಅದೇನೋ ಹೊಸ ಆಶಯವನ್ನು ಹುಟ್ಟು ಹಾಕಿದೆ ಮಾರುಕಟ್ಟೆಯಲ್ಲಿ. ಐಐಟಿ ದೆಹಲಿ ಯ ವಿಧ್ಯಾರ್ಥಿ ಆದಿತ್ಯ ತಿವಾರಿ ಈ ಕಂಪನಿಯನ್ನು ಹುಟ್ಟು ಹಾಕಿದ್ದಾರೆ. ಅವರು ಹೇಳುವ ಪ್ರಕಾರ ಮಾಧ್ಯಮ ವರ್ಗದ ಜನರನ್ನು ಮತ್ತು ಡೆಲಿವರಿ ಏಜೆಂಟ್ ಗಳನ್ನು ಗುರಿಯಾಗಿಸಿ ಆವಿಷ್ಕರಿಸಿದ ಬೈಕ್ ಇದು. ಇದಕ್ಕೆಂದೇ ಹೊಸ ಅಪ್ಲಿಕೇಶನ್ ಒಂದು ಇದ್ದು ಅದನ್ನು ಇಂಟರ್ನೆಟ್ ಜೊತೆ ಸಂಪರ್ಕಿಸಿದಾಗ ಈ ಬೈಕ್ ನ ಎಲ್ಲಾ ಮಾಹಿತಿ ಬರುತ್ತದೆ.

ಎಷ್ಟು ಚಾರ್ಜ್ ಇದೆ ಇನ್ನೆಷ್ಟು ಉಳಿದಿದೆ , ಅದರಿಂದ ಎಷ್ಟು ದೂರ ಕ್ರಮಿಸಬಹುದು ಎಲ್ಲವನ್ನೂ ಅಂದಾಜಿಸಬಹುದು. ಇದರಲ್ಲಿ ಪೆಡಲ್ ಮಾದರಿಯ ವ್ಯವಸ್ಥೆ ಇದ್ದು, ಚಾರ್ಜ್ ಕಾಲಿ ಆದರೂ ಇದನ್ನು ಚಲಾಯಿಸಬಹುದು. ಕಂಪನಿ ಹೇಳುವ ಪ್ರಕಾರ ಇದರ ಅಂದಾಜು ವೆಚ್ಚ ಪ್ರತಿ ನಿಮಿಷಕ್ಕೆ 20 ಪೈಸೆ ಅಂತೆ ಕರ್ಚಾಗುತ್ತದೆ ಎಂದು. ಅದೇನೇ ಇರಲಿ ಈ ಹೊಸ ಹೊಸ ಆವಿಷ್ಕಾರದ ಫಲವಾಗಿ ಜನಗಳಿಗೆ ಅನುಕೂಲ ಆದರೆ ಸಾಕು.

Leave A Reply

Your email address will not be published.