ಬರೆದು ಇಟ್ಕೊಳಿ: ನಾಳೆಯಿಂದ ನಿಮ್ಮ ಅದೃಷ್ಟ ಶುರು: ನಾಲ್ಕು ರಾಶಿಯವರಿಗೆ ಬಂದೆ ಬಿಡ್ತು ಒಳ್ಳೆಯ ಕಾಲ. ಯಾವ್ಯಾವ ರಾಶಿಗಳಿಗೆ ಗೊತ್ತೇ??
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಸೆಪ್ಟೆಂಬರ್ 17ರಂದು ಬೆಳಗ್ಗೆ 7:11ಕ್ಕೆ ಸೂರ್ಯನು ಕನ್ಯಾರಾಶಿಗೆ ಪ್ರವೇಶ ಮಾಡಲಿದ್ದಾನೆ. ಸೂರ್ಯ ಕನ್ಯಾರಾಶಿಗೆ ಸಂಕ್ರಮಿಸುವುದರಿಂದ, ಕನ್ಯಾ ರಾಶಿಯವರಿಗೆ ಒಳ್ಳೆಯದಾಗುತ್ತದೆ. ಅಷ್ಟೇ ಅಲ್ಲದೆ ಇನ್ನು ನಾಲ್ಕು ರಾಶಿಯವರಿಗೆ ಉತ್ತಮ ಫಲ ಸಿಗುತ್ತದೆ. ಆ ನಾಲ್ಕು ರಾಶಿಗಳು ಯಾವುವು ಅವುಗಳಿಗೆ ಏನೆಲ್ಲಾ ಒಳ್ಳೆಯದಾಗುತ್ತದೆ ಎಂದು ತಿಳಿಸುತ್ತೇವೆ ನೋಡಿ..
ಕರ್ಕಾಟಕ ರಾಶಿ :-ಸೂರ್ಯನ ಸ್ಥಾನ ಬದಲಾವಣೆ ಈ ರಾಶಿಯವರಿಗೆ ಒಳ್ಳೆಯದಾಗುತ್ತದೆ. ಇವರ ಆರ್ಥಿಕ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಹಣಕಾಸಿನ ಸಮಸ್ಯೆಗಳು ದೂರವಾಗುತ್ತದೆ. ನಿಂತು ಹೋಗಿದ್ದ ಕೆಲಸಗಳು ಪೂರ್ತಿಯಾಗುತ್ತದೆ. ಉದ್ಯೋಗದಲ್ಲಿ ಯಶಸ್ಸು ಪಡೆಯುತ್ತೀರಿ, ಕೆಲಸದಲ್ಲಿ ಬಡ್ತಿ ಸಿಗುವ ಅವಕಾಶ ಇದೆ. ಆರೋಗ್ಯದ ಸಮಸ್ಯೆ ಚೆನ್ನಾಗಿರುತ್ತದೆ. ನಿಮಗೆ ಪ್ರಯಾಣ ಮಾಡುವ ಅವಕಾಶ ಸಿಗುತ್ತದೆ.
ವೃಶ್ಚಿಕ ರಾಶಿ :- ಈ ರಾಶಿಯವರ ಆದಾಯ ಹೆಚ್ಚಾಗಿ ಆರ್ಥಿಕ ಸಮಸ್ಯೆ ನಿವಾರಣೆ ಆಗುತ್ತದೆ. ಹೆಚ್ಚಿನ ಸಂಪತ್ತು ಗಳಿಸಿ, ಲಾಭ ಬರುತ್ತದೆ ಹಾಗೂ ಯಶಸ್ಸು ಪಡೆಯುತ್ತಾರೆ. ಇದರಿಂದ ವೃತ್ತಿಜೀವನದಲ್ಲಿ ಯಶಸ್ಸು ಪಡೆಯುತ್ತೀರಿ. ಕೌಟುಂಬಿಕ ಜೀವನಕ್ಕೂ ಒಳ್ಳೆಯದಾಗುತ್ತದೆ. ಒತ್ತಡ ಸಹ ಆಗುವುದಿಲ್ಲ. ನೀವು ತೆಗೆದುಕೊಳ್ಳುವ ಎಲ್ಲಾ ನಿರ್ಧಾರಕ್ಕೆ ತಂದೆಯ ಬೆಂಬಲ ಸಿಗುತ್ತದೆ. ಸಹೋದ್ಯೋಗಿಗಳ ಬೆಂಬಲ ಸಹ ಸಿಗುತ್ತದೆ.
ಧನು ರಾಶಿ :- ಈ ರಾಶಿಯವರು ಸ್ಥಳೀಯರ ಜೊತೆಗೆ ವ್ಯವ್ಯಾಹರ ಮಾಡುತ್ತಿದ್ದರೆ, ಇದು ಅವರಿಗೆ ಒಳ್ಳೆಯ ಸಮಯ ಆಗಿರುತ್ತದೆ. ವ್ಯಾಪಾರ ಹೆಚ್ಚಿಸಲು ಸಹಾಯ ಮಾಡುತ್ತದೆ. ಆದಾಯದ ಮೂಲಗಳು ಜಾಸ್ತಿಯಾಗುತ್ತದೆ. ಹಿಂದೆ ಇದ್ದ ಆರೋಗ್ಯದ ಸಮಸ್ಯೆಗಳು ಸುಧಾರಿಸುತ್ತದೆ.
ಮೇಷ ರಾಶಿ :- ಕೆಲಸದ ವಿಚಾರದಲ್ಲಿ ಇರುವ ಸಮಸ್ಯೆಗಳು ನಿವಾರಣೆ ಆಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೆ ಒಳ್ಳೆಯ ಫಲಿತಾಂಶ ಸಿಗುತ್ತದೆ. ಲಾಭ ಹೆಚ್ಚಾಗುತ್ತದೆ, ವ್ಯಾಪಾರದ ವಿಚಾರದಲ್ಲಿ ಇದು ಒಳ್ಳೆಯ ಸಮಯ ಆಗಿದೆ.