ಬಸವನ ಹುಳು ಸುಮ್ಮನೆ ಇರುತ್ತದೆ ಎಂದು ಕೊಳ್ಳಬೇಡಿ, ವರ್ಷಕ್ಕೆ ಲಕ್ಷ ಲಕ್ಷ ಜನರ ಪ್ರಾಣ ತೆಗೆಯಬಹುದು . ಎಷ್ಟು ಲಕ್ಷ ಗೊತ್ತೇ??

171

ಪ್ರಪಂಚದಲ್ಲಿ ಅನೇಕ ಅಪಾಯಕಾರಿ ಪ್ರಾಣಿಗಳಿವೆ ಎಂದು ನಮಗೆ ತಿಳಿದಿದೆ, ಅವುಗಳ ಹೆಸರು ಕೇಳಿದರೆ ಸಾಮಾನ್ಯವಾಗಿ ಎಲ್ಲರೂ ಚಿರತೆ, ಹುಲಿ, ಸಿಂಹ ಮುಂತಾದ ಹೆಸರುಗಳನ್ನು ಹೇಳುತ್ತಾರೆ. ಹರಿತವಾದ ಹಲ್ಲುಗಳು, ಉಗುರುಗಳು ಇರುವ ಪ್ರಾಣಿಗಳ ಅಪಾಯಕಾರಿ ಎಂದು ಹಲವರು ಅಂದುಕೊಳ್ಳುತ್ತಾರೆ. ಆದರೆ ನಿಜಕ್ಕೂ ಈ ಪ್ರಪಂಚದಲ್ಲಿ ಅತ್ಯಂತ ಅಪಾಯಕಾರಿ ಪ್ರಾಣಿ ಯಾವುದು ಗೊತ್ತಾ? ಆ ಪ್ರಾಣಿ ಪ್ರತಿ ವರ್ಷ ಎಷ್ಟು ಲಕ್ಷ ಜನರ ಪ್ರಾಣ ತೆಗೆದುಕೊಳ್ಳುತ್ತದೆ ಗೊತ್ತಾ? ಪ್ರಾಣಿ ತಜ್ಞರು ಹೇಳಿರುವುದನ್ನು ತಿಳಿಸುತ್ತೇವೆ ನೋಡಿ..

ಪ್ರಾಣಿ ತಜ್ಞರು ಪ್ರತಿವರ್ಷ ಪ್ರಾಣಿಗಳಿಂದ ನಡೆಯುವ ಹಲ್ಲೆಗಳು, ಅದರಿಂದ ಉಂಟಾಗುವ ಸಾವು ನೋವು, ಇದೆಲ್ಲವನ್ನು ಹುಡುಕಿ, ತಿಳಿದುಕೊಂಡು ಅತ್ಯಂತ ಅಪಾಯಕಾರಿ ಪ್ರಾಣಿ ಯಾವುದು ಎಂದು ತಿಳಿಸಿದ್ದಾರೆ. ತಜ್ಞರು ಹೇಳಿರುವ ಪ್ರಾಣಿ ಮತ್ಯಾವುದು ಅಲ್ಲ, ಬಸವನ ಹುಳ. ನೋಡಲು ಬಹಳ ಚಿಕ್ಕದಾಗಿರುವ ಈ ಹುಳ, ಹುಲಿ, ಸಿಂಹ ಇವುಗಳಿಗಿಂತ ಅಪಾಯಕಾರಿಯಾದದ್ದು. ತಜ್ಞರು ತಿಳಿಸಿರುವ ಮಾಹಿತಿಯ ಪ್ರಕಾರ ಬಸವನ ಹುಳ ಒಂದು ವರ್ಷದಲ್ಲಿ 2 ಲಕ್ಷ ಜನರ ಪ್ರಾಣ ತೆಗೆದುಕೊಳ್ಳುತ್ತದೆ ಎಂದು ತಿಳಿದುಬಂದಿದೆ.

ಈ ಜೀವಿ ತೆವಳಿಕೊಂಡು ಓಡಾಡುತ್ತದೆ, ಇದರ ಮೇಲೆ ಪರಾವಲಂಬಿ ಜೀವಿಗಳು ವಾಸ ಮಾಡುತ್ತದೆ, ಒಂದು ವೇಳೆ ಆ ಜೀವಿಗಳು ಮನುಷ್ಯರ ದೇಹಕ್ಕೆ ಪ್ರವೇಶ ಮಾಡಿದರೆ, ಅವುಗಳಿಂದಾಗಿ ಮನುಷ್ಯ ಸಾವನ್ನಪ್ಪುತ್ತಾನೆ. ಇದರಿಂದಾಗಿ ಸಣ್ಣದಾಗಿ ಕಾಣಿಸುವ ಬಸವನ ಹುಳು, ಅತ್ಯಂತ ಅಪಾಯಕಾರಿ ಪ್ರಾಣಿ ಆಗಿದೆ. ಇದು ನಮಗೆ ತಿಳಿಸುವುದು ಏನೆಂದರೆ, ಒಂದು ಪ್ರಾಣಿಯನ್ನು, ಅದರ ಗಾತ್ರ ನೋಡಿ ನಮಗೆ ಅದೇನು ಮಾಡುತ್ತದೆ ಎಂದು ಸುಲಭವಾಗಿ ತೆಗೆದುಕೊಳ್ಳಲು ಆಗುವುದಿಲ್ಲ, ನಮಗೆ ಗೊತ್ತಿಲ್ಲದ ಅನೇಕ ವಿಚಾರಗಳು ಈ ಪ್ರಪಂಚದಲ್ಲಿವೆ.

Leave A Reply

Your email address will not be published.