ಬಾಂಗ್ಲಾದೇಶದ ರಾಜಧಾನಿಯಲ್ಲಿ ದೇವಸ್ಥಾನವನ್ನು ಲೋಕಾರ್ಪಣೆ ಮಾಡಲಿರುವ ರಾಷ್ಟ್ರಪತಿ ಕೊವಿಂದ್. ಪಾಕಿಸ್ತಾನಿಯರಿಗೆ ತಡೆಯಲಾಗುತ್ತಿಲ್ಲ ಇದರ ಉರಿ. ಕಾರಣ ಏನು ಗೊತ್ತೇ?

1,410

ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಭಾರತದ ಪ್ರಧಾನಮಂತ್ರಿ ರಮಾನಾಥ್ ಕೊವಿಂದ್ ಅವರು ರಮಣ ಕಾಳಿ ದೇವಾಲಯವನ್ನು ಲೋಕಾರ್ಪಣೆ ಮಾಡಲಿದ್ದಾರೆ ಎಂದು ವಿದೇಶಾಂಗ ಮಂತ್ರಿ ಹರ್ಷ ವರ್ಧನ್ ಶೃಂಗಳ ಹೇಳಿದ್ದಾರೆ. ೧೯೭೧ ರಲ್ಲಿ ಸಂಪೂರ್ಣವಾಗಿ ಈ ಮಂದಿರವನ್ನು ಪಾಕಿಸ್ತಾನದ ಸೈನಿಕರು ಈ ಮಂದಿರವನ್ನು ಕೆ-ಡವಿದ್ದರು. ಆದರೆ ಈಗ ಈ ಮಂದಿರವನ್ನು ಇನ್ನೊಮ್ಮೆ ಪುನಃ ಪ್ರತಿಷ್ಠಾಪನೆ ಮಾಡಲಾಗಿದೆ. ಈ ಮಂದಿರ ಢಾಕಾದ ಮಧ್ಯ ಭಾಗದಲ್ಲಿ ನೆಲೆಯಾಗಿದೆ.

ಇದಕ್ಕೂ ಮೊದಲು ರಾಷ್ಟ್ರಪತಿ ಕೊವಿಂದ್ ಅವರು ತಮ್ಮ ಮೂರೂ ದಿನಗಳ ಬಾಂಗ್ಲಾದೇಶ ಪ್ರವಾಸದಲ್ಲಿರುತ್ತಾರೆ. ಇಲ್ಲಿ ಅವರಿಗೆ ೨೧ ತೋಪುಗಳ ಗೌರವ ನೀಡಲಾಗುತ್ತದೆ. ಅಲ್ಲದೆ ಭಾರತದ ಮೂರೂ ಸೇನೆಗಳ ೧೨೨ ಸದಸ್ಯರ ತಂಡ ಕೂಡ ಅಲ್ಲಿ ನಡೆಯಲಿರುವ ನ್ಯಾಷನಲ್ ಪರೇಡ್ ಅಲ್ಲಿ ಭಾಗವಹಿಸಲಿದೆ. ಅಲ್ಲದೆ ಮೂರೂ ದಿನಗಳ ಪ್ರವಾಸದಲ್ಲಿ ಅನೇಕ ಯೋಜನೆಗಳ ಉದ್ಘಾಟನೆ ಹಾಗು ದ್ವಿಪಕ್ಷೀಯ ಮಾತುಗಳು ಕೂಡ ನಡೆಯಲಿದೆ.

ಈ ಬಾಂಗ್ಲಾದೇಶದ ಢಾಕಾದಲ್ಲಿರುವ ಮಂದಿರ ೧೯೭೧ ಮಾರ್ಚ್ ೨೭ ರಂದು ಪಾಕಿಸ್ತಾನದ ಸೇನೆಯಿಂದ ನಷ್ಟವಾಗಿತ್ತು. ಅದು ಮಾತ್ರವಲ್ಲದೆ ದೇವಾಲಯದಲ್ಲಿದ್ದ ೧೦೦ ಕ್ಕೂ ಅಧಿಕ ಹಿಂದೂಗಳ ಸಾವು ಕೂಡ ನಡೆದಿತ್ತು. ಪಾಕಿಸ್ತಾನದ ಕೈಯಿಂದ ಬಾಂಗ್ಲಾದೇಶದ ಸ್ವಾತಂತ್ರ್ಯ ಕೊಡಿಸಿದ್ದರಲ್ಲಿ ಭಾರತದ ಬಹು ಮುಖ್ಯ ಪಾತ್ರ ಕೂಡ ಇತ್ತು. ಅದೇ ಕಾರಣಕ್ಕೆ ಭಾರತ ಹಾಗು ಬಾಂಗ್ಲಾದೇಶ ಗಳ ನಡುವೆ ಶಾಂತಿ ನೆಲೆಸಿದೆ. ಇದೀಗ ದೇವಾಲಯ ಮತ್ತೊಮ್ಮೆ ಲೋಕಾರ್ಪಣೆ ಮಾಡಿದ್ದೂ ಭಾರತ ಬಾಂಗ್ಲಾ ದ ನಡುವಿನ ಉತ್ತಮ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ. ಇದು ಪಾಕಿಸ್ತಾನಕ್ಕೆ ನೇರ ಎಚ್ಚರಿಕೆ ಕೂಡ ಆಗಿದೆ.

Leave A Reply

Your email address will not be published.