ಬಿಜೆಪಿ ಸಂಸದ ಸುಬ್ರಮಣ್ಯ ಸ್ವಾಮಿ ಅವರು ಮೋದಿಯನ್ನು ಯಾಕೆ ಭೇಟಿ ಆಗುವುದಿಲ್ಲ ಎಂಬ ಪ್ರಶ್ನೆಗೆ ಸ್ವಾಮಿ ಅವರ ಉತ್ತರ ಕೇಳಿದರೆ ನೀವೇ ಬೆಚ್ಚಿ ಬೀಳುತ್ತೀರಿ … ಹಾಗಾದರೆ ಸ್ವಾಮಿ ಅವರ ಆ ಉತ್ತರ ಏನು ??

400

ಸುಬ್ರಮಣ್ಯ ಸ್ವಾಮಿ ಎಂದಾಕ್ಷಣ ನೆನಪಾಗುವುದು ಅವರ ನೇರ ನುಡಿ ಮತ್ತು ಕಠೋರ ಮಾತುಗಳು. ಮತ್ತು ತಮ್ಮದೇ ಪಕ್ಷದ ಕೆಲವೊಂದು ನಿರ್ಧಾರಗಳನ್ನು ಕಟುವಾಗಿ ಟೀಕಿಸುವುದು. ಬಿಜೆಪಿ ಸಂಸದರಾದ ಇವರು ಮತ್ತು ಮೋದಿ ಒಂದೇ ವೇದಿಕೆಯಲ್ಲಿ ಕಾಣಸಿಗುವುದು ಅತೀ ವಿರಳ. ನಾವೆಂದೂ ಅವರನ್ನು ಒಟ್ಟಿಗೆ ಕಂಡ ನಿದರ್ಶನ ಬಾರಿ ಕಡಿಮೆ. ಕೇಂದ್ರದ ಕೆಲವೊಂದು ನಿರ್ಧಾರದ ವಿರುದ್ಧ ದ್ವನಿ ಎತ್ತಿದ ಪ್ರಸಂಗಗಳನ್ನು ಕೂಡ ನಾವು ಕಂಡಿದ್ದೇವೆ. ಕೊರೋನ ವೈರಸ್ ಲಸಿಕೆ ವಿಚಾರ ಇರಬಹುದು ಅಥವಾ ಪಾಕಿಸ್ತಾನದ ವಿರುದ್ಧ ತೆಗೆದುಕೊಂಡ ಕೆಲ ನಿರ್ಣಯಗಳು ಇರಬಹುದು ಇದಕ್ಕೆ ದ್ವಂದ್ವ ನಿಲುವನ್ನು ವ್ಯಕ್ತ ಪಡಿಸಿದ್ದಾರೆ . ಹಾಗಾದರೆ ತಮ್ಮದೇ ಪಕ್ಷದ ವಿರುದ್ಧ ಈ ರೀತಿಯ ಟೀಕೆಗಳಿಗೆ ಕಾರಣ ಏನೆಂಬುದು ಯಾರಿಗೂ ತಿಳಿದಿಲ್ಲ. ಆದರೆ ಇಂದು ಸ್ವಾಮಿ ಅವರು ಮಾಡಿದ ಟ್ವೀಟ್ ಒಂದು ಅದರತ್ತ ಕೈ ಬೆರಳು ಮಾಡಿ ತೋರಿಸುತ್ತಿದೆ. ಹಾಗಾದರೆ ಏನು ಆ ವಿಚಾರ ಯಾತಕ್ಕಾಗಿ ಅವರ ಸ್ವ ಪಕ್ಷದ ವಿರುದ್ಧ ಈ ನಿಲುವು ಎಂದು ತಿಳಿಯೋಣ.

ಟ್ವಿಟರ್ ಬಳಕೆದಾರ ಒಬ್ಬರು ಸ್ವಾಮಿ ಅವರನ್ನು ” ನೀವೊಬ್ಬ ಸಂಸದರಾಗಿ ಪ್ರಧಾನ ಮಂತ್ರಿಯನ್ನು ಯಾಕೆ ಬೇಟಿ ಮಾಡುವುದಿಲ್ಲ, ನಿಮ್ಮ ಕ್ಷೇತ್ರದ ಕುರಿತಾದ ಅಭಿವೃದ್ದಿ ವಿಷಯಕ್ಕಾಗಿ ಆದರೂ ಭೇಟಿ ಮಾಡಬಹುದಲ್ಲವೇ. 5 ನಿಮಿಷ ದೂರದಲ್ಲಿರುವ ಪ್ರಧಾನಿಯನ್ನು ನೀವು ಎಂದೂ ಭೇಟಿ ಆದದ್ದಿಲ್ಲ ಯಾಕೆ ? ” ಎಂದು ಕೇಳಿದ್ದರು.

ಅದಕ್ಕೆ ತೀಕ್ಷ್ಣವಾಗಿ ಉತ್ತರಿಸಿರುವ ಸ್ವಾಮಿ ಅವರು ” 5 ವರ್ಷಗಳ ಹಿಂದೆ ಅವರ ಭೇಟಿಗಾಗಿ ಅಪಾಯಿಂಟ್ಮೆಂಟ್ ಪಡೆಯಲು ಫೋನ್ ಮಾಡಿದ್ದೆ ಆ ಅಪಾಯಿಂಟ್ಮೆಂಟ್ ಇನ್ನೂ ಸಿಕ್ಕಿಲ್ಲ ಅದಕ್ಕಾಗಿ ಇನ್ನೂ ಭೇಟಿ ಮಾಡಿಲ್ಲ ಎಂದು ಉತ್ತರಿಸಿದ್ದಾರೆ”.

ಹಾಗೆಯೇ ಮುಂದುವರಿಸಿ ಇದೆ ಪ್ರಧಾನಿಯವರು ಮುಖ್ಯಮಂತ್ರಿ ಆಗಿದ್ದಾಗ ಅವರೇ ಕಾಲ್ ಮಾಡಿ ನನ್ನನ್ನು ಭೇಟಿಯಾಗಲು ಅಪಾಯಿಂಟ್ಮೆಂಟ್ ಕೇಳುತ್ತಿದ್ದರು. ಹಾಗೆ ಒಮ್ಮೆ ಅಮಿತ್ ಷಾ ಅವರು ನನ್ನ ಮನೆಗೆ ಬಂದು ಮೋದಿ ಅವರ ಕಾಲ್ ತೆಗೆಯುವಂತೆ ಹೇಳಿದ್ದರು ಎಂದು ಹೇಳಿದರು.

ಏನೇ ಆದರೂ ನಾನು ಎಂದಿಗೂ ಜನರ ಬಳಿ ಬಿಜೆಪಿ ಗೆ ಒಟ್ ನೀಡಿ ಗೆಲ್ಲಿಸಿ ಎಂದೇ ಕೇಳಿಕೊಳ್ಳುತ್ತೇನೆ ಯಾಕೆಂದರೆ ಬಿಜೆಪಿ ಒಂದೇ ಪಕ್ಷ ದೇಶದಲ್ಲಿ ಯಾವ ಕುಟುಂಬ ರಾಜಕಾರಣಕ್ಕೆ ಒಳಪಟ್ಟಿಲ್ಲ. ಅದಕ್ಕಾಗಿ ಮುಂದೆಯೂ ಕೂಡ ಬಿಜೆಪಿ ಅನ್ನು ಗೆಲ್ಲಿಸುವಂತೆ ಜನರಲ್ಲಿ ವಿನಂತಿಸುತ್ತೇನೆ ಎಂದರು. ಅದೇನೇ ವೈಮನಸಿದ್ದರು ಪಕ್ಷ ಎಂದು ಬಂದಾಗ ಎಲ್ಲವನ್ನೂ ಬದಿಗಿಟ್ಟು ದೇಶದ ಹಿತಕ್ಕಾಗಿ ದುಡಿಯುವುದು ಬಿಜೆಪಿಯ ರಕ್ತದಲ್ಲಿ ಇದೆ ಎಂಬುದು ಅವರ ಅಭಿಪ್ರಾಯ.

Leave A Reply

Your email address will not be published.