Kannada News: ಬುಲೆಟ್ ಬೈಕ್ ಅಲ್ಲಿ ಗೋಲ್ಗಪ್ಪಾ ಮಾರುತ್ತಾಳೆ ಈ ಬಿಟೆಕ್ ಮಾಡಿದ ಹುಡುಗಿ. ಇಂಟರ್ನೆಟ್ ಅಲ್ಲಿ ಸೆನ್ಸೇಷನ್ ಆಗಿದ್ದಾಳೆ ಈ ಯುವತಿ.

217

ನೀವು ಹಿಂದೆ MBA ಚೈವಾಲಾ ಎನ್ನುವ ಹೆಸರು ಕೇಳಿರುತ್ತೀರಾ. ಇಲ್ಲ ಅಂದ್ರೆ ನಾವು ಹೇಳುತ್ತೇವೆ. MBA ಮಾಡಿದ ಹುಡುಗ ಟೀ ಅಂಗಡಿ ತೆರೆದು ಒಳ್ಳೆ ಉದ್ಯಮ ಮಾಡಿದಲ್ಲದೆ ದೇಶದ ನಾನಾ ಭಾಗಗಳಲ್ಲಿ ಈ ಹೆಸರಿನ ಚಹಾ ದ ಅಂಗಡಿ ತೆಗೆದು ಒಂದು ದೊಡ್ಡ ಟೀ ಉದ್ಯಮವನ್ನೇ ಸ್ಥಾಪನೆ ಮಾಡಿದ್ದಾನೆ. ಇದೀಗ ಇಂತಹ ಲಿಸ್ಟ್ ಗೆ ಮಾರ್ಕೆಟ್ ಅಲ್ಲಿ ಬಿಟೆಕ್ ಗೋಲ್ಗಪ್ಪಾ ಎನ್ನುವ ಹೊಸ ಹುಡುಗಿ ಎಂಟರ್ ಆಗಿದ್ದಾಳೆ.

ದೆಹಲಿ ಅಲ್ಲಿ ಇರುವ ಈ ಯುವತಿ ಪಾನಿ ಪುರಿ ಮಾರಾಟ ಮಾಡುತ್ತಿದ್ದಾಳೆ. ಆದರೆ ತನ್ನದೇ ಹೊಸ ಸ್ಟೈಲ್ ಅಲ್ಲಿ. ಬಿಟೆಕ್ ಪದವಿ ಪೂರ್ತಿ ಗೊಳಿಸಿದ ನಂತರ ಈಕೆ ಪಾನಿಪುರಿ ಮಾರಾಟ ಮಾಡುವ ಕೆಲಸಕ್ಕೆ ಕೈ ಹಾಕಿದ್ದು ಇದೀಗ ಉತ್ತಮವಾಗಿ ದುಡಿಯುತ್ತಿದ್ದಾಳೆ. ಈಕೆಯ ಹೆಸರು ತಾಪಸಿ ಉಪಾಧ್ಯಾಯ್. ಗೋಲ್ಗಪ್ಪಾ ಸ್ಟಾಲ್ ಅನ್ನು ಹೊಸ ಮಾದರಿಯ ಡಿಸೈನ್ ಮಾಡಿ ಗೋಲ್ಗಪ್ಪಾ ಜೊತೆ ಪಾನಿಪುರಿ ಕೂಡ ಮಾರಾಟ ಮಾಡುತ್ತಿದ್ದಾಳೆ. ಈ ಹೊಸ ಸ್ಟಾಲ್ ಇರುವುದು ಬುಲೆಟ್ ಗಾಡಿಯಲ್ಲಿ. ಗಾಡಿ ಗೆ ಸಿಕ್ಕಿಸಿ ತನ್ನ ಸ್ಟಾಲ್ ಅನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸುತ್ತಾಳೆ.

ಈ ತಾಪಸಿ ಉಪಾಧ್ಯಾಯ್ ಗೋಲ್ಗಪ್ಪಾ ಮಾರಾಟ ಮಾಡುವುದಲ್ಲದೆ, ತನ್ನದೇ ಸ್ವಂತ ಒಂದು ವೆಬ್ಸೈಟ್ ಕೂಡ ನಡೆಸುತ್ತಿದ್ದಾರೆ. ತಮ್ಮ ಈ ಗೋಲ್ಗಪ್ಪಾ ಸ್ಟಾಲ್ ಬಗೆಗಿನ ಮಾಹಿತಿ ಹಾಗು ಇದರ ಫ್ರಾಂಚೈಸ್ ಬಗೆ ಮಾಹಿತಿ ನೀಡುತ್ತಾಳೆ. ದೆಹಲಿಯಲ್ಲಿ ಇವರು ತುಂಬಾ ಚಿರಪರಿಚಿತರಾಗಿದ್ದಾರೆ ಹಾಗೇನೇ ಅನೇಕರಿಗೆ ಒಂದು ಮಾದರಿ ಕೂಡ ಆಗಿದ್ದಾರೆ. ಭಾರತದಲ್ಲಿ ಹೋಟೆಲ್ ಹಾಗು ತಿನ್ನುವ ಉದ್ಯಮ ಇಂದಿಗೂ ಬರಿದಾಗುವುದಿಲ್ಲ. ಇದರಿಂದ ಅನೇಕ ಉದ್ಯಮಗಳು ತುಂಬಾ ಲಾಭ ಗಳಿಸಿದೆ. ಇದೀಗ ಇಂತಹ ಸರದಿಯಲ್ಲಿ ತಾಪಸಿ ಉಪಾಧ್ಯಾಯ್ ಕೂಡ ಇದ್ದಾರೆ.

Leave A Reply

Your email address will not be published.