ಬ್ಯಾಂಕ್ ಆಫ್ ಮಹಾಾಷ್ಟ್ರ ದಲ್ಲಿ ಉದ್ಯೋಗ ಅವಕಾಶ ಐವತ್ತು ೫೦,೦೦೦ ದವರೆಗೆ ಸಂಬಳ. ಯಾರೆಲ್ಲ ಅರ್ಜಿ ಸಲ್ಲಿಸಬಹುದು ಹಾಗು ಹೇಗೆ ಸಲ್ಲಿಸುವುದು ಗೊತ್ತೇ?
ಕಳೆದ ಎರಡು ವರ್ಷಗಳಿಂದ ಕೋರೋಣ ಇದ್ದ ಕಾರಣ ಅನೇಕ ಸರಕಾರಿ ಹಾಗು ಖಾಸಗಿ ಸಂಸ್ಥೆಗಳು ಯಾವುದೇ ಕೆಲಸಕ್ಕೆ ಭಾರ್ತಿ ಮಾಡುವ ಅಹ್ವಾನ ಮಾಡಿಲ್ಲ. ಅನೇಕರು ಕೆಲಸಕ್ಕಾಗಿ ಕಾಯುತ್ತಿದ್ದರು. ಇದೀಗ ಸರಕಾರಿ ಕೆಲಸಗಳಿಗೆ ಭಾರ್ತಿ ಕೆಲಸ ನಡೆಯುತ್ತಿದೆ. ಬ್ಯಾಂಕ್ ಆಫ್ ಮಾರಾಷ್ಟ್ರ 2022 ರ ಸಾಲಿನ ನೇಮಕಾತಿ ಅಧಿಸೂಚನೆ ಹೊರಡಿಸಿದ್ದು. ಖಾಲಿ ಇರುವ 500 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ವಿದ್ಯಾರ್ಹತೆ ಮಟ್ಟ ಸರಿಹೊಂದುವ ವಿಧ್ಯಾರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಬಹುದು. ವಿವರಗಳು ಈ ಕೆಳಗಿನಂತಿವೆ.
ಇಲಾಖೆ ಹೆಸರು ಬ್ಯಾಂಕ್ ಆಫ್ ಮಹರಾಷ್ಟ್ರ, ಹುದ್ದೆಗಳು- ಜನರಲಿಸ್ಟ್ ಅಧಿಕಾರಿ ಸ್ಕೇಲ್ II ,III, ಒಟ್ಟು ಹುದ್ದೆಗಳು 500,ಅರ್ಜಿ ಸಲ್ಲಿಸುವ ಬಗೆ -ಆನ್ಲೈನ್. ವಿದ್ಯಾರ್ಹತೆ :ಈ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಪದವಿ ಪರೀಕ್ಷೆಯನ್ನು ಶೇಕಡಾ 60% ದಲ್ಲಿ ಪಾಸ್ ಮಾಡಿರಬೇಕು. ಅಥವಾ ಸಿ ಎ/ಸಿಎಂಎ/ಸಿ ಎಫ್ ಎ ಪದವಿ ಹೊಂದಿರಬೇಕು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 38 ಮತ್ತು ಕನಿಷ್ಠ ವಯೋಮಿತಿ 25 ವರ್ಷ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ , ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ವಿನಾಯಿತಿ ನೀಡಲಾಗಿದೆ.
ಆಯ್ಕೆ ಆದ ಅಭ್ಯರ್ಥಿಗಳು ಆರಂಭಿಕವಾಗಿ 48170 ರಿಂದ 78230 ರೂಪಾಯಿ ವರೆಗೂ ವೇತನ ಶ್ರೇಣಿ ಇದೆ. ಸಾಮಾನ್ಯ /ಆರ್ಥಿಕವಾಗಿ ಹಿಂದುಳಿದ/ಒಬಿಸಿ ಅಭ್ಯರ್ಥಿಗಳಿಗೆ 1180. ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಗೆ 118.ಅಂಗವಿಕಲ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಆನ್ಲೈನ್ ಪರೀಕ್ಷೆ ನೀಡಬೇಕು ಅದರಲ್ಲಿ ತೇರ್ಗಡೆ ಹೊಂದಿದವರಿಗೆ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು. ಹೆಚ್ಚಿನ ಮಾಹಿತಿಗಾಗಿ ಬ್ಯಾಂಕ್ ಆಫ್ ಮಹರಾಷ್ಟ್ರದ ವೆಬ್ಸೈಟ್ ಚೆಕ್ ಮಾಡಿರಿ.