ಬ್ಯಾಂಕ್ ನಲ್ಲಿನ ಕೆಲಸ ಬಿಟ್ಟು ಮಾಡಿದ ಈ ಉದ್ಯೋಗದಿಂದ ಇವರು ಇಂದು ಲಕ್ಷಾಂತರ ಸಂಪಾದಿಸುತ್ತಿದ್ದಾರೆ. ಯಾವುದು ಆ ಉದ್ಯೋಗ?

470

ಜೀವನದಲ್ಲಿ ಒಂದು ಬ್ಯಾಂಕ್ ನಲ್ಲಿ ಉದ್ಯೋಗ ಪಡೆಯಬೇಕು ಎಂದು ಎಲ್ಲರ ಆಸೆ ಇದ್ದೇ ಇರುತ್ತದೆ. ಆದರೆ ನಾವು ಇಂದು ನೋಡಲು ಹೋರಾಟ ಈ ಕಥೆ ಬ್ಯಾಂಕ್ ನಲ್ಲಿ ಮಾಡುತ್ತಿದ್ದ ಉದ್ಯೋಗ ಬಿಟ್ಟು ಸಾಧನೆ ಮಾಡಿದ ಕಥೆ. ಹೌದು ವಿಚಿತ್ರ ಎನಿಸಿದರೂ ಇದು ಸತ್ಯ ಸಂಗತಿ. ಜೀವನದಲ್ಲಿ ಬದಲಾವಣೆಗಳು ಅನಿವಾರ್ಯ, ಆ ಬದಲಾವಣೆ ಮುಂದೊಂದು ದಿನ ಯಶಸ್ಸನ್ನು ತಂದು ಕೊಟ್ಟಾಗ ಆ ಬದಲಾವಣೆಯ ಮಹತ್ವ ತಿಳಿಯುತ್ತದೆ.

ಕಾರೋನ ಖಾಯಿಲೆ ಎಲ್ಲರನ್ನೂ ಮೇಲೆ ಕೆಳಗೆ ಮಾಡಿದ ವಿಚಾರ ಇದೀಗ ಎಲ್ಲರಿಗೂ ಗೊತ್ತು. ಅದರ ಏಟಿನಿಂದ ಇನ್ನು ಕೆಲವರು ಮೇಲೆ ಬರಲೇ ಇಲ್ಲ. ಅದೇನೇ ಆಗಲಿ ಆದರೆ ಅದರಿಂದಾಗಿ ಕೆಲವೊಂದಿಷ್ಟು ಜನ ತಮ್ಮ ಮೂಲ ಕಸುಬಿಗೆ ಬಂದು ತಮ್ಮ ಜೀವನವನ್ನು ಕಟ್ಟಿ ಕೊಂಡಿದ್ದಾರೆ. ಇವರ ಹೆಸರು ಕಪಿಲ್ ಇವರು ಬ್ಯಾಂಕ್ ನ ಉದ್ಯೋಗಿ. ಆದರೆ ಕಳೆದ ಲಾಕ್ ಡೌನ್ ಸಮಯದಲ್ಲಿ ಕೆಲಸ ಇದ್ದರೂ ತಮ್ಮ ಈ ಜಂಜಾಟದಿಂದ ಬೇಸತ್ತು ಕೆಲಸ ಬಿಟ್ಟು ತಮ್ಮ ಕುಲ ಕಸುಬು ಕೃಷಿಯ ಬೆನ್ನತ್ತಿ ಹೋದವರು. ಹೌದು ಕೃಷಿ ಮಾಡಿ ಜೀವನ ನಡೆಸಿದವರು ಸೋತದ್ದು ಬಾರಿ ಕಡಿಮೆ.

ಅದೆಷ್ಟೋ ಅಡೆತಡೆ ಬಂದರೂ ಕೂಡ ಅದನ್ನು ಮೆಟ್ಟಿ ನಿಂತು ಯಶಸ್ವಿ ರೈ ಅದೆಷ್ಟೋ ಉದಾಹರಣೆಗಳು ಇವೆ. ಹಾಗೆಯೇ ಇಂದಿನ ಈ ರೈತನ ಕಥೆ. ಇವರು ತಮ್ಮ ಇದ್ದ ಜಮೀನಿನಲ್ಲಿ ಸೀಬೆ ಹಣ್ಣಿನ ಕೃಷಿ ಮಾಡಿ ಲಾಭ ಗಳಿಸುತ್ತಿದ್ದಾರೆ. ಇದೀಗ ಅವರ ಸೀಬೆ ಹಣ್ಣಿಗೆ ಬೇಡಿಕೆ ಹೆಚ್ಚಿದ್ದು ಬೇರೆ ಬೇರೆ ರಾಜ್ಯಗಳಿಂದ ಬಂದು ಖರೀದಿಸುತ್ತಿದ್ದಾರೆ. ಅದಲ್ಲದೆ ಅದೆಷ್ಟೋ ಯುವ ರೈತರು ಕೂಡ ಬಂದು ಕೃಷಿ ಬಗೆಗಿನ ಮಾಹಿತಿ ಪಡೆಯುತ್ತಿದ್ದಾರೆ. ಇದರಿಂದಾಗಿ ಅದೆಷ್ಟೋ ಯುವ ಜನತೆ ಕೃಷಿ ಕಡೆಗೆ ಒಲವು ತೋರುವಂತೆ ಮಾಡಿದ್ದಾರೆ.

Leave A Reply

Your email address will not be published.