ಭಾರತಕ್ಕೆ ಕೊಡುತ್ತಿರುವ ಮರ್ಯಾದೆ ಜಾಸ್ತಿ ಆಗುತ್ತಿದೆ ಎಂದು ಇಂಗ್ಲೆಂಡ್ ಗೆ ದೂರು ನೀಡಿದ ಟರ್ಕಿ. ಅಷ್ಟಕ್ಕೂ ಟರ್ಕಿ ಸಮಸ್ಯೆಯಾದರೂ ಏನು?

283

ಪಾಕಿಸ್ತಾನದ ನೆಚ್ಚಿನ ಮಿತ್ರ ದೇಶ ಟರ್ಕಿ ಭಾರತಕ್ಕೆ ನೀಡುತ್ತಿರುವ ವಿಶೇಷ ಸ್ಥಾನಮಾನಕ್ಕೆ ಇಂಗ್ಲೆಂಡ್ ಗೆ ದೂರು ನೀಡಿದೆ. ಭಾರತಕ್ಕೆ ಮಾತ್ರ ಅಲ್ಲದೆ ಈ ವಿಶೇಷ ಗೌರವ ಇತರೆ ಎರಡು ದೇಶಗಳಾದ ಇಂಗ್ಲೆಂಡ್ ಹಾಗು ಅಮೆರಿಕಾಗೆ ಕೂಡ ನೀಡಲಾಗಿತ್ತು. ಆದರೆ ಭಾರತಕ್ಕೆ ನೀಡಿರುವ ಈ ಗೌರವಕ್ಕೆ ಟರ್ಕಿ ಅಧ್ಯಕ್ಷ ಕೆಂಡಾಮಂಡಲವಾಗಿದ್ದಾನೆ. ಅಷ್ಟಕ್ಕೂ ಭಾರತಕ್ಕೆ ನೀಡಲಾದ ವಿಶೇಷ ಗೌರವವೇನು?

ಸ್ಕಾಟ್ಲೆಂಡ್ ನ ಗ್ಲಾಸ್ಗೋ ನಲ್ಲಿ ನಡೆದ cop26 ಸಮಾವೇಶದಲ್ಲಿ ಭಾರತಕ್ಕೆ ಉಳಿಯಲು ಪ್ರತ್ಯೇಕ ಹೋಟೆಲ್ ಒಂದನ್ನು ನೀಡಲಾಗಿತ್ತು. ಈ ತರ ಪ್ರತ್ಯೇಕ ಹೋಟೆಲ್ ಇಂಗ್ಲೆಂಡ್ ಹಾಗು ಅಮೇರಿಕ ದೇಶಗಳಿಗೂ ಕೂಡ ನೀಡಲಾಗಿತ್ತು. ಆದರೆ ಉಳಿದ ದೇಶಗಳ ಅಧ್ಯಕ್ಷರು ಹಾಗು ಅಧಿಕಾರಿಗಳಿಗೆ ನೀಡಲಾಗಿದ್ದ ಹೋಟೆಲ್ ರೂಮ್ ಅನ್ನು ಹಂಚಿಕೊಳ್ಳಲು ಹೇಳಿತ್ತು. ಇದು ಟರ್ಕಿ ಅಧ್ಯಕ್ಷರ ಪಿತ್ತ ನೆತ್ತಿಗೇರುವಂತೆ ಮಾಡಿದೆ. ಕ್ಲೈಮೇಟ್ ಚೇಂಜ್ ಬಗ್ಗೆ ಭಾರತ ವಿಶೇಷ ಕೆಲಸ ಹಾಗು ನಿರ್ಧಾರ ತೆಗೆದುಕೊಂಡಿದೆ ಆದ್ದರಿಂದ ಭಾರತದ ಪ್ರಧಾನಿ ಮೋದಿ ಗೆ ವಿಶೇಷ ಸ್ಥಾನಮಾನ ನೀಡಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ.

ಟರ್ಕಿ ದೇಶ ಪಾಕ್ ನ ನಿಕಟ ಸ್ನೇಹಿತನಾಗಿದ್ದು ಭಾರತದ ವಿರುದ್ಧ ಅನೇಕ ಹೇಳಿಕೆಗಳನ್ನು ನೀಡುತಿತ್ತು. ಈಗ ಭಾರತಕ್ಕೆ ಯಾವುದೇ ವಿಶೇಷ ಸ್ಥಾನಮಾನ ನೀಡಿದರು ಟರ್ಕಿ ಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಭಾರತ ವಿಶ್ವ ಮಟ್ಟದಲ್ಲಿ ತನ್ನ ಪ್ರಭಾವ ಹೆಚ್ಚಿಸಿರುವುದು ಇದೆಲ್ಲದಕ್ಕೆ ಕಾರಣವಾಗಿದೆ. ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ತೆಗೆದಾಗಲೂ ಈ ಟರ್ಕಿ ಕ್ಯಾತೆ ತೆಗೆದಿತ್ತು. ಆದರೆ ಭಾರತ ಇದಕ್ಕೆ ಸೊಪ್ಪು ಹಾಕಿರಲಿಲ್ಲ. ಈಗ ಈ ಸಣ್ಣಪುಟ್ಟ ವಿಷಯಕ್ಕೆ ಇಂಗ್ಲೆಂಡ್ ಬಳಿ ದೂರು ನೀಡುತ್ತಿರುವುದು ಟರ್ಕಿ ಎಷ್ಟು ಭತ್ತದ ವಿರುದ್ಧ ಹತಾಶೆಗೊಂಡಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.

Leave A Reply

Your email address will not be published.