ಭಾರತಕ್ಕೆ ತಲುಪಿದ ನೀರು ಹಾಕಿ ಚಲಿಸಬಲ್ಲ ಕಾರು. ಯಾವಾಗ ಸೇಲ್ ಶುರುವಾಗಬಹುದು? ಹೆಚ್ಚಾಗುತ್ತಿರುವ ಪೆಟ್ರೋಲ್ ಬೆಳೆಗೆ ಬೀಳುತ್ತಾ ಕಡಿವಾಣ?
ಹೆಚ್ಚುತ್ತಿರುವ ಪೆಟ್ರೋಲ್ ಡೀಸೆಲ್ ಬೆಲೆ ನೋಡಿ ನೋಡಿ ನಿಮ್ಮ ಮನಸಲ್ಲಿ ನೀರಿನಿಂದ ಅಥವಾ ಗಾಳಿಯಿಂದ ಚಲಿಸುವ ವಾಹನದ ಬಗ್ಗೆ ಆಲೋಚನೆ ಬಂದಿರಬಹುದು. ಆ ಸಮಯಕ್ಕೆ ದೇವರು ನಿಮ್ಮ ಆಲೋಚನೆಗೆ ತಥಾಸ್ತು ಅಂದಿರಬೇಕು ಅನಿಸ್ತದೆ. ಈಗ ಆ ಆಲೋಚನೆ ನಿಜ ಆಗುತ್ತಿದೆ. ಹೆಚ್ಚುತ್ತಿರುವ ಪೆಟ್ರೋಲ್ ಡೀಸೆಲ್ ಬೆಲೆ ಜನರನ್ನು ಚಿಂತೆಗೀಡು ಮಾಡಿದೆ. ತಮ್ಮ ಖರ್ಚು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೀಗ ಅದಕ್ಕೆ ಫುಲ್ಸ್ಟಾಪ್ ಇಡುವ ಸಮಯ ಬಂದಿದೆ.
ಇನ್ನು ಮುಂದೆ ನೀರಿನಿಂದ ಚಲಿಸುವ ಕಾರನ್ನು ಕೂಡ ನೀವು ಚಲಾಯಿಸಬಹದು. ಈ ಕಾರು ಭಾರತಕ್ಕೂ ಬಂದಿದೆ. ಕೇಂದ್ರ ಮಂತ್ರಿಗಳಾದ ನಿತಿನ್ ಗಡ್ಕರಿ ಒಂದು ಪೈಲಟ್ ಪ್ರಾಜೆಕ್ಟ್ ಗಾಗಿ ಫರೀದಾಬಾದ್ ನ ತೈಲ ಸಂಶೋಧನಾ ಕೇಂದ್ರದ ಗ್ರೀನ್ ಹೈಡ್ರೋಜನ್ ನ ಮೂಲಕ ಚಲಿಸುವ ಕಾರು ಬಂದಿದೆ ಎಂದು ಹೇಳಿದ್ದಾರೆ. ದೆಹಲಿಯಲ್ಲಿ ಈ ಕಾರನ್ನು ಚಾಲನೆ ಮಾಡಲಾಗುತ್ತದೆ. ಇದರಿಂದ ನೀರಿನಿಂದಲೂ ಕಾರು ಚಲಸುತ್ತದೆ ಎಂದು ಜನರಿಗೆ ವಿಶ್ವಾಸ ಬರುತ್ತದೆ ಎಂದು ಹೇಳಿದ್ದಾರೆ ನಿತಿನ್ ಗಡ್ಕರಿ.
ಈ ಗ್ರೀನ್ ಎನರ್ಜಿ ಚರಂಡಿ ನೀರು, ಕೊಳೆತ ವಸ್ತು ಗಳಿಂದ ಮಾಡಲ್ಪಟ್ಟಿದೆ. ಗಡ್ಕರಿ ಅವರಿಂದ ೭ ವರ್ಷಗಳ ಹಿಂದೆ ನಾಗ್ಪುರದಲ್ಲಿ ಪ್ರಾರಂಬಿಸಲ್ಪಟ್ಟಿದ್ದ ಈ ಯೋಜನೆ ಇಂದ ಚರಂಡಿ ನೀರನ್ನು ವಿದ್ಯುತ್ ತಯಾರಿಸಲು ಉಪಯೋಗಿಸಿ ಮಹಾರಾಷ್ಟ್ರಕ್ಕೆ ಕಳುಹಿಸಿದೆ. ಇದರಿಂದ ಸುಮಾರು ೩೨೫ ಕೋಟಿ ಗಳಷ್ಟು ಆದಾಯ ಸರಕಾರಕ್ಕೆ ಸಿಕ್ಕಿದೆ. ವಿಜ್ಞಾನ ಎಷ್ಟು ಮುಂದುವರೆದಿದೆ ಎಂದರೆ ಇದೀಗ ಕಾರಿನಿಂದ ಕಾರು ಕೂಡ ಚಲಾಯಿಸಬಲ್ಲ ಫಾರ್ಮುಲಾ ಕಂಡುಹುಡುಕಿದೆ. ಈ ಕಾರು ಕೂಡ ಭಾರತಕ್ಕೆ ತಲುಪಿದೆ. ಆದರೆ ಇದು ಸದ್ಯಕ್ಕೆ ಮಾರುಕಟ್ಟೆಗೆ ಬರುತ್ತಿಲ್ಲ. ಇದು ಮಾರುಕಟ್ಟೆಯಲ್ಲಿ ಜನರ ಉಪಯೋಗಕ್ಕೆ ಯಾವಾಗ ಬರುತ್ತದೆ ಅದು ಸದ್ಯಕ್ಕೆ ತಿಳಿದು ಬಂದಿಲ್ಲ.
ನಿತಿನ್ ಗಡ್ಕರಿ ಪ್ರಕಾರ ಹೈಡ್ರೋಜನ್ ಮೂಲಕ ಚಲಿಸುವ ವಾಹನ ನೀರಿನ ಬಳಕೆ ಮೂಲಕ ಚಲಾಯಿಸಬಹುದು. ನೀರಿನ ಆಮ್ಲಜನಕ ಹಾಗು ಹೈಡ್ರೋಜನ್ ಅನ್ನು ಬೇರ್ಪಡಿಸಲಾಗುತ್ತದೆ ನಂತರ ಗ್ರೀನ್ ಹೈಡ್ರೋಜನ್ ರೀತಿ ಬಳಸಲಾಗುತ್ತದೆ. ಈ ಯೋಜನೆಗೆ ಭರತ್ ಪೆಟ್ರೋಲಿಯಂ, ಇಂಡಿಯನ್ ಆಯಿಲ್, ಓ ಏನ್ ಜಿ ಸಿ ಹಾಗು ಏನ್ ಟಿ ಪಿ ಸಿ ನಂತಹ ಸರಕಾರ ಸ್ವಾಮ್ಯದ ಬೃಹತ್ ಕಂಪನಿಗಳು ಸಹಾಯ ಮಾಡಲಿದೆ. ಸದ್ಯಕ್ಕೆ ಸಂಶೋಧನೆಗೆ ನೀರು ಮೂಲಕ ಚಲಿಸುವ ಕಾರನ್ನು ಆಮದು ಮಾಡಿಕೊಂಡಿದೆ. ಸದ್ಯಕ್ಕೆ ಮಾರುಕಟ್ಟೆಗೆ ಬರುವ ವಿಶ್ವಾಸ ಕೂಡ ವ್ಯಕ್ತ ಪಡಿಸಿದ್ದಾರೆ.