ಭಾರತದಲ್ಲಿದ್ದು ಅಮೇರಿಕಾದವರಿಗೆ ೨೧೦೦ ಕೋಟಿ ರೂಪಾಯಿ ಪಂಗನಾಮ ಹಾಕಿದ. ಆತ ಮಾಡಿದಾದರೂ ಏನು ಗೊತ್ತೇ?

6,856

ಒಳ್ಳೆಯವರು ಎಂದ ಮೇಲೆ ಕೆಟ್ಟವರು ಕೂಡ ಈ ಭೂಮಿಯ ಮೇಲೆ ಇದ್ದೆ ಇರುತ್ತಾರೆ. ಅದೆಷ್ಟೋ ಜನ ಹೊಟ್ಟೆಪಾಡಿಗಾಗಿ ಮೋಸ ಮಾಡುತ್ತಾರೆ, ಆದರೆ ಕೆಲವರು ಮೋಸ ಮಾಡಬೇಕು ಎಂದೇ ಮೋಸ ಮಾಡುತ್ತಾರೆ. ನಾವು ಇಂದು ತಿಳಿಯಲು ಹೊರಟ ಈ ಹುಡುಗನ ಕಥೆ ಕೂಡ ಅಂತಹುದು. ಭಾರತದ ಈ ಹುಡುಗ ಭಾರತದಲ್ಲೇ ಇದ್ದುಕೊಂಡು ಅಮೆರಿಕಾದ ಜನರಿಗೆ ಬರೋಬ್ಬರಿ 2100 ಕೋಟಿ ರೂಪಾಯಿ ಪಂಗನಾಮ ಹಾಕಿದ್ದಾನೆ. ನಿಮಗೆಲ್ಲ ಅಚ್ಚರಿ ಎನಿಸಿದರೂ ಇದು ಸತ್ಯ ಸಂಗತಿ. ಹಾಗಾದರೆ ಈತ ಯಾರು ಈತ ಹೆಣೆದ ಮೋಸದ ಜಾರವಾದರು ಏನು ಬನ್ನಿ ತಿಳಿಯೋಣ.

ಈತನ ಹೆಸರು ಸಾಗರ್ ಟಕ್ಕರ್ ಮೂಲತಃ ಈತ ಮುಂಬಯಿ , ಬರೀ 24 ವರ್ಷ ವಯಸ್ಸು. ಈತ ಮೋಸ ಮಾಡಿದ್ದು ಅಮೆರಿಕಾಗೆ ಹೋಗಿ ಅಲ್ಲ ಬದಲಾಗಿ ಭಾರತದಲ್ಲೇ ಇದ್ದುಕೊಂಡು ಈ ಕೃತ್ಯ ಎಸಗಿದ್ದಾನೆ. ಈತ ಭಾರತದಲ್ಲಿ IRS ಎಂಬ ಕಂಪನಿಯ ಹೆಸರಲ್ಲಿ ಈ ಮೋಸ ಮಾಡಿದ್ದಾನೆ. ಹಾಗಾದರೆ ಇದರಲ್ಲಿ ಇವನೊಬ್ಬ ಅಲ್ಲ ಒಂದು ದೊಡ್ಡ ಗುಂಪೇ ಇದೆ, ಆದರೆ ಆ ಗುಂಪಿನ ಯಾರಿಗೂ ಗೊತ್ತಿಲ್ಲ ಸಾಗರ್ ಈ ರೀತಿಯ ಮೋಸದ ಜಾಲ ಹೆಣೆದಿದ್ದಾನೆ ಎಂದು. IRS ಎಂಬ ಅಮೆರಿಕಾ ಮೂಲದ ಕಾಲ್ ಸೆಂಟರ್ ಕಂಪನಿ ಎಂದು ಪರಿಚಯಿಸಿ ಒಳ್ಳೆಯ ಮಾತುಗಾರಿಕೆ ಉಳ್ಳವರನ್ನ ಆಯ್ಕೆ ಮಾಡಿಕೊಂಡು ಅವರಿಗೆ ಸ್ಕ್ರಿಪ್ಟ್ ಮಾದರಿಯಲ್ಲಿ ಕೊಟ್ಟು ಜನರಿಗೆ ಫೋನ್ ಮಾಡಿಸಲಾಗುತ್ತಿತ್ತು.

ಫೋನ್ ಕರೆ ಮಾಡಿ tax ಡಿಪಾರ್ಟ್ಮೆಂಟ್ ನಿಂದ ಮಾತನಾಡುತ್ತಿದ್ದು, ನೀವು ಸರಿಯಾಗಿ tax ತುಂಬಿಲ್ಲ ಅದಕ್ಕಾಗಿ ನಮ್ಮ ಕಂಪನಿ ಮೂಲಕ ನಿಮ್ಮ ಸರ್ಕಾರ ನಿಮಗೆ ಕರೆ ಮಾಡುತ್ತಿದೆ. ನೀವು ಇದೆ ಕಾರಣಕ್ಕೆ ಜೈಲು ಕೂಡ ಸೇರಬಹುದು. ಜೈಲು ಸೇರುವುದು ಬೇದವಾದಲ್ಲಿ ಕೋರ್ಟ್ ಸೆಟಲ್ಮೆಂಟ್ ಮಾಡಿಕೊಳ್ಳುವ ಮೂಲಕ ಇದರಿಂದ ಪಾರಾಗಬಹುದು ಎಂದು ಹೇಳಿ ಹಣ ಪಿಕಿಸುತ್ತಿತ್ತು. ಆದರೆ ಈತ ಪಡೆದದ್ದು ಸಣ್ಣ ಮೊತ್ತ ಅಲ್ಲ ಬರೋಬ್ಬರಿ 2100 ಕೋಟಿ ಗಳಿಸಿದ್ದ. ಈ ರೀತಿಯಾಗಿ ಮೋಸ ಹೋದವರು 6500 ಕ್ಕಿಂತಲೂ ಹೆಚ್ಚು ಜನರು. ಆದರೆ ಅಮೆರಿಕಾದಲ್ಲಿ ಇದು ದೊಡ್ಡ ಸಂಚಲನ ಮೂಡಿಸಿತ್ತು. ಕೇಸ್ ದಾಖಲಾಯಿತು, ಇನ್ವೆಸ್ಟಿಗೇಷನ್ ನಡೆಸಿದಾಗ ಇದರ ಮೂಲ ಭಾರತದಲ್ಲಿ ಇರುವುದು ಪತ್ತೆಯಾಗಿ, ಮುಂಬೈ ಪೊಲೀಸರ ಸಹಕಾರದಿಂದ ಈತನನ್ನು ಬಂಧಿಸಲಾಯಿತು.

Leave A Reply

Your email address will not be published.