ಭಾರತದಲ್ಲಿರುವ ಈ ದೇವಸ್ಥಾನದಲ್ಲಿ ದೇವರನ್ನು ಪೂಜಿಸುವುದಿಲ್ಲ ಮತ್ತೆ ಯಾರನ್ನು ಪೂಜಿಸುತ್ತಾರೆ? ನೀವೇ ಓದಿ
ದೇವರುಗಳಿಗೆ ದೇವಸ್ಥಾನ ಕಟ್ಟಿ ಪೂಜೆ ಮಾಡುವ ಸಂಪ್ರದಾಯ ಹಿಂದಿನಿಂದಲೂ ನಡೆದು ಬಂದಿದೆ. ಅದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಪ್ರಾಣಿಗಳನ್ನು ಪೂಜಿಸುವ ದೇವಸ್ಥಾನದ ಬಗ್ಗೆ ಕೇಳಿದ್ದೀರಾ? ಇಲ್ಲವಾದರೆ ಮುಂದಕ್ಕೆ ಓದಿರಿ. ಭಾರತದಲ್ಲಿ ಇರುವ ಈ ದೇವಸ್ಥಾನ ಯಾವ ದೇವರಿಗೂ ಮಿಸಲಿಲ್ಲ ಬದಲಾಗಿ ಇಲ್ಲಿ ಇಲಿಗಳನ್ನು ಪೂಜಿಸುತ್ತಾರೆ ಯಾವುದು ಆ ದೇವ ಏನಿದರ ಮಹತ್ವ?
ಹೌದು ಇಲಿಗಳು ಎಂದರೆ ಎಲ್ಲರಿಗೂ ಭಯ ಮತ್ತು ಸಿಟ್ಟು ಯಾಕೆಂದರೆ ಅದು ಮನೆಯಲ್ಲಿ ಒಂದಿಲ್ಲ ಒಂದು ಕಿತಾಪತಿ ಮಾಡುತ್ತದೆ. ಮನೆಯಲ್ಲಿನ ವ್ಯವಸ್ಥೆಯನ್ನೇ ಹಾಳು ಮಾಡುತ್ತದೆ. ಇಲಿಯನ್ನು ಗಣಪತಿಯ ವಾಹನ ಎನ್ನುತ್ತಾರೆ ಆದರೆ ಮನೆಗಳಲ್ಲಿ ಅದನ್ನು ಯಾವಾಗ್ಲೂ ಓಡಿಸುತ್ತಾರೆ ಆದರೆ ದೇಶದ ಈ ರಾಜ್ಯದಲ್ಲಿ ಇಲಿಗಳಿಗೆ ಒಂದು ದೇವಸ್ಥಾನ ಇದೆ ಮತ್ತು ಇಲ್ಲಿ ಅದಕ್ಕೆ ಪೂಜೆ ಪುರಸ್ಕಾರ ಕೂಡ ನಡೆಯುತ್ತದೆ. ಇಲ್ಲಿ ಯಾರು ಅದನ್ನು ದ್ವೇಷಿಸುವುದು ಇಲ್ಲ ಬದಲಾಗಿ ದೈವಿಕ ಭಾವನೆಯಿಂದ ನೋಡಿಕೊಳ್ಳುತ್ತಾರೆ. ಹೌದು ಎಲ್ಲಿದೆ ಈ ದೇವಸ್ಥಾನ ಬನ್ನಿ ತಿಳಿಯೋಣ.
ರಾಜಸ್ಥಾನ ರಾಜ್ಯದ ಬಿಕನೆರ್ ಪ್ರಾಂತ್ಯದಿಂದ 30 ಕಿಮೀ ದೂರದಲ್ಲಿದೆ ಈ ದೇವಸ್ಥಾನ . ಇಲ್ಲಿ ಸಾವಿರಾರು ಇಲಿಗಳು ಬಂದು ಸೇರುತ್ತದೆ ಮತ್ತು ಇದಕ್ಕೆ ನಿತ್ಯ ಪೂಜೆ ನಡೆಯುತ್ತದೆ. ಮೂಲಗಳ ಪ್ರಕಾರ ಇಲ್ಲಿ 25000ಕ್ಕು ಹೆಚ್ಚು ಕಪ್ಪು ಇಲಿಗಳು ಇದೆ ಮತ್ತು ಕೈ ಬೆರಳೆಣಿಕೆ ಅಷ್ಟು ಬಿಳಿ ಇಲಿಗಳು ಇವೆ. ಇಲ್ಲಿ ಬಿಳಿ ಇಲಿಗಳನ್ನು ಪವಿತ್ರ ಸಂಕೇತವಾಗಿ ಕಾಣುತ್ತಾರೆ . ಹೌದು ನಂಬಲು ಕಷ್ಟ ಆದರೂ ಇದು ಸತ್ಯ. ಹಲವಾರು ಭಕ್ತಾದಿಗಳು ಇಲ್ಲಿ ಬಂದು ಪೂಜೆ ನೆರವೇರಿಸುತ್ತಾರೆ. ಬೆಳಿಗ್ಗೆ 4 ಗಂಟೆಗೆ ಇಲ್ಲಿ ದೇವಸ್ಥಾನ ತೆರೆದು ಪೂಜೆ ನೆರವೇರಿಸಿ ನೈವೇದ್ಯ ಸಮರ್ಪಿಸುತ್ತಾರೆ. ಇದಕ್ಕೆ ಎಷ್ಟೋ ಸಾವಿರ ವರ್ಷಗಳ ಇತಿಹಾಸ ಇದೆ . ಮತ್ತು ಪೌರಾಣಿಕ ಕಥೆಯ ನಂಟು ಕೂಡ ಇದೆ ಹೌದು ಅದು ಏನೇ ಆಗಲಿ ನಂಬಿಕೆಯ ವಿಚಾರ ಬಂದಾಗ ನಾವು ಕೈಬೆರಳು ಮಾಡಿ ತಿರುವಂತಿಲ್ಲ . ಸದಾ ಮತ್ತೊಬ್ಬರ ನಂಬಿಕೆಯನ್ನು ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ.