ಭಾರತದಲ್ಲಿ 200, 500 ಮತ್ತು 2000 ರೂಪಾಯಿ ನೋಟುಗಳನ್ನು Print ಮಾಡಲು ಎಷ್ಟು ಖರ್ಚಾಗುತ್ತದೆ?

296

ಹೊಸ ನೋಟು ಮುದ್ರಣ RBI ಮಾಡುತ್ತದೆ ಹಾಗು ಮುದ್ರಿಸುವ ಹಕ್ಕು ಅದರದ್ದು ಮಾತ್ರ ಆಗಿದೆ ಆದರೆ ೧ ರೂಪಾಯಿ ನೋಟ್ ಹೊರತು ಪಡಿಸಿ. ಒಂದು ರೂಪಾಯಿ ನೋಟುಗಳನ್ನು ಹಣಕಾಸು ಸಚಿವಾಲಯದ ಮೇಲ್ವಿಚಾರಣೆಯಲ್ಲಿ ಮುದ್ರಿಸಲಾಗುತ್ತದೆ ಮತ್ತು ಹಣಕಾಸು ಕಾರ್ಯದರ್ಶಿ ಸಹಿ ಮಾಡುತ್ತಾರೆ, ಆದರೆ ಆರ್‌ಬಿಐ ಗವರ್ನರ್ ಅಲ್ಲ. ಒಂದು ರೂಪಾಯಿ ನೋಟು ಮುದ್ರಿಸುವುದು ಹಾಗು ಎಲ್ಲ ರೂಪಾಯಿ ನಾಣ್ಯಗಳನ್ನು ಮಿಂಟ್ ಮಾಡುವ ಜವಾಬ್ದಾರಿ ಹಣಕಾಸು ಸಚಿವಾಲಯದ ಅಧೀನದಲ್ಲಿರುತ್ತದೆ. ನಾಣ್ಯ ಹಾಗು ನೋಟನ್ನು ದೇಶದಲ್ಲಿ ಹಂಚುವ ಅಧಿಕಾರ ಇರುವುದು ಆರ್ ಬಿ ಐ ಬಳಿ.

ಆರ್‌ಬಿಐನಿಂದ ಎಷ್ಟು ನೋಟುಗಳನ್ನು ಮುದ್ರಿಸಬಹುದು?

ಕನಿಷ್ಠ ಮೀಸಲು (reserve system ) ವ್ಯವಸ್ಥೆಯ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಈ ವ್ಯವಸ್ಥೆಯು 1957 ರಿಂದ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ವ್ಯವಸ್ಥೆಯ ಪ್ರಕಾರ, ಆರ್.ಬಿ.ಐ. ರೂ. 200 ಕೋಟಿ ಮೌಲ್ಯದ ಅಸ್ತಿ ಮೀಸಲು ಇಡಬೇಕು. ಈ ೨೦೦ ಕೋಟಿ ರೂ .೧೧೫ ಕೋಟಿ ಯ ಚಿನ್ನದ ಸಂಗ್ರಹ ಮತ್ತು ರೂ .85 ಕೋಟಿ ವಿದೇಶಿ ಕರೆನ್ಸಿಯನ್ನು ಒಳಗೊಂಡಿದೆ. ಈ ಹೆಚ್ಚಿನ ಹಣವನ್ನು ಈಗ ಭದ್ರಪಡಿಸಿದ ನಂತರ ಆರ್‌ಬಿಐ ಆರ್ಥಿಕತೆಯ ಅಗತ್ಯಕ್ಕೆ ಅನುಗುಣವಾಗಿ ಅನಿರ್ದಿಷ್ಟ ಕರೆನ್ಸಿಯನ್ನು ಮುದ್ರಿಸಲು ಮುಕ್ತವಾಗಿದೆ.

ಭಾರತದಲ್ಲಿ ನೋಟ್ ಬ್ಯಾನ್ ಅದ ನಂತರ, ಆರ್‌ಬಿಐ ಹೊಸ ನೋಟುಗಳನ್ನು ರೂ .200, ರೂ .500 ಮತ್ತು ರೂ. 2000 ದೊಡ್ಡ ಸಂಖ್ಯೆಯಲ್ಲಿ ಮುದ್ರಿಸಿತ್ತು. ನೋಟ್ ಬ್ಯಾನ್ ಇಂದಾಗಿ ಆರ್‌ಬಿಐನ ಒಟ್ಟು ಮುದ್ರಣ ವೆಚ್ಚವು 2016-17ನೇ ಸಾಲಿನಲ್ಲಿ ಗಮನಾರ್ಹವಾಗಿ ಹೆಚ್ಚಾಗಿದೆ. ರಿಸರ್ವ್ ಬ್ಯಾಂಕಿನ ವಾರ್ಷಿಕ ವರದಿಯು 7,965 ಕೋಟಿ ರೂ. ಜುಲೈ 2016 ಮತ್ತು ಜೂನ್ 2017 ರ ನಡುವೆ ಹೊಸ ನೋಟುಗಳ ಮುದ್ರಣ ಇಂದಾಗಿ ಎಂದು ತಿಳಿಸಿದೆ, ಇದು ಕಳೆದ ವರ್ಷದ ರೂ .3,420 ಕೋಟಿಗಿಂತ 133% ಹೆಚ್ಚಾಗಿದೆ.

ಒಂದು ೨೦೦ ರೂಪಾಯಿ ನೋಟ್ ಮುದ್ರಣವಾಗಲು ೨.೯೩ ರೂಪಾಯಿ ಖರ್ಚಾಗುತ್ತದೆ. ಒಂದು ೫೦೦ ರೂಪಾಯಿ ನೋಟ್ ಮುದ್ರಣವಾಗಲು ೨.೯೪ ರೂಪಾಯಿ ಖರ್ಚಾಗುತ್ತದೆ. ೨೦೦೦ ರೂಪಾಯಿಯ ಒಂದು ನೋಟು ಮುದ್ರಣವಾಗಲು ೩.೫೪ ರೂಪಾಯಿಗಳ ಖರ್ಚು ಆಗುತ್ತದೆ. ಇಲ್ಲಿ ಈ ನೋಟ್ ಗಳನ್ನೂ ಪ್ರಿಂಟ್ ಮಾಡಲು ಪೇಪರ್, ಇಂಕ್, ಸೇಫ್ಟಿ ಥ್ರೆಡ್, ಸಾಧನಗಳನ್ನು ಖರೀದಿಸಬೇಕಾಗುತ್ತದೆ. ಈ ಎಲ್ಲ ಸಾಧನಗಳನ್ನು RBI ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದೆ. ಅದರಿಂದ ಪ್ರತಿ ನೋಟಿಗೆ ಇಷ್ಟು ವೆಚ್ಚ ತಗುಲುತ್ತಿದೆ.

Leave A Reply

Your email address will not be published.