ಭಾರತದ ಘರ್ಜನೆಗೆ ಶರಣಾದ ಯುರೋಪಿಯನ್ ಸಮೂಹ. ಅಷ್ಟಕ್ಕೂ ಭಾರತ ಕೋಪಗೊಳ್ಳಲು ಕಾರಣವೇನು?

1,089

ಉಪಖಂಡ ಎನಿಸಿಕೊಂಡಿರುವ ಭಾರತ ಅನೇಕ ವರ್ಷಗಳ ವಿದೇಶಿಗರ ಆಡಳಿತ ಹಾಗು ದಬ್ಬಾಳಿಕೆಯ ಸಾಕ್ಷ್ಯವಾಗಿದೆ. ವಿವಿಧತೆಯಲ್ಲಿ ಏಕತೆ ಎಂದು ಒಕ್ಕೂಟವಾಗಿ ಭಾರತ ಅತೀ ದೊಡ್ಡ ಸಂವಿಧಾನಿಕ ದೇಶವಾಗಿ ಹೊರಹೊಮ್ಮಿದೆ. ೨೦೧೪ ರ ವರೆಗೂ ಭಾರತ ವಿದೇಶಿ ದೇಶಗಳ ಮಾತಿಗೆ ತಲೆಬಾಗಿ ದಬ್ಬಾಳಿಕೆಗೆ ಒಳಪಟ್ಟಿತ್ತು. ಇದು ೨೦೧೪ ರ ನಂತರ ಮೋದಿ ನೇತೃತ್ವದ ಬಿಜೆಪಿ ಸರಕಾರ ಬಂದ ನಂತರ ಬಹಳ ಬದಲಾವಣೆಯಾಗಿ ಭಾರತ ವಿದೇಶಗಳಿಗೆ ಎಚ್ಚರಿಕೆ ಕೊಡುವ ಹಂತಕ್ಕೆ ತಲೆ ಎತ್ತಿ ನಿಂತಿದೆ.

ಕೊರೋನಾ ಬಂದು ಇಡೀ ವಿಶ್ವವೇ ನಲುಗಿಹೋದ ಸಂದರ್ಭದಲ್ಲಿ ಭಾರತ ವಸುದೈವ ಕುಟುಂಬಕಂ ಎಂದ ನಮ್ಮ ದ್ಯೇಯ ವಾಕ್ಯದೊಂದಿಗೆ ವಿದೇಶಕ್ಕೆ ಲಸಿಕೆ ಪೂರೈಕೆ ಮಾಡಿತ್ತು. ಇದು ಭಾರತದ ತಾಕತ್ತು. ಆದರೆ ಅದರ ನಂತರ ಭಾರತದಲ್ಲಿ ಎರಡನೇ ಅಲೆ ಅಪ್ಪಳಿಸಿತು. ಭಾರತ ಲಸಿಕೆ ಅಭಿಯಾನದೊಂದಿಗೆ ಅತಿ ಹೆಚ್ಚು ಜನರಿಗೆ ಲಸಿಕೆ ನೀಡಿ world record ಮಾಡಿದೆ. ಭಾರತದಲ್ಲಿಯೇ ತಯಾರಿಸಲಾದ ಕೋವಿಶೀಲ್ಡ್ ಹಾಗು ಕೋವಾಕ್ಸಿನ್ ಎಲ್ಲಾ ತರಹದ ರೂಪಾಂತರಿ ಕೋವಿಡ್ ಅನ್ನು ಸಮಗ್ರವಾಗಿ ಎದುರಿಸಬಲ್ಲುದು ಎಂದು ಅನೇಕ ಸಂಶೋಧನೆ ತಿಳಿಸಿದರೂ ಯುರೋಪಿಯನ್ ಒಕ್ಕೂಟ ಉದ್ದಡತನ ಮೆರೆದಿದೆ.

ಯುರೋಪಿಯನ್ ಒಕ್ಕೂಟದ ದೇಶಗಳಲ್ಲಿ ಕೊರೋನಾ ಲಸಿಕೆ ಪಡೆದವರಿಗೆ ಗ್ರೀನ್ ಪಾಸ್ ಅನ್ನು ನೀಡಲಾಗುತ್ತದೆ. ಇದು ಡಿಜಿಟಲ್ ಪಾಸ್ ಆಗಿದ್ದು ಇದು ಇದ್ದವರಿಗೆ ಮಾತ್ರ ಯೂರೋಪಿಯನ್ ಒಕ್ಕೂಟದ ದೇಶಗಳಲ್ಲಿ ಸಂಚಾರ ಮಾಡಲು ಸಾಧ್ಯ. ಈ ಗ್ರೀನ್ ಪಾಸ್ ಅಲ್ಲಿ ಕೇವಲ ಫೈಸರ್, ಅಸ್ಟ್ರಾಜೆನೆಕ್, ಜಾನ್ಸನ್ ಅಂಡ್ ಜಾನ್ಸನ್ ಹಾಗು ವಾಕ್ಸ್‌ಜೆವರಿಯಾ ಎನ್ನುವ ನಾಲ್ಕು ಲಸಿಕೆಗಳಿಗಷ್ಟೇ ಮಾನ್ಯತೆ ನೀಡಿದೆ. ಭಾರತದ ಲಸಿಕೆಗಳಾದ ಕೋವಿಶೀಲ್ಡ್ ಹಾಗೂ ಕೋವಾಕ್ಸಿನ್ ಗೆ ಮಾನ್ಯತೆ ನೀಡಿಲ್ಲ. ಇದನ್ನು ಮೋದಿ ಸರಕಾರ ತೀವ್ರವಾಗಿ ಖಂಡಿಸಿದೆ.

ಇದಕ್ಕೆ ಪ್ರತಿಯಾಗಿ ಕೇಂದ್ರ ಸರಕಾರ ತಿರುಗೇಟು ನೀಡಿದ್ದು ಯುರೋಪಿಯನ್ ಒಕ್ಕೂಟ ಭಾರತದ ಕೋವಿಶೀಲ್ಡ್ ಹಾಗು ಕೋವಾಕ್ಸಿನ್ ಅನ್ನು ತನ್ನ ಗ್ರೀನ್ ಪಾಸ್ ಅಲ್ಲಿ ಸೇರಿಸದಿದ್ದರೆ ಭಾರತ ಕೂಡಾ ಆ ದೇಶಗಳ ಲಸಿಕೆ ಮಾನ್ಯ ಮಾಡುವುದಿಲ್ಲ, ಭಾರತಕ್ಕೆ ಬಂದರೆ ಖಡ್ಡಾಯವಾಗಿ ೨ ವಾರಗಳ ಕ್ವಾರಂಟೈನ್ ಮಾಡಬೇಕು ಎಂದು ತಾಕೀತು ಮಾಡಿತು. ಇದಕ್ಕೆ ಯುರೋಪಿಯನ್ ಒಕ್ಕೂಟದ ದೇಶಗಳಲ್ಲಿ ಕೆಲವು ಅಂದರೆ ೮ ದೇಶಗಳು ಭಾರತ ಸರಕಾರದ ಈ ಆದೇಶಕ್ಕೆ ತಲೆಬಾಗಿ ಭಾರತದ ಲಸಿಕೆಗೆ ಮಾನ್ಯತೆ ನೀಡಿದೆ. ಈ ೮ ದೇಶಗಳು ಆಸ್ಟ್ರಿಯ, ಜರ್ಮನಿ, ಸ್ಲೊವೇನಿಯಾ, ಯೂನಾನ್, ಐಸ್‌ಲ್ಯಾಂಡ್, ಐರ್ಲೆಂಡ್, ಸ್ವಿಜರ್ಲ್ಯಾಂಡ್ ಹಾಗು ಸ್ಪೇನ್.

Leave A Reply

Your email address will not be published.