ಭಾರತದ ಮೊದಲ ಮೇಡ್ ಇನ್ ಇಂಡಿಯಾ ಇಟ್ಟಿಗೆ ತಯಾರಿಸುವ ಮಿಷಿನ್ ತಯಾರಾಗಿದೆ. ಒಂದು ಗಂಟೆಗೆ ೧೨ ಸಾವಿರ ಇಟ್ಟಿಗೆ ತಯಾರಾಗಲಿದೆ?

11,959

ಭಾರತದಲ್ಲಿ ಇಟ್ಟಿಗೆ ತಯಾರಿಸುವುದು ಕಷ್ಟಕರವಾದ ಕೆಲಸ ಕಚ್ಚಾ ವಸ್ತುಗಳನ್ನು ಸಂಯೋಜಿಸಲು ಹಾಗು ಇಟ್ಟಿಗೆ ಗಳನ್ನೂ ತಯಾರಿಸಲು ಯಂತ್ರ ಬಳಸಿದರು ಕೂಡ ಅವುಗಳನ್ನು ಪ್ರತ್ಯೇಕವಾಗಿ ಆಯ್ಕೆ ಮಾಡುವುದು ಮತ್ತು ಒಣಗಿಸಲು ನಾವು ಮಷೀನ್ ಬಳಸಲು ಸಾಧ್ಯವಿಲ್ಲ. ಅದೇ ರೀತಿ ದೊಡ್ಡ ಮಟ್ಟದಲ್ಲಿ ತಯಾರಿಸಲು ಬಹಳ ಕಾರ್ಮಿಕರ ಅವಶ್ಯಕತೆ ಇದೆ. ಅದೇ ರೀತಿ ಅದಕ್ಕೆ ಖರ್ಚು ಕೂಡ ಅಷ್ಟೇ ಇದೆ. ಹರಿಯಾಣದ ಸತೀಶ್ ಕುಮಾರ್ ಎನ್ನುವವರು ತಮ್ಮ ಒಡೆತನದ ಇಟ್ಟಿಗೆ ಕಾರ್ಖಾನೆಯನ್ನು ಇದೆ ಕಾರಣದಿಂದ ಮುಚ್ಚಬೇಕಾಗಿ ಬಂತು.

ಸಮಯಕ್ಕೆ ಸರಿಯಾಗಿ ಬೇಡಿಕೆ ನೀಡಲಾಗಲಿಲ್ಲ ಕಾರ್ಮಿಕರ ವೆಚ್ಚವೇ ಬಹಳವಾಗಿತ್ತು, ಈ ವ್ಯವಸ್ಥೆ ಸ್ವಯಂ ಚಾಲಿತ ಆಗಿರಬೇಕೆಂದು ತಿಳಿದ ಸತೀಶ್ ಅವರು ಈ ಇಟ್ಟಿಗೆ ನಿರ್ಮಾಣ ಮಾಡಲು ಮಷೀನ್ ತಯಾರಿಸಬೇಕೆಂದು ನಿರ್ಧಾರ ಮಾಡಿದರು. ಈ ಸತೀಶ್ ಅವರು ಹತ್ತನೇ ತರಗತಿ ಡ್ರಾಪ್ ಔಟ್ ಆಗಿದ್ದು, ಅವರ ಪ್ರಕಾರ ಜನರಿಗೆ ಅಗತ್ಯವಿರುವ ಶಿಕ್ಷಣ ಎಂದರೆ ಅನುಭವ ಎಂದು ಹೇಳುತ್ತಾರೆ. ಸತೀಶ್ ಅವರು ೨೦೧೦ ರಿಂದ ೨೦೧೪ ರ ವರೆಗೆ ಈ ಮಷೀನ್ ನ ವಿನ್ಯಾಸ ದ ಬಗ್ಗೆ ಇಂಜಿನೀರ್ಸ್ ಮತ್ತು ಇತರ ಇಟ್ಟಿಗೆ ಗೂಡು ನಿರ್ಮಾಣ ಮಾಡುವವರ ಜೊತೆ ಈ ಮಷೀನ್ ವಿನ್ಯಾಸದ ಬಗ್ಗೆ ಚರ್ಚಿಸಿದರು.

ಸ್ವಯಂ ಚಾಲಿತ ಯಂತ್ರಗಳು ಈಗಾಗಲೇ ಇದೆ ಆದರೆ ಅವು ಸ್ಥಿರ ಯಂತ್ರಗಳಾಗಿದೆ. ಕಚ್ಚಾ ಇಟ್ಟಿಗೆಗಳನ್ನು ಒಣಗಿಸಲು ಹಾಗು ತೆರೆದ ಸ್ಥಳಗಳಿಗೆ ಸಾಗಿಸಲು ಕುಳಿಗಳು ಕೈ ಇಂದ ಮಾಡಬೇಕಾಗುತ್ತದೆ. ಕೆಲ ವೆಲ್ಡರ್ ಹಾಗು ಸ್ಥಳೀಯ ಸಹಾಯಕರ ಸಹಾಯದಿಂದ ಸತೀಶ್ ಇಟ್ಟಿಗೆ ತಯಾರಿಕಾ ಘಟಕದ ಮಾದರಿ ತಯಾರಿಸಿದರು. ಥರ್ಡ್ ಪಾರ್ಟಿ ಮಾರಾಟಗಾರರು ಇವರಿಗೆ ಚಲಿಸಬಲ್ಲ ಟ್ರಕ್ ನ ಭಾಗಗಳನ್ನು ತಂದು ಕೊಟ್ಟರು. ಹೀಗೆ ಕೊನೆಯದಾಗಿ ಒಂದು ಮಾದರಿಯನ್ನು ೨೦೧೫ ರಲ್ಲಿ ಪರೀಕ್ಷಿಸಲಾಯಿತು. ಇದು ಮೂಲ ಯಂತ್ರವಾಗಿದ್ದು ಒಂದು ಗಂಟೆಗೆ ಸುಮಾರು ೯೦೦೦ ಇಟ್ಟಿಗೆ ತಯಾರು ಮಾಡಬಲ್ಲುದು ಎಂದು ಸತೀಶ್ ಹೇಳಿದ್ದಾರೆ.

ಸತೀಶ್ ತಮ್ಮ ಕಂಪನಿ ನವೀಕರಿಸಿದೆ ಹಾಗೇನೇ ಎರಡು ಹೊಸ ಯಂತ್ರ ಉತ್ಪಾದನೆ ಮಾಡಿದೆ. ಇದರಲ್ಲಿ ಒಂದು ಗಂಟೆಗೆ ಸುಮಾರು ೧೨೦೦೦ ದಷ್ಟು ಇಟ್ಟಿಗೆ ಹಾಕಬಹುದು ಎಂದು ಹೇಳಿದ್ದಾರೆ. ಪ್ರತಿ ಬ್ಲಾಕ್ ಗೆ ಇಟ್ಟಿಗೆ ಗೆ ೬೦ ಪೈಸೆ ಇದ್ದರೆ, ಇವರ ಇಟ್ಟಿಗೆ ಕೇವಲ ೨೦ ಪೈಸೆಯಲ್ಲಿ ತಯಾರಾಗುತ್ತದೆ. ಸತೀಶ್ ಅವರು ಸದ್ಯಕ್ಕೆ ಹರಿಯಾಣದಲ್ಲಿ ಈ ಘಟಕ ಹಾಕಿದ್ದಾರೆ. ಅಲ್ಲದೆ ಹೊರಗಡೆ ಈ ಯಂತ್ರ ಗುತ್ತಿಗೆ ಕೂಡ ನೀಡುತ್ತಿದ್ದಾರೆ. ಇದು ಹೇಗೆ ಕೆಲಸ ಮಾಡುತ್ತದೆ ಎನ್ನುವುದು ಇವರ ಅಧಿಕೃತ ವೆಬ್ಸೈಟ್ https://www.snpcmachines.com ಅಲ್ಲಿ ನೀಡಲಾಗಿದೆ.

ಇಲ್ಲಿಯವರೆಗೆ ಇವರು ಏಷ್ಯಾ ದಲ್ಲಿ ಒಟ್ಟು ೨೫೦ ಯಂತ್ರಗಳನ್ನು ತಯಾರು ಮಾಡಿ ಮಾರಾಟ ಮಾಡಿದ್ದಾರೆ. ಅಕ್ಟೊಬರ್ ಅಲ್ಲಿ ಸತೀಶ್ ಕುಮಾರ್ ಅವರಿಗೆ ಭಾರತ ಸರಕಾರದಿಂದ ನ್ಯಾಷನಲ್ ಸ್ಟಾರ್ಟ್ ಅಪ್ ಪ್ರಶಸ್ತಿ ಕೂಡ ಸಿಕ್ಕಿದೆ. ನಗದು ಬಹುಮಾನ ಕೂಡ ಸಿಕ್ಕಿದೆ. ಅಲ್ಲದೆ ಅನೇಕ ಇಟ್ಟಿಗೆ ತಯಾರಕ ಘಟಕಗಳ ಉದ್ಯಮಿಗೆ ಕಡಿಮೆ ಉತ್ಪಾದನಾ ವೆಚ್ಚದಲ್ಲಿ ಹೆಚ್ಚು ಪೂರೈಕೆ ಮಾಡುವ ವಿಧಾನ ತಿಳಿಸಿ ಕೊಟ್ಟಿದ್ದಾರೆ ಸತೀಶ್. ಇವರು ನಮ್ಮ ದೇಶಾದ್ಯಂತ ಯುವಕರಿಗೆ ಸ್ಫೂರ್ತಿಯಾಗಿದ್ದಾರೆ.

Leave A Reply

Your email address will not be published.