ಭಾರತದ ೫ ಶ್ರೀಮಂತ ದೇವಾಲಯಗಳು ಯಾವುವು? ಇಲ್ಲಿದೆ ಶ್ರೀಮಂತ ದೇವಾಲಯಗಳ ಪಟ್ಟಿ.
ವಿವಿಧತೆವಲ್ಲಿ ಏಕತೆ ಎಂದು ಕರೆಯುವ ದೇಶ ನಮ್ಮ ಹಿಂದುಸ್ತಾನ. ಅದೇ ರೀತಿ ಇಲ್ಲಿ ಹಿಂದೂ ಧರ್ಮ ಕೂಡ ಒಂದು ಬಹುಮುಖ್ಯ ಭಾಗವಾದ ದೇಶ. ನಾವು ನಿಧಾನವಾಗಿ ಆಧುನಿಕತೆ ಕಡೆಗೆ ನಡೆಯುತ್ತಿದ್ದರೂ ನಮ್ಮ ದೇಶದ ಕಲೆ, ಸಂಸ್ಕೃತಿ ಹಾಗೆಯೆ ಪಾಲಿಸುತ್ತ ಬಂದಿದ್ದಾರೆ ಈ ದೇಶದ ಜನರು, ಭಾರತದ ಶ್ರೀಮಂತ ಹಿಂದೂ ಸಂಸ್ಕೃತಿಯನ್ನು ಜಗತ್ತಿಗೆ ಸಾರಲು ಇನ್ನು ತಲೆ ಎತ್ತಿ ನಿಂತಿವೆ ಭಾರತದ ಪುರಾತನ ದೇವಾಲಯಗಳು. ಇವುಗಳಲ್ಲಿ ಕೆಲವು ದೇವಾಲಯಗಳಲ್ಲಿ ಇಂದು ಪೂಜೆ ಪುನಸ್ಕಾರಗಳು ನಡೆಯುತ್ತಿದೆ ಹಾಗು ಅತ್ಯಂತ ಶ್ರೀಮಂತ ದೇವಾಲಯಗಳಾಗಿ ಹೊರಹೊಮ್ಮಿದೆ.
೫. ಸಿದ್ದಿವಿನಾಯಕ ದೇವಾಲಯ ಮುಂಬೈ, ಈ ದೇವಾಲಯಕ್ಕೆ ಪ್ರತಿ ದಿನ ೩೦,೦೦೦ ದಿಂದ ೫೦,೦೦೦ ಭಕ್ತಾದಿಗಳು ದೇವರ ದರ್ಶನಕ್ಕೆ ಬರುತ್ತಾರೆ. ಇಲ್ಲಿ ಗಣೇಶ ದೇವರು ಬಂಗಾರದ ಚಾವಣಿ ಒಳಗೆ ಭಕ್ತರ ದರ್ಶನ ನೀಡುತ್ತಿದ್ದಾರೆ. ಈ ದೇವಾಲಯದಲ್ಲಿ ೧೫೮ ಕೆಜಿ ಬಂಗಾರ ಇದೆ ಎಂದು ಹೇಳಲಾಗುತ್ತಿದೆ. ಇದರ ಬೆಲೆ ೬೭ ಮಿಲಿಯನ್ ಡಾಲರ್ ಬೆಲೆ ಎಂದು ಅಂದಾಜಿಸಲಾಗಿದೆ. ಇದನ್ನು ಮುಂಬೈ ಯಾ ಶ್ರೀಮಂತ ದೇವಾಲಯ ಎಂದು ಪರಿಗಣಿಸಲಾಗುತ್ತದೆ. ವಾರ್ಷಿಕ ವರಮಾನ ೨.೨ ಮಿಲಿಯನ್ ಡಾಲರ್ ಆಗಿದೆ. ಈ ದೇವಾಲಯಕ್ಕೆ ವಿಶ್ವದಾದ್ಯಂತ ಸೆಲೆಬ್ರಿಟಿ ಗಳು ಕೂಡ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಾರೆ. ಆಪಲ್ ಸಿಇಓ ಟೈಮ್ ಕುಕ್ ಈ ದೇವಾಲಯಕ್ಕೆ ಇತ್ತೀಚಿಗೆ ದರ್ಶನ ಪಡೆಯಲು ಬಂದ ಸೆಲೆಬ್ರಿಟಿ.
೪. ವೈಷನೋವ್ ದೇವಿ ದೇವಾಲಯ- ಈ ದೇವಾಲಯ ಭಾರತದ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿದೆ. ಲಕ್ಷಗಟ್ಟಲೆ ಭಕ್ತರು ದೇವಿಯ ದರ್ಶನ ಪಡೆಯಲು ಇಲ್ಲಿಗೆ ಬರುತ್ತಾರೆ, ಈ ದೇವಾಲಯದ ವಾರ್ಷಿಕ ಅಧಯ ಸುಮಾರು ೭ ಮಿಲಿಯನ್ ಡಾಲರ್ ಇದೆ ಎಂದು ಅಂದಾಜಿಸಲಾಗಿದೆ. ಪ್ರತಿ ವರ್ಷ ೮ ಮಿಲಿಯನ್ ಭಕ್ತರು ದರ್ಶನಕ್ಕೆ ಈ ದೇವಾಲಯಕ್ಕೆ ಬರುತ್ತಾರೆ. ತಿರುಪತಿ ತಿಮ್ಮಪ್ಪನ ನಂತರ ಅತಿ ಹೆಚ್ಚು ಭಕ್ತರು ಈ ದೇವಾಲಯಕ್ಕೆ ಬರುವುದು
೩. ಸಾಯಿ ಬಾಬಾ ದೇವಾಲಯ ಶಿರ್ಡಿ- ಸಾಯಿಬಾಬಾ ವಿಶ್ವದಾದ್ಯಂತ ಲಕ್ಷಾಂತರ ಭಕ್ತ ಸಮೂಹವನ್ನು ಹೊಂದಿದು, ಕಷ್ಟ ಹೇಳಿಕೊಂಡು ಬರುವ ಜನರ ಇಷ್ಟಾರ್ಥ ಪರಿಹಾರ ಮಾಡ್ತಾರೆ ಎನ್ನುವುದು ಭಕ್ತರ ನಂಬಿಕೆ. ವರದಿ ಪ್ರಕಾರ ದೇವಾಲಯದ ಬ್ಯಾಂಕ್ ಅಕೌಂಟ್ ಅಲ್ಲಿ ೧.೮ ಬಿಲಿಯನ್ ಡಾಲರ್ ಹಣ ಹಾಗು ೮೦ ಕೆಜಿ ಬಂಗಾರ ಮತ್ತು ೪,೪೨೦ ಕೆಜಿ ಬೆಳ್ಳಿ ಅಲ್ಲದೆ ಡಾಲರ್ ಹಾಗು ಪೌಂಡ್ ರೂಪದ ಹಣ ಇದೆ ಎಂದು ಹೇಳಲಾಗುತ್ತಿದೆ. ಈ ವರಮಣದಿಂದ ಶಿರ್ಡಿ ಸಾಯಿಬಾಬಾ ಮಂದಿರವನ್ನು ಶ್ರೀಮಂತ ದೇವಾಲಯಗಳ ಪೈಕಿ ೩ ಸ್ಥಾನದಲ್ಲಿ ಸೇರ್ಪಡೆಯಾಗುತ್ತದೆ.
೨. ವೆಂಕಟೇಶ್ವರ ದೇವಾಲಯ ತಿರುಪತಿ- ತಿರುಪತಿ ತಿಮ್ಮಪ್ಪನ ದರುಶನಕ್ಕೆ ಪ್ರತಿದಿನ ಸುಮಾರು ೫೦,೦೦೦ ಇಂದ ೧,೦೦,೦೦೦ ವರೆಗೆ ಭಕ್ತರು ಬರುತ್ತಾರೆ, ಜಾತ್ರೆ ಸಮಯದಲ್ಲಿ ಭಕ್ತಾದಿಗಳ ಸಂಖ್ಯೆ ೫,೦೦,೦೦೦ ಕಿಂತಲೂ ಜಾಸ್ತಿ ಇರುತ್ತದೆ ಎಂದು ಹೇಳಲಾಗುತ್ತದೆ, ಈ ದೇವಾಲಯದಲ್ಲಿ ಭಕ್ತರು ನೀಡಿದ ಬಂಗಾರ ಮಾತ್ರವಲ್ಲದೆ ಪುರಾತನ ಸಮಯದ ಬಂಗಾರ ಸೇರಿ ಒಟ್ಟು ೫೨ ಟನ್ಗಳಷ್ಟು ಇದೆ ಎಂದು ಹೇಳಲಾಗುತ್ತದೆ. ಇದರ ಮೌಲ್ಯ ೨೦ ಬಿಲಿಯನ್ ಡಾಲರ್ ಆಗಿದೆ. ಈ ದೇವಾಲಯದ ವಾರ್ಷಿಕ ವರಮಾನ ಸುಮಾರು ೬೫೦ ಕೋಟಿ, ಕೇವಲ ಲಡ್ಡು ಪ್ರಸಾದ ಹಂಚುವುದರಲ್ಲಿಯೇ ೧೧ ಮಿಲಿಯನ್ ಡಾಲರ್ ವರಮಾನ ಬರುತ್ತದೆ.
೧. ಶ್ರೀ ಪದ್ಮನಾಭ ಸ್ವಾಮಿ ದೇವಾಲಯ ತಿರುವನಂತಪುರಂ ಕೇರಳ- ಈ ದೇವಾಲಯ ಭಾರತದ ಶ್ರೀಮಂತ ದೇವಾಲಯ ಮಾತ್ರವಲ್ಲದೆ ಇಡೀ ವಿಶ್ವದ ಅತಿ ಶ್ರೀಮಂತ ದೇವಾಲಯ ಕೂಡ ಆಗಿದೆ. ದ್ರಾವಿಡ ಶೈಲಿಯಲ್ಲಿ ಕಟ್ಟಲಾದ ಈ ದೇವಾಲಯ ದಕ್ಷಿಣ ಭಾರತದಲ್ಲೇ ಹೆಮ್ಮೆಯಾಗಿದೆ, ಈ ದೇವಾಲಯ ವಿಷ್ಣುವಿನ ದೇವಾಲಯವಾಗಿದೆ, ಇತ್ತೀಚಿಗೆ ತೆರೆದ ದೇವಾಲಯದ ಖಜಾನೆ ಇಂದ ಇಲ್ಲಿ ಬಂಗಾರ ಹಾಗು ವಜ್ರದ ಸಾಗರವೇ ಇದೆ ಎಂದು ತಿಳಿದು ಬಂದಿದೆ, ಜನರು ಇದರ ಬೆಲೆ ಸುಮಾರು ೧ ಟ್ರಿಲಿಯನ್ ಡಾಲರ್ ಎಂದು ಅಂದಾಜು ಮಾಡುತ್ತಿದ್ದಾರೆ.