ಭಾರತ ವಿಶ್ವದ ನಾಲ್ಕನೇ ದೊಡ್ಡ ವಿದೇಶಿ ವಿನಿಮಯ ಸಂಗ್ರಹ ಹೊಂದಿದ ದೇಶವಾಗಿ ಹೊರಹೊಮ್ಮಿದೆ. ಇದರಿಂದ ದೇಶಕ್ಕೆ ಏನೆಲ್ಲಾ ಲಾಭ ಇದೆ? ಇಲ್ಲಿದೆ ಮಾಹಿತಿ.

254

ಭಾರತ ಹೊಸ ನಾಯಕತ್ವದ ದಾರಿಯಲ್ಲಿ ೨೦೧೪ ರಿಂದ ನಡೆಯುತ್ತಿದೆ ಅದರ ಉತ್ತಮ ಫಲಿತಾಂಶ ನಮಗೆ ಈಗ ದೊರಕುತ್ತಿದೆ. ಭಾರತ ಈಗ ವಿಶ್ವದ ನಾಲ್ಕನೇ ಅತಿ ದೊಡ್ಡ ವಿದೇಶಿ ವಿನಿಮಯ ಸಂಗ್ರಹ ಹೊಂದಿದ ದೇಶವಾಗಿ ಹೊರಹೊಮ್ಮಿದೆ ಅಥವಾ ಫಾರೆಕ್ಸ್ ರೆಸೆರ್ವ್ ಹೊಂದಿದೆ. ಈ ವಿದೇಶಿ ವಿನಿಮಯ ಸಂಗ್ರಹ ಎಲ್ಲ ದೇಶಗಳಿಗೂ ಬಹು ಮುಖ್ಯವಾಗಿ ಬೇಕಾಗುತ್ತದೆ. ಇದು ಅಧಿಕ ವಾಗಿದ್ದರೆ ಭಾರತಕ್ಕೆ ಅತಿ ಹೆಚ್ಚು ಉಪಯೋಗವಿದೆ. ಭಾರತಕ್ಕೆ ಏನಿದರ ಲಾಭ, ಪಾಕಿಸ್ತಾನ ಏಕೆ ಇದಕ್ಕೆ ಹೆದರುತ್ತಿದೆ? ಇಲ್ಲಿದೆ ವಿವರಣೆ.

ಕೇಂದ್ರ ಸಚಿವರಾದಂತಹ ಪಂಕಜ್ ಚೌದರಿ ಸೋಮವಾರ ತಿಳಿಸಿದಂತೆ ಭಾರತದ ಬಳಿ ವಿದೇಶಿ ವಿನಿಮಯ ಸಂಗ್ರಹ ನವೆಂಬರ್ ೧೯ ೨೦೨೧ ರ ದಿನಾಂಕದವರೆಗೆ ಒಟ್ಟು ೬೪೦.೪ ಬಿಲಿಯನ್ ಡಾಲರಷ್ಟು ಏರಿಕೆ ಆಗಿದೆ. ಇದಲ್ಲದೆ ನವೆಂಬರ್ ಮೊದಲ ವಾರದಲ್ಲಿ ಸಂಗ್ರಹ ಸುಮಾರು ೨.೭೧೩ ಶತಕೋಟಿ ಡಾಲರಷ್ಟು ಇಳಿಕೆ ಕಂಡಿತ್ತು ನಂತರ ಪುನಃ ಏರಿಕೆ ಕಂಡು ೬೪೨.೪೫೩ ಬಿಲಿಯನ್ ಡಾಲರ್ ನಷ್ಟು ಸಾರ್ವಕಾಲಿಕ ಏರಿಕೆಯ ದಾಖಲೆ ಮಾಡಿದೆ. ವಿದೇಶಿ ವಿನಿಮಯ ಸಂಗ್ರಹ ಹೆಚ್ಚಾದಂತೆ ದೇಶದ ರೂಪಾಯಿ ಮೌಲ್ಯ ಕೂಡ ಹೆಚ್ಚಾಗುತ್ತದೆ. RBI ಖಜಾನೆಯಲ್ಲಿ ಡಾಲರ್ ತುಂಬಿದಾಗ ಭಾರತದ ಕರೆನ್ಸಿ ಮೌಲ್ಯ ಹೆಚ್ಚುತ್ತದೆ.

ಯಾವುದೇ ವಿದೇಶ ಗಳಿಂದ ಆಮದು ಮಾಡಿಸಿಕೊಳ್ಳುವುದಾದ್ರೆ ವಿದೇಶಿ ವಿನಿಮಯ ಸಂಗ್ರಹ ಬಹಳ ಮುಖ್ಯವಾಗಿರುತ್ತದೆ. ವಿದೇಶಗಳಲ್ಲಿ ವ್ಯವಹರಿಸುವಾಗ ಡಾಲರ್ ಗಳಲ್ಲಿ ವಹಿವಾಟು ನಡೆಯುತ್ತದೆ, ಅಂತಹ ಪರಿಸ್ಥಿತಿಯಲ್ಲಿ ವಿದೇಶಿ ವಿನಿಮಯ ಸಂಗ್ರಹ ಅವಶ್ಯಕವಾಗುತ್ತದೆ. ಇದು ಮಾತ್ರ ಅಲ್ಲದೆ ವಿನಿಮಯ ಸಂಗ್ರಹ ಏರಿಕೆ ಆದಷ್ಟು ವಿದೇಶಗಳು ಭಾರತದಲ್ಲಿ ಹಣ ಹೂಡಲು ಮುಂದೆ ಬರುತ್ತಾರೆ. ಅಲ್ಲದೆ ಇದು ಭಾರತದ ಆರ್ಥಿಕತೆ ಬಲಪಡಿಸಲು ಸಹಾಯವಾಗುತ್ತದೆ.

Leave A Reply

Your email address will not be published.