ಮಕರ ಸಂಕ್ರಾಂತಿ ಅಂದು ಪೋನ್ನಂಬಳ ಬೆಟ್ಟದಲ್ಲಿ ಕಾಣುವ ಮಕರ ಜ್ಯೋತಿಯ ರಹಸ್ಯ ಏನು? ಮೂಢನಂಬಿಕೆ ಎನ್ನುವವರು ಇದನ್ನು ಓದಲೇಬೇಕು?
ಮಕರ ಸಂಕ್ರಾಂತಿ ಎಂದರೆ ಎಲ್ಲೆಡೆ ಸಂಭ್ರಮ, ವರ್ಷದ ಎಲ್ಲಾ ಸಂಕ್ರಾಂತಿಗಿಂತ ಇದು ಸ್ವಲ್ಪ ಭಿನ್ನವಾದುದು ಮತ್ತು ಪೂಜನೀಯ. ಮಕರ ಸಂಕ್ರಾಂತಿ ಎಂದಾಕ್ಷಣ ಮೊದಲು ನೆನಪಿಗೆ ಬರುವುದೇ ಶಬರಿ ಮಲೆ. ಹೌದು 48 ದಿನಗಳ ಕಠಿಣ ತಪಸ್ಸು ಆಚರಿಸಿ ಸ್ವಾಮಿಯ ದರ್ಶನ ಪಡೆದರೆ ಜೀವನ ಸಾರ್ಥಕತೆ ಕಾಣುತ್ತದೆ ಎಂದು ಹಿರಿಯರು ನಂಬಿದ್ದರು ಈಗಿನವರು ಅದನ್ನು ಮುಂದುವರೆಸಿಕೊಂಡು ಹೋಗಿದ್ದಾರೆ. ಹಾಗಾದರೆ ಮಕರ ಸಂಕ್ರಾಂತಿ ಯಂದು ಮಕರ ಜ್ಯೋತಿ ನೋಡಲೆಂದೇ ಲಕ್ಷಾಂತರ ಭಕ್ತರು ಸನ್ನಿಧಾನಕ್ಕೆ ಬರುತ್ತಾರೆ. ಹಾಗಾದರೆ ಈ ಮಕರ ಜ್ಯೋತಿಯ ಹಿಂದಿನ ಕಥೆ ಏನು? ಏನಿದರ ರಹಸ್ಯ ಬನ್ನಿ ತಿಳಿಯೋಣ.
ಅಯ್ಯಪ್ಪ ಸ್ವಾಮಿ ಮಹಿಷಿಯ ಮರ್ದನ ಮಾಡಲೆಂದೇ ಅವತಾರ ಎತ್ತಿದ ಹರಿಹರ ಅಂಶ. ಮಕರ ಸಂಕ್ರಾಂತಿ ಅಂದು ಕಾಣುವ ಮಕರ ಜ್ಯೋತಿ ಮತ್ತು ಆಯ್ಯಪ್ಪನಿಗು ಏನು ಸಂಬಂಧ ಎಂದು ಕೇಳಿದರೆ. ಶಬರಿ ಮಲೆ ಪುರುಷ ಪ್ರಧಾನ ದೇವಾಲಯ ಇಲ್ಲಿ ವಯಸ್ಸಿಗೆ ಬಂದ ಹೆಣ್ಣು ಮಕ್ಕಳಿಗೆ ದೇವಸ್ಥಾನಕ್ಕೆ ಪ್ರವೇಶ ನಿಷಿದ್ಧ. ಅಯ್ಯಪ್ಪ ಸ್ವಾಮಿ ಬ್ರಮ್ಹಚಾರಿ ಆದ್ದರಿಂದ ಇಲ್ಲಿ ವಯಸ್ಸಿಗೆ ಹೆಣ್ಣು ಮಕ್ಕಳಿಗೆ ಪ್ರವೇಶ ಇಲ್ಲ ಎಂಬ ಕಥೆ ಇದೆ.
ಅಯ್ಯಪ್ಪ ಸ್ವಾಮಿಯ ಸಾಕುತಾಯಿ ಪಂದಳ ರಾಜನ ಹೆಂಡತಿ ನಮಗೆ ನಿಮ್ಮ ದರ್ಶನ ಭಾಗ್ಯ ಇಲ್ಲವೇ ಎಂದು ಕೇಳಿದಾಗ, ಅಯ್ಯಪ್ಪ ಸ್ವಾಮಿಯ ಪ್ರತಿ ಮಕರ ಸಂಕ್ರಾಂತಿ ದಿನಂದಂದು ಉತ್ತರಾ ನಕ್ಷತ್ರ ರೂಪದಲ್ಲಿ ನಾನು ನಿಮಗೆ ದರ್ಶನ ಕೊಡುತ್ತೇನೆ ಎಂದು ವರದಾನ ನೀಡುತ್ತಾನೆ. ಇದೆ ಪ್ರಕಾರ ಮಕರ ಸಂಕ್ರಾಂತಿ ದಿನದಂದು ಸಂಜೆಯ ಹೊತ್ತಿಗೆ ಉತ್ತರ ನಕ್ಷತ್ರ ರೂಪದಲ್ಲಿ ಸ್ವಾಮಿಯ ದರ್ಶನ ಆಗುತ್ತದೆ. ಆ ದಿನ ಬಿಟ್ಟು ಮತ್ಯಾವ ಸಮಯದಲ್ಲೂ ಈ ನಕ್ಷತ್ರ ಕಾಣಸಿಗುವುದಿಲ್ಲ.
ಹಾಗಾದರೆ ನಿಮ್ಮ ಮನಸಿನಲ್ಲಿ ಗೊಂದಲ ಮೂಡಿರಬಹುದು , ಹಾಗಾದರೆ ಪೊನ್ನಂಬಳ ಬೆಟ್ಟದಲ್ಲಿ ಕಾಣುವ ಮಕರ ಜ್ಯೋತಿ ಯಾವುದು ಎಂದು ? ನಿಮಗೆ ಈ ಒಂದು ಗೊಂದಲ ಇದ್ದರೆ ಅದಕ್ಕೆ ಉತ್ತರ ಇಲ್ಲಿದೆ. ಪೊನ್ನಂಬಳ ಬೆಟ್ಟದಲ್ಲಿ ಕಾಣುವ ಆ ಜ್ಯೋತಿ ಮಕರ ವಿಳಕ್ಕು ಹೌದು ಅದರ ಹಿಂದೆಯೂ ಒಂದು ಕಥೆ ಇದೆ. ಮೊದಲ ಬಾರಿಗೆ ಮಕರ ಸಂಕ್ರಾಂತಿ ದಿನದಂದು ಅಯ್ಯಪ್ಪ ಸ್ವಾಮಿ ನಕ್ಷತ್ರ ರೂಪದಲ್ಲಿ ದರ್ಶನ್ ಕೊಟ್ಟಾಗ ಪೊನ್ನಂಬಳ ಬೆಟ್ಟದಲ್ಲಿ ವಾಸವಾಗಿರುವ ಆದಿವಾಸಿಗಳು ಸಂಭ್ರಮಾಚರಣೆ ಮಾಡಿದ್ದರು. ಅದೇ ರೀತಿ ಇಲ್ಲಿ ದರ್ಶನ ಕೊಟ್ಟ ಸ್ವಾಮಿಗೆ ಪೂಜೆ ರೂಪದಲ್ಲಿ ಪೊನ್ನಂಬಳ ಬೆಟ್ಟದಲ್ಲಿ ಮೂರು ಬಾರಿ ಕರ್ಪೂರ ಹೊತ್ತಿಸಿ ಪೂಜಿಸಲಾಗಿತ್ತು ಮೊದಲ ಕರ್ಪೂರ ಬೆಳಗಿದವರು ನಾರದ ಮುನಿಗಳು, ಎರಡನೇ ಪೂಜೆ ಗೈದವರು ದೇವರಾಜ ಇಂದ್ರ, ಮೂರನೇ ಪೂಜೆ ಮಾಡಿದವರು ಮಹರ್ಷಿ ಗುರು ಪರಶುರಾಮ . ಹೀಗೆ ಇದೆ ಪೂಜೆಯನ್ನು , ಅಥವಾ ಈ ಬೆಳಕನ್ನು ಮಕರ ವಿಳಕ್ಕು (ಬೆಳಕು) ಎಂದು ಕರೆಯುತ್ತಾರೆ.
ಈ ಒಂದು ಸಂಪ್ರದಾಯ ಈಗಲೂ ಆದಿವಾಸಿಗಳು ಮುಂದುವರೆಸಿಕೊಂಡು ಬಂದಿದ್ದಾರೆ. ಇದನ್ನೇ ದೇವಾಲಯದ ಟ್ರಸ್ಟ್ ಕೂಡ ಕೋರ್ಟ್ ಮುಂದೆ ಹೇಳಿತ್ತು, ಸ್ವಾಮಿ ರೂಪದಲ್ಲಿ ದರ್ಶನ ಕೊಡುವುದು ಉತ್ತರಾ ನಕ್ಷತ್ರ ಅದುವೇ ಮಕರ ಜ್ಯೋತಿ, ಆ ನಕ್ಷತ್ರಕ್ಕೆ ಪೂಜೆ ಸಲ್ಲಿಸುವ ಆ ಪರಿಕ್ರಮ ಮಕರ ಬೆಳಕು ಎಂದು ಹೇಳಿದೆ. ಇದನ್ನು ಮೂಡನಂಬಿಕೆ ಎಂದು ಆಡಿಕೊಳ್ಳುವ ಬುದ್ದಿ ಜೀವಿಗಳು ಇತಿಹಾಸ ತಿಳಿದು ಮಾತನಾಡಿದರೆ ಒಳಿತು. ಮೊದಲಿಗೆ ಮಕರ ಜ್ಯೋತಿ ಮತ್ತು ಆಕಾರ ಬೆಳಕಿನ ವ್ಯತ್ಯಾಸ ತಿಳಿಯಲು ನಂತರ ಇತಿಹಾಸ ತಿಳಿದು ಮಾತನಾಡಲಿ. ಸದಾ ನಂಬಿಕೆಗಳ ಮೇಲೆ ಹರಿಯುವ ಬುದ್ದಿ ಜೀವಿಗಳು ಎಲ್ಲವನ್ನೂ ಅರಿತು ಮಾತನಾಡಿದರೆ ಸಾಮರಸ್ಯ ಮೂಡಬಹುದು.