ಮಕ್ಕಳ ಮದುವೆಗೆಂದು ಮಾಡಿದ ಸಾಲ ತೀರಿಸಲಾಗದೆ ಮನೆ ಕಳೆದುಕೊಂಡು ಬೀದಿಗೆ ಬಿದ್ದ ತಂದೆ. ಇಂದು ಅವರನ್ನುಕರೆದೂ ಕೇಳದ ಮಕ್ಕಳು ಏನಿದು ಘಟನೆ?

376

ತಂದೆ ಎಂದರೆ ಕಣ್ಣಿಗೆ ಕಾಣುವ ದೇವರು ಎಂದು ಹೇಳುತ್ತದೆ ವೇದ ಪುರಾಣಗಳು. ಎಲ್ಲಾ ಸಮಯದಲ್ಲೂ ಎಲ್ಲವನ್ನೂ ಎದುರಿಸಲು ದೇವರು ಸದಾ ನಮ್ಮೊಂದಿಗೆ ಇರುವುದಿಲ್ಲ ಎಂಬ ಕಾರಣಕ್ಕೆ ದೇವರು ತಂದೆ ಮತ್ತು ತಾಯಿಯನ್ನು ಸೃಷ್ಟಿಸಿದ ಎಂದು ಹೇಳುತ್ತಾರೆ. ತಾಯಿ 9 ತಿಂಗಳು ಹೊತ್ತು ಹೆತ್ತರೆ, ತಂದೆ ಜೀವನದಲ್ಲಿ ಕಾಲ ಮೇಲೆ ನಿಲ್ಲುವ ವರೆಗೆ ಎಲ್ಲವನ್ನೂ ಮಾಡುತ್ತಾನೆ. ತನ್ನ ಎಲ್ಲಾ ಆಸೆ ಆಕಾಂಕ್ಷೆಗಳನ್ನು ದಾರೆ ಎರೆದು ತನ್ನ ಮಕ್ಕಳ ನಗುವಿಗಾಗಿ ತನ್ನ ಜೀವನ ಸವೆಸುತ್ತಾನೆ. ಆದರೆ ಕೊನೆ ಘಳಿಗೆಯಲ್ಲಿ ಮಕ್ಕಳು ತಂದೆಯ ಕೈ ಹಿಡಿಯದೇ ಹೋದರೆ ತಂದೆ ತಾಯಿಯರ ಪರಿಸ್ಥಿತಿ ಏನು ಎಂದು ಎಲ್ಲರೂ ಯೋಚಿಸಬೇಕು. ಅಂತಹದೇ ಘಟನೆ ಇದು ಬನ್ನಿ ತಿಳಿಯೋಣ ಏನೆಂದು.

ತಮಿಳುನಾಡು ಮೂಲದ ಈ ವ್ಯಕ್ತಿ ಹೆಸರು ಮಾದುಸ್ವಾಮಿ. ಮೂಲತಃ ಇವರು ಸಂಗೀತ ಹಾಡುವ ವೃತ್ತಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಊರಿನ ಮತ್ತು ಅಲ್ಲಿನ ಸುತ್ತಮುತ್ತಲಿನ ಊರಿನ ಎಲ್ಲಾ ಕಾರ್ಯಕ್ರಮಕ್ಕೂ ಇವರು ಸಂಗೀತ ಹಾಡಲು ಹೋಗುತ್ತಾ ಇದ್ದರು. ಅದರಲ್ಲೇ ಬಂದ ಅಲ್ಪ ಸ್ವಲ್ಪ ಹಣವನ್ನು ಕೂಡಿ ಮಗಳ ವಿಧ್ಯಾಭ್ಯಾಸ ಶಿಕ್ಷಣ ಹೀಗೆ ಎಲ್ಲವನ್ನೂ ನಿಭಾಯಿಸಿದರು. ಮದುವೆ ಸಮಯದಲ್ಲಿ ಹಣದ ಅಡಚಣೆ ಆದಾಗ ಸಾಲ ಪಡೆದು ಕೊಂಡಿದ್ದರು. ಆದರೆ ಮಗಳ ಮದುವೆ ನಂತರ ಕೆಲ್ಸವೂ ಇಲ್ಲದೆ ಕೈಯಲ್ಲಿ ಹಣವೂ ಇಲ್ಲದೆ ಮನೆಯನ್ನೇ ಜಪ್ತಿ ಮಾಡಿದರು.

ಮಗಳು ಸಹ ಅಪ್ಪನನ್ನು ಕರೆದು ಕೇಳಲಿಲ್ಲ. ಕೆಲಸ ಕೊಡುವವರು ಯಾರು ಇಲ್ಲ. ಮನೆಯಿಲ್ಲದೆ ಈಗ ಬಸ್ ಸ್ಟ್ಯಾಂಡ್ ಗಳಲ್ಲಿ ಮಲಗುವ ಪರಿಸ್ಥಿತಿ ಬಂದಿದೆ. ಸ್ವಲ್ಪ ಬಟ್ಟೆ ಮತ್ತು ಒಂದೆರಡು ಡಬ್ಬ ಬಿಟ್ಟು ತನ್ನ ಬಳಿ ಏನು ಇಲ್ಲ ಎನ್ನುತ್ತಿದ್ದಾರೆ. ಕೆಲಸ ಮಾಡಲು ಮನಸಿದೆ ಆದರೆ ಯಾರು ಕೆಲಸ ಕೊಡುತ್ತಿಲ್ಲ. 61 ವರ್ಷ ವಯಸ್ಸಾಗಿದೆ ನನಗೆ ಆದರೂ ಕೆಲಸ ಮಾಡಿಯೇ ತಿನ್ನಬೇಕು ಆದರೆ ಯಾರು ಕೆಲಸ ಕೊಡುತ್ತಿಲ್ಲ ಅದಕ್ಕೆ ಬೇಡಿ ತಿನ್ನುತ್ತಿದ್ದೇನೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಹೆತ್ತ ಮಕ್ಕಳು ತಮ್ಮ ತಂದೆ ತಾಯಿಯರನ್ನು ಕೊನೆ ಕಾಲದ ವರೆಗೆ ಸುಖವಾಗಿ ನೋಡಿಕೊಳ್ಳಬೇಕು. ತಮ್ಮ ಜೀವನ ಗಟ್ಟಿ ಆಯಿತೆಂದು ಹೆತ್ತವರ ಮರೆತರೆ ಮುಂದೆ ನಿಮ್ಮ ಮಕ್ಕಳು ನಿಮ್ಮದೇ ದಾರಿಯಲ್ಲಿ ನಡೆಯುತ್ತಾರೆ. ಆಗ ನಿಮಗೂ ನಿಮ್ಮ ಹೆತ್ತವರ ಪರಿಸ್ಥಿತಿ ಬರುತ್ತದೆ. ಯೋಚಿಸಿ ಉತ್ತಮ ನಿರ್ಧಾರ ತೆಗೆದುಕೊಂಡು ಮಾದರಿಯಾಗಿ. ಈ ಲೇಖನ ನ್ಯೂಇಂಡಿಯಾನ್ ಎಕ್ಸ್ಪ್ರೆಸ್ ಅಲ್ಲಿ ಪ್ರಕಟವಾಗಿದೆ. ಇದರ ಆಧಾರದ ಮೇಲೆ ಈ ಲೇಖನ ನಾವು ಬರೆದಿದ್ದೇವೆ.

Leave A Reply

Your email address will not be published.