ಮಗನ ಬಳಿ ಫ್ಯಾನ್ ರಿಪೇರಿ ಮಾಡುವಂತೆ ಹೇಳಿದ ತಾಯಿ, ಮಾಡದ ಮಗನಿಗೆ ಮಾಡಿದ್ದೇನು ಗೊತ್ತೇ?
ಮನೆ ಎಂದರೆ ಹಾಗೆ ನೋಡಿ ಇಲ್ಲಿ ಅಮ್ಮನೇ ಮುಖ್ಯ ಭೂಮಿಕೆಯಲ್ಲಿ ಇರುತ್ತಾರೆ. ಅಪ್ಪ ಬರಿ ಸೈಡ್ ಶೋ ನಲ್ಲಿ ಇದ್ದ ಹಾಗೆ. ಅವರದ್ದು ಏನು ನಡೆಯುವುದಿಲ್ಲ ಏನಿದ್ದರೂ ಹೋಂ ಮಿಸ್ಟ್ರೆಸ್ ಮಾತ್ರ. ಅಮ್ಮ ಎಂದರೆ ಹಾಗೆ ಒಂದಿಲ್ಲ ಒಂದು ಕೆಲಸ ಹೇಳುತ್ತಲೇ ಇರುತ್ತಾರೆ. ಅದನ್ನು ಮಾಡದೆ ಮೂರ್ನಾಲ್ಕು ಬಾರಿ ಬೈಸಿಕೊಂಡು ಮತ್ತೆ ಆಕೆಯೇ ಮಾಡುವುದು ಉಂಟು. ಆದರೆ ಕೆಲವೊಂದು ಕೆಲಸ ಆಕೆಗೆ ಮಾಡಲು ಆಗುವುದಿಲ್ಲ ಆಗ ಆಕೆ ಮಾಡುವ ವರೆಗೂ ಏನಾದರೂ ಹೇಳುತ್ತಲೇ ಇರುತ್ತಾಳೆ. ಆದರೆ ಇಲ್ಲೊಬ್ಬ ತಾಯಿ ಮಾಡಿದ ಕೆಲಸ ಏನು ಗೊತ್ತೇ ಬನ್ನಿ ತಿಳಿಯೋಣ.
ತನ್ನ ಮಗನನ್ನು ಒಳ್ಳೆಯ ರೀತಿಯಲ್ಲಿ ಇಂಜಿನಿಯರಿಂಗ್ ಪದವಿ ಓದಿಸಿದ್ದಳು ತಾಯಿ. ಎಲ್ಲರಂತೆ ಒಬ್ಬ ದೊಡ್ಡ ವ್ಯಕ್ತಿ ಆಗಬೇಕು ಎಂಬುವುದು ಆಕೆಯದು ಕೂಡ ಕನಸು. ಆದರೆ ಏನು ಮಾಡುವುದು ಭಾರತದ ಅಮ್ಮಂದಿರೆ ಹೀಗೆ ನೋಡಿ. ತನ್ನ ಮಗ ಕಲಿತದ್ದು ಎಲೆಕ್ಟ್ರಿಕ್ ಎಂಜಿನಿಯರಿಂಗ್ . ಮನೆಯಲ್ಲಿ ಫ್ಯಾನ್ ಹಾಳಾಗಿದೆ ಸರಿ ಮಾಡು ಎಂದಿದ್ದಾಳೆ. ಮಗ ಮಾತ್ರ ಅದನ್ನು ಕಿವಿಗೆ ಹಾಕಿಕೊಳ್ಳದೆ ಸೋಂಬೇರಿ ಹಾಗೆ ವರ್ತನೆ ಮಾಡಿದ್ದಾನೆ. ತಾಯಿ ನಿನ್ನನ್ನು ಕಲಿಸಿದ್ದು ವ್ಯರ್ತಃ ಎಲೆಕ್ಟ್ರಿಕ್ ಎಂಜಿನಿರಿಂಗ್ ಕಲಿತು ಒಂದು ಫ್ಯಾನ್ ರಿಪೇರಿ ಮಾಡಲು ಆಗುವುದಿಲ್ಲ ಎಂದು ಬೈದಿದ್ದಾರೆ.
ಆದರೂ ಆತ ಆಕೆಯನ್ನು ಪರಿಗಣಿಸದೆ ಸುಮ್ಮನಿದ್ದ. ಅದೇ ಆಟ ಮಾಡಿದ ತಪ್ಪು . ತಾಯಿ ಸಿಟ್ಟಿನಿಂದ ಮನೆಯಲ್ಲಿ ಹಾಳಾದ ಒಂದು ಫ್ಯಾನ್ ಸರಿ ಮಾಡಲು ಆಗದವನಿಗೆ ಎಲೆಕ್ಟ್ರಿಕ್ ಎಂಜಿನಿಯರಿಂಗ್ ಪದವಿ ಯಾಕೆ ಎಂದು ಹೇಳಿ ಆತನ ಡಿಗ್ರಿ ಸರ್ಟಿಫಿಕೇಟ್ ಅನ್ನು ಹರಿದು ಹಾಕಿದ್ದಾರೆ. ಹೌದು ಓದುವಾಗ ನಿಮಗೂ ನಗು ಬರುತ್ತದೆ ಆದರೆ ಇದು ಸತ್ಯ ವಿಚಾರ. ಅದಕ್ಕೆ ಅಮ್ಮಂದಿರ ಮಾತನ್ನು ಸದಾ ಪಾಲಿಸಿ ಅವರ ಕೋಪಕ್ಕೆ ತುತ್ತಾದರೆ ಸಮಸ್ಯೆ ಆಗುತ್ತದೆ ಎಂಬುದಕ್ಕೆ ಇದೇ ನಿದರ್ಶನ.