ಮತ್ತೊಮ್ಮೆ ಭವಿಷ್ಯ ನುಡಿದ ಕೋಡಿ ಮಠ ಶ್ರೀ ಗಳು. ಮುಂದಿನ ದಿನಗಳಲ್ಲಿ ಏನಾಗಲಿದೆ?
ವಿಶ್ವಸಮುಧಾಯಕ್ಕೆ ಕೋರೋಣ ಮಹಾಮಾರಿ ಬಂದು ನಲುಗಿಹೋಗಿದೆ. ಪ್ರತಿ ನಿತ್ಯ ಸಾವು ನೋವುಗಳದ್ದೇ ಸುದ್ದಿ, ೨೦೧೯ ರಲ್ಲಿ ಬಂದ ಈ ಸಾಂಕ್ರಾಮಿಕ ರೋಗದಿಂದ ಜನ ಜೀವನ ಅಸ್ತವ್ಯಸ್ತ ವಾಗಿದೆ. ಚೀನಾದಲ್ಲಿ ಶುರುವಾದ ಈ ಮಾರಿ ಇಡೀ ವಿಶ್ವವನ್ನೇ ವ್ಯಾಪಿಸಿದೆ. ಬಡವರು ಮಾತ್ರವಲ್ಲದೆ ಶ್ರೀಮಂತರನ್ನು ಬಿಡದ ಈ ಕೋರೋಣ ಎಲ್ಲರನ್ನು ಬಳಿ ಪಡೆದಿದೆ. ದಿನಗೂಲಿ ಕಾರ್ಮಿಕರ ಬದುಜು ಅಸ್ಥಿರವಾಗಿದೆ. ದೇಶದ ಆರ್ಥಿಕತೆ ಅಭಿವೃದ್ಧಿ ಪಥಕ್ಕೆ ಸಾಗುವುದನ್ನೇ ನಿಲ್ಲಿಸಿದೆ. ಇಡೀ ವಿಶ್ವದ ಜನರು ಅವರವರು ನಂಬುವ ದೇವರಲ್ಲಿ ಕೇಳಿಕೊಳ್ಳುವುದು ಒಂದೇ, ಕೋರೋಣ ಶೀಘ್ರದಲ್ಲೇ ನಿಲ್ಲಲಿ ಎಂದು.
ಇದರ ನಡುವೆ ಕೋಡಿ ಮಠದ ಶ್ರೀ ಡಾ. ಶಿವಾನಂದ ಶಿವಯೋಗಿ ಸ್ವಾಮೀಜಿಯವರು ಮತ್ತೊಮ್ಮೆ ಭವಿಷ್ಯ ನುಡಿದ್ದಾರೆ. ತಮ್ಮ ನಿಖರ ಭವಿಷ್ಯದಿಂದ ಖ್ಯಾತರಾಗಿರುವ ಕೋಡಿ ಮಠದ ಸ್ವಾಮೀಜಿ ಕೋರೋಣ ಸಾಂಕ್ರಾಮಿಕ ರೋಗದ ಬಗ್ಗೆ ಭವಿಷ್ಯ ನುಡಿದ್ದಾರೆ. ಕೋರೋಣ ಮಹಾಮಾರಿ ಹೋಗಲು ಇನ್ನು ಹತ್ತು ವರ್ಷ ಬೇಕಾಗುತ್ತದೆ ಎಂದಿರುವ ಸ್ವಾಮಿಗಳು, ಇದಕ್ಕಿಂತಲೂ ದೊಡ್ಡ ಮಾರಣಾಂತಿಕ ಕಾಯಿಲೆ ಬರಲಿದೆ ಎಂದು ಹೇಳಿದ್ದಾರೆ.
ಅಷ್ಟೇ ಅಲ್ಲದೆ ಜನರು ಹೋಗ ಹೋಗುತ್ತಲೇ ಬಿದ್ದು ಸಾಯುತ್ತಾರೆ, ಸತ್ತ ನಂತರ ಹೂಳಲ್ಪಟ್ಟವರು ಎದ್ದು ಬಂದು ಮಾತಾಡುತ್ತಾರೆ, ದೊಡ್ಡ ದೊಡ್ಡ ತಲೆಗಳು ಬಿಳಲಿವೆ ಎಂದು ಭವಿಷ್ಯ ನುಡಿದ್ದಾರೆ. ಭೂಮಿಯಲ್ಲಿ ಕೋಟ್ಯಂತರ ಜನರು ಸತ್ತು ಹೂಳಲ್ಪಟ್ಟಿದ್ದಾರೆ ಅಂತವರು ವಿಷದ ರೂಪದಲ್ಲಿ ಎದ್ದು ಬರುತ್ತಾರೆ ಎಂದು ಹೇಳಿದ ಸ್ವಾಮೀಜಿಗಳು, ಕರ್ನಾಟಕದಲ್ಲಿ ಇಂತಹ ತೊಂದರೆ ಜಾಸ್ತಿ ಇರುವುದಿಲ್ಲ ಎಂದು ಹೇಳಿದ್ದಾರೆ. ಈಗಾಗಲೇ ಮಠದಲ್ಲಿ ಜಪ ತಪ ಹೋಮ ಹವನಾದಿಗಳನ್ನು ಮಾಡುತ್ತಿದ್ದು ಶೀಘ್ರದಲ್ಲಿಯೇ ಈ ಸಾಂಕ್ರಾಮಿಕ ರೋಗ ಹೋಗಲಿ ಎಂದು ಪ್ರಾರ್ಥಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಈ ರೋಗದಿಂದ ಲಕ್ಷಾಂತರ ಜನ ಸಾಯುತ್ತಿದ್ದಾರೆ, ಇದರಿಂದ ಮುಕ್ತಿ ಪಾಲಿಸುವಂತೆ ಮಠದಲ್ಲಿ ಹೋಮ ಹವಾನ ನಡೆಸುತ್ತಿದೆ ಎಂದು ಹೇಳಿದ್ದಾರೆ.