ಮತ್ತೊಮ್ಮೆ ವಿಚಿತ್ರ ಕಾನೂನು ತಂದ ಉತ್ತರ ಕೊರಿಯಾ. ಇನ್ನು 11 ದಿನಗಳ ಕಾಲ ನಗಾಡುವಂತೆ ಇಲ್ಲ ಯಾಕೆ ಏನಿದು ಹೊಸ ಆದೇಶ?

926

ನಾರ್ತ್ ಕೊರಿಯಾ ಅಂದರೆ ಹಾಗೆ ನೋಡು ಒಂದಲ್ಲ ಒಂದು ವಿಚಾರದಲ್ಲಿ ಸದಾ ಸುದ್ದಿಯಲ್ಲಿ ಇರುತ್ತದೆ. ತನ್ನ ಸೆಕ್ಯುಲರ್ ಆಡಳಿತ ನಿತಿಯಿಂದಲೆ ಹೆಸರುವಾಸಿ ಆಗಿರುವ ದೇಶ ಇದು. ಕಿಮ್ ಜಾಂಗ್ ಅವರ ಈ ರೀತಿಯ ಆಡಳಿತ ವೈಖರಿ ಸದಾ ಸುದ್ದಿಯಲ್ಲಿರುತ್ತದೆ. ಈ ಮಟ್ಟಿನಲ್ಲಿ ಕಿಮ್ ಜಾಂಗ್ ಮಾತ್ರ ಅಲ್ಲ ಈ ಹಿಂದಿನ ಅಧ್ಯಕ್ಷರು ಕೂಡ ಹೀಗೆ. ರಾಷ್ಟ್ರದ ದೊರೆಯ ವಿರುದ್ಧ ಯಾರು ಹೋಗುವಂತೆ ಇಲ್ಲ. ಅಂತಹುದು ಏನಾದರೂ ಸಂಭವಿಸಿದಲ್ಲಿ ಅವರಿಗೆ ಅದೇ ಕೊನೆಯ ದಿನ ಎಂದರೂ ತಪ್ಪಾಗಲಿಕ್ಕಿಲ್ಲ. ಅಂತಹ ಆಡಳಿತ ವೈಖರಿಯಿಂದ ಜನರು ಕೂಡ ಬೇಸತ್ತು ಹೋಗಿದ್ದಾರೆ. ಈಗ ಅಂತಹುದೇ ಮತ್ತೊಂದು ನಿರ್ಧಾರದಿಂದ ನಾರ್ತ್ ಕೊರಿಯಾ ಸುದ್ದಿಯಲ್ಲಿದೆ ಏನಿದು ವಿಚಾರ ಬನ್ನಿ ತಿಳಿಯೋಣ.

ನಗು ಸಂತಸ ಎಂದರೆ ಯಾರಿಗೆ ತಾನೆ ಬೇಡ ನೋಡಿ. ಅದು ಜೀವನದ ಒಂದು ಅವಿಭಾಜ್ಯ ಅಂಗ. ಸದಾ ನಗುತ್ತಾ ಇದ್ದರೆ ನಮ್ಮ ಆಯುಷ್ಯ ಕೂಡ ಹೆಚ್ಚಾಗುತ್ತದೆ. ಆದರೆ ಈಗ ನಾರ್ತ್ ಕೊರಿಯಾದಲ್ಲಿ ನಗುವುದನ್ನು ಕೂಡ ನಿಷೇಧಿಸಿದೆ ಅಲ್ಲಿನ ಸರ್ಕಾರ. ನಾರ್ತ್ ಕೊರಿಯಾದ ಪೂರ್ವ ಅಧ್ಯಕ್ಷ ಕಿಮ್ ಜಾಂಗ್ ಇಲ್ ಅವರ 10 ನೇ ವರ್ಷದ ಪುಣ್ಯ ಸ್ಮರಣೆ ಅದಕ್ಕಾಗಿ ನಾರ್ತ್ ಕೊರಿಯಾದಲ್ಲಿ 11 ದಿನಗಳ ಕಾಲ ಯಾವುದೇ ಸಂಭ್ರಮಾಚರಣೆ ನಿಷೇಧಿಸಿದೆ ಮತ್ತು ಯಾರು ಕೂಡ ಸಂತಸ ವ್ಯಕ್ತ ಪಡಿಸಿ ನಗುವಂತೆ ಇಲ್ಲ ಎಂದು ಸರ್ಕಾರ ಆದೇಶ ಹೊರಡಿಸಿದೆ. ವಿಚಿತ್ರ ಎನಿಸಿದರೂ ಇದು ಸತ್ಯ ಸಂಗತಿ. ಇಂತಹ ಒಂದಿಲ್ಲ ಒಂದು ನಿರ್ಧಾರಗಳಿಂದಲೇ ಸದಾ ಸುದ್ದಿಯಲ್ಲಿ ಇರುತ್ತದೆ ನಾರ್ತ್ ಕೊರಿಯಾ.

Leave A Reply

Your email address will not be published.