ಮನೆ ಬಿಟ್ಟು ಮುಂಬೈಗೆ ಓಡಿ ಕ್ಯಾಂಟೀನ್ ನಲ್ಲಿ ಪಾತ್ರೆ ತೊಳೆಯುತ್ತಿದ್ದ ಈ ಹುಡುಗ ಇಂದು ಹಲವಾರು ಹೋಟೆಲುಗಳ ಮಾಲೀಕರು ? ಯಾರಿವರು?

1,971

ಜೀವನ ಎಂದರೆ ಹಾಗೆ ನೋಡಿ ಕಷ್ಟಗಳು ಬಂದೆ ಬರುತ್ತದೆ. ಕಷ್ಟ ಎಂದು ಯೋಚಿಸುತ್ತಾ ಕುಳಿತರೆ ಕಷ್ಟದಲ್ಲಿ ಕಾಲ ಕಳೆಯುವ ಪರಿಸ್ಥಿತಿ ಬರುತ್ತದೆ. ಅದನ್ನು ಬಿಟ್ಟು ಕಷ್ಟದಿಂದ ಹೊರ ಬರಲು ಯೋಜನೆಗಳ ಹಾಕಿದರೆ, ಕಷ್ಟವನ್ನು ಮೆಟ್ಟಿ ನಿಲ್ಲಬಹುದು. ಅಂತಹುದೇ ಒಂದು ಪ್ರೇರೇಪಿಸುವ ಕಥೆ ಇವರದ್ದು. ಹೌದು ಅಂದು ಕಷ್ಟ ಎಂದು ಕೆಲಸದ ಅವಶ್ಯಕತೆಗೆ ಬಿದ್ದು ಹೋಟೆಲ್ ಕ್ಯಾಂಟೀನ್ ಗಳಲ್ಲಿ ಪಾತ್ರೆ ತೊಳೆಯುತ್ತಿದ್ದ ವ್ಯಕ್ತಿ ಅಲ್ಲೇ ದುಡಿದು ಬೆಳೆದು ಹಲವಾರು ಹೋಟೆಲುಗಳ ಸ್ಥಾಪಿಸಿದ ಯಶೋಗಾಥೆ ಇದು. ಬನ್ನಿ ತಿಳಿಯೋಣ ಅವರ ಬಗ್ಗೆ.

ಉಡುಪಿಯ ಕಾರ್ಕಳದ 13 ವರ್ಷದ ಆ ಪೋರ ಕಲಿಯುದರಲ್ಲಿ ಸ್ವಲ್ಪ ಹಿಂದೆ. ಅದೆಷ್ಟು ಓದಿದರು ತಲೆಗೆ ಹತ್ತುವುದಿಲ್ಲ. ಅದೇನೋ ಪರೀಕ್ಷೆಯಲ್ಲಿ ಫೇಲ್ ಆದೆ ಎಂದು ಅಪ್ಪನ ಪೆಟ್ಟನ್ನು ತಪ್ಪಿಸಲು ಊರು ಬಿಟ್ಟು ಮುಂಬೈಗೆ ಹಾರಿದ್ದ . ಅಲ್ಲಿ ಹೋಟೆಲ್ ಒಂದರಲ್ಲಿ ಪಾತ್ರೆ ತೊಳೆಯಲು ಕೆಲಸಕ್ಕೆ ಸೇರಿಕೊಂಡ. ಹೀಗೆ ಕೆಲಸ ಮಾಡುತ್ತಿದ್ದರು ಮನಸಿನಲ್ಲಿ ಒಂದು ಛಲ. ಆಳಾಗಿ ಬಂದೆ ಅರಸನಾಗಿ ಹೋಗುವೆ ಎಂದು. ಹೀಗೆ ಕಷ್ಟಪಟ್ಟು ಕೆಲಸ ಮಾಡುತ್ತಿದ್ದ ಹುಡುಗನ ಶ್ರಮ ವ್ಯರ್ವಾಗಲಿಲ್ಲ. ಪಾತ್ರೆ ತೊಳೆಯುತ್ತಿದ್ದ ಹುಡುಗ ವೈಟರ್ ಆದ, ಅಲ್ಲಿಂದ ಮ್ಯಾನೇಜರ್ ಆದ ನಂತರ ತನ್ನದೇ ಸ್ವಂತ ಹೋಟೆಲ್ ಒಂದು ಆರಂಭಿಸಿದ. ಹೀಗೆ ಆರಂಭವಾದ ಹೋಟೆಲ್ ಅವರ ಪರಿಶ್ರಮದ ಫಲವೋ ಏನೋ ಎಂಬಂತೆ ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿತು.

ಅವರು ಮತ್ಯಾರು ಅಲ್ಲ ಸಾಗರ ರತ್ನ ಹೋಟೆಲ್ ಗ್ರೂಪ್ ನ ಒಡೆಯ” ಜಯರಾಂ ಬನಾನ್”. ಇಂದು ಅವರು 172 ಕೋಟಿ ಮೌಲ್ಯದ ಹೋಟೆಲ್ ಉದ್ಯಮದ ದೊರೆ. ಅದೇನೇ ಆಗಲಿ ಪಟ್ಟ ಪರಿಶ್ರಮ ಅವರ ಕೈ ಬಿಡಲಿಲ್ಲ. ವಿದ್ಯೆ ಒಂದೇ ಸಾಲದು ವಿದ್ಯೆಯ ಜೊತೆಗೆ ಜೀವನದಲ್ಲಿ ಏನಾದರೂ ಸಾಧಿಸುವ ಛಲ ಬೇಕು ಆಗ ಮಾತ್ರ ಜೀವನದಲ್ಲಿ ಮುಂದಕ್ಕೆ ಬರಬಹುದು. ಅದಕ್ಕೆ ಜಯರಾಂ ಬಾನಾನ್ ಅವರೇ ನೈಜ ಉದಾಹರಣೆ. ಕಲಿತದ್ದು ಕಡಿಮೆ ಆದರೂ ಜೀವನದ ಪಾಠ ತುಂಬಾ ಕಲಿತಿದ್ದರು. ಆ ಅನುಭವಗಳೇ ಅವರನ್ನು ಕೈ ಹಿಡಿದು ನಡೆಸಿದೆ ಎಂದರೂ ತಪ್ಪಾಗಲಾರದು.

Leave A Reply

Your email address will not be published.