ಮರ್ಸಿಡಿಸ್ ಕಂಪನಿಯ ಕೆಲಸ ಬಿಟ್ಟು ಚಾಟ್ ಸ್ಟಾಲ್ ಹಾಕಿ ಇಂದು ಗಳಿಸುತ್ತಿರುವ ಸಂಪಾಧನೆ ಎಷ್ಟು ಗೊತ್ತೇ?

1,264

ದೊಡ್ಡ ದೊಡ್ಡ ಕಂಪನಿಗಳಲ್ಲಿ ದುಡಿಯುವುದು ಎಂದರೆ ಅದೆಷ್ಟೋ ಜನರ ಕನಸು. ತುಂಬಾ ಜನರು ಇದರಲ್ಲಿ ಯಶಸ್ಸು ಕಾಣುವುದಿಲ್ಲ ಬದಲಾಗಿ ಪೈಪೋಟಿಯಲ್ಲಿ ಮುಂಚೂಣಿಯಲ್ಲಿ ಇದ್ದವರು ಗೆಲ್ಲುತ್ತಾರೆ. ಇವತ್ತು ನಾವು ತಿಳಿಯಲು ಹೊರಟ ಈ ವ್ಯಕ್ತಿ ಅಂತಹುದೇ ದೊಡ್ಡ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸದಲ್ಲಿ ಇದ್ದವರು. ಹೌದು ಅವರ ಹೆಸರು ಅಭಿಷೇಕ್ ಅಂತ. ಅವರು ಬೆಂಗಳೂರಿನ ಮರ್ಸಿಡಿಸ್ ಕಂಪನಿಯಲ್ಲಿ ಟ್ರಾನ್ಸ್ಲೇಟರ್ ಕೆಲಸ ಮಾಡುತ್ತಿದ್ದರು. ಆದರೆ ಕೋರೋನ ಎಂಬ virus ಯಾರನ್ನು ಕೂಡ ಬಿಟ್ಟಿಲ್ಲ.

ಎಂತಹ ವ್ಯಕ್ತಿ ಆದರೂ ಒಮ್ಮೆ ನಿದ್ದೆಯಲ್ಲಿ ಎದ್ದು ಕೇಳಿದರೂ ಭಯ ಪಡುವ ಸಂಗತಿ.ಹೀಗೆ ಕೋರೋನದಿಂದಾಗಿ ಹೆಚ್ಚಿನ ಜನರು ತ’ತ್ತರಿಸಿ ಹೋದ ಹಾಗೆ ಇವರ ಬಾಳು ಕೂಡ. ದೊಡ್ಡ ಕಂಪನಿಯಲ್ಲಿ ಕೆಲಸ ಮಾಡುವ ಆಸೆಯೇನೋ ಈಡೇರಿತ್ತು ಆದರೆ ಅದು ಹೆಚ್ಚು ಕಾಲ ಉಳಿಯಲಿಲ್ಲ. ಕೋರೋನ ಮಹಾಮಾರಿ ಅಟ್ಟಹಾಸಕ್ಕೆ ಅವರು ತಮ್ಮ ಉದ್ಯೋಗ ಕಳೆದುಕೊಂಡರು. ಏನು ಎತ್ತ ಎಂದು ತೋಚದೇ ಕಂಗಾಲಾದ ಇವರು ಹೆಚ್ಚು ಯೋಚನೆ ಮಾಡದೆ ತಮಗೆ ಕೈಗತವಾದ ಚಾಟ್ ತಯಾರಿಸುವ ಸಣ್ಣ ಸ್ಟಾಲ್ ಒಂದನ್ನು ಹಾಕಿದರು.

ತಾವು ದುಡಿದು ಉಳಿಸಿದ ಅಲ್ಪ ಹಣವನ್ನು ಇದಕ್ಕೆ ಹೂಡಿಕೆ ಮಾಡಿದರು. ಇವರ ನಿಷ್ಠೆ ಮತ್ತು ಕೆಲಸದ ಮೇಲಿನ ಪ್ರೀತಿ ಇವರನ್ನು ಸೋಲಲು ಬಿಡಲಿಲ್ಲ. ದಿನದಿಂದ ದಿನಕ್ಕೆ ಉತ್ತಮವಾಗುತ್ತಾ ಹೋಯಿತು. ಹೀಗೆ ಆರಂಭಿಸಿದ ವಹಿವಾಟು ಈಗ ಏನಿಲ್ಲ ಎಂದರೂ ತಿಂಗಳಿಗೆ ಎರಡು ಲಕ್ಷ ತನಕ ಲಾಭ ಬರುತ್ತಿದೆ ಎನ್ನುತ್ತಿದ್ದಾರೆ ಅಭಿಷೇಕ್. ಅದೇನೇ ಆಗಲಿ ನಾವು ಕಲಿತ ಉದ್ಯೋಗ ಬೇಕು ಎಂದು ಕೂರುವ ಜನಗಳ ಮಧ್ಯೆ ತಮ್ಮ ಆಸಕ್ತಿಯನ್ನು ಶಕ್ತಿಯಾಗಿ ಪರಿವರ್ತಿಸಿ ಯಶಸ್ಸು ಕಂಡ ಇವರಿಗೆ ನಮ್ಮದೊಂದು ಸಲಾಂ.

Leave A Reply

Your email address will not be published.