ಮಹಿಳೆಯಿಂದ ಕೃಷಿ ಮಾಡಲು ಸಾಧ್ಯವಿಲ್ಲ ಅಂತ ಹೀಯಾಳಿಸಿದರು. ಇದೀಗ ವರ್ಷಕ್ಕೆ 30 ಲಕ್ಷದವರೆಗೆ ದುಡಿದು ಅವರ ಮಾತು ತಪ್ಪು ಎಂದು ಸಾಬೀತುಪಡಿಸಿದ್ದಾರೆ?
ಭಾರತ ದೇಶದ ಬೆನ್ನೆಲುಬು ಕೃಷಿ ಹಾಗು ರೈತರು. ಇದರಿಂದ ಅನೇಕ ಮನೆಗಳು ಬೆಳಗುತ್ತಿದೆ. ಪುರುಷರು ಹಾಗು ಮಹಿಳೆಯರು ಕೂಡ ಈ ಕೃಷಿ ಮಾಡಲು ಇಂದಿನ ಕಾಲದಲ್ಲಿ ಉತ್ಸುಕರಾಗಿದ್ದಾರೆ. ಆದರೆ ದೇಶದ ಕೆಲವು ಕಡೆ ಮಹಿಳೆಯರು ಸ್ವತಂತ್ರವಾಗಿ ಏನನ್ನು ಸಾಧನೆ ಮಾಡಲು ಹೊರಟರೆ ಅವರನ್ನು ಹೀಯಾಳಿಸುವುದು ನಾವು ಬಹಳ ಕಡೆ ಕಂಡಿದ್ದೇವೆ. ಇದು ಮಹಿಳೆಯರಿಗೆ ಮಾತ್ರ ಅಲ್ಲದೆ ಪ್ರತಿ ಮನುಷ್ಯನಿಗೂ ಆಗುವ ಅನುಭವ. ಅವರ ಆ ನಿಂದನೆ ಮಾತಿನಿಂದ ದೃತಿ ಗೆಡದೆ ಅವರ ಮಾತು ತಪ್ಪು ಎಂದು ಸಾಬೀತು ಪಡಿಸಿದ್ದಾರೆ ಈ ಕೃಷಿ ಅವಲಂಬಿತ ಮಹಿಳೆ ಸಂಗೀತ.
ನಾಸಿಕ್ ನಲ್ಲಿ ಒಂದು ಸುಂದರ ಹಾಗು ಖುಷಿಯ ಸಂಸಾರವಾಗಿ ಇದ್ದ ಸಂಗೀತ ಮೊದಲನೆಯದಾಗಿ ತನ್ನ ಮಗುವನ್ನು ಕಳೆದುಕೊಂಡರು, ನಂತರ ಪತಿ ಅದಾದ ನಂತರ ತನ್ನ ಮಾವನನ್ನು ಕಳೆದು ಕೊಂಡು ಅನಾಥರಾದರು. ಮುಂದೆ ಏನು ಮಾಡುವುದು ಎಂದು ತೋಚುತ್ತಿರಲಿಲ್ಲ. ತನ್ನ ಇಬ್ಬರು ಮಕ್ಕಳ ಹೊಟ್ಟೆಪಾಡಿಗಾಗಿ ಏನು ಮಾಡುವುದು ಎಂದು ಚಿಂತೆ ಮಾಡುತ್ತಿದ್ದರು. ಆದರೂ ದೃತಿ ಗೆಡದೆ ತಮಗೆ ಇದ್ದ ಜಮೀನಿನಲ್ಲಿ ಬೆಳೆದು ತಾನು ಹಾಗು ಮಕ್ಕಳನ್ನು ಬೆಳೆಸಬೇಕೆಂದು ನಿರ್ಧಾರ ಮಾಡಿದರು ಸಂಗೀತ. ಜನರು ಅವರನ್ನು ಮೋಸಗೊಳಿಸಲು ಕೂಡ ಪ್ರಯತ್ನಪಟ್ಟರು ಆದರೂ ಯಾರ ಕಪಟಕ್ಕೆ ಸಿಲುಕದೆ ಯಾರ ಮಾತಿಗೂ ಕಿವಿ ಕೊಡದೆ ದ್ರಾಕ್ಷಿ ಕೃಷಿ ಮಾಡಿ ಇಂದು ವರ್ಷಕ್ಕೆ ೩೦ ಲಕ್ಷ ಸಂಪಾಧನೆ ಮಾಡುತ್ತಿದ್ದಾರೆ.
ತನ್ನ ಕುಟುಂಬದವರೆಲ್ಲರೂ ತನ್ನನ್ನು ಬಿಟ್ಟು ಹೋದರು ಕೂಡ ತನ್ನ ಮಾವ ಬಿಟ್ಟು ಹೋದ ೧೩ ಎಕರೆ ಜಾಗ ಮಾತ್ರ ತನ್ನೊಂದಿಗಿತ್ತು. ಕೃಷಿ ಒಂದೇ ತನ್ನ ಅಧಾಯದ ಮೂಲವಾಗಿತ್ತು. ಈ ೧೩ ಎಕರೆಯಲ್ಲಿ ಟೊಮೇಟೊ ಹಾಗು ದ್ರಾಕ್ಷಿ ಬೆಳೆಯುವ ಮೂಲಕ ತನ್ನನ್ನು ಹೀಯಾಳಿಸುತ್ತಿದ್ದವರ ಬಾಯಿ ಮುಚ್ಚಿಸಿದ್ದಾರೆ. ಅವರು ಕೃಷಿ ಮಾಡುತ್ತಿದ್ದಾಗ ಕೆಲವೊಮ್ಮೆ ಪಂಪ್ ಸೆಟ್ ಹಾಳಾದರೆ, ಇನ್ನು ಕೆಲವೊಮ್ಮೆ ಅಕಾಲಿಕ ಮಳೆ ಇಂದ ಬೆಳೆ ಹಾಳಾಗುತ್ತಿತ್ತು. ಕೀಟದ ಸಮಸ್ಯೆ ಒಂದೆಡೆಯಾದರೆ ಕಾರ್ಮಿಕರ ಸಮಸ್ಯೆ ಇನ್ನೊಂದೆಡೆ. ಇದೆಲ್ಲವನ್ನು ಏಕಾಂಗಿಯಾಗಿ ಎದುರಿಸಬೇಕಾಗಿತ್ತು ಸಂಗೀತ.
ಅಷ್ಟು ಕಷ್ಟ ಪಟ್ಟರು ಕೂಡ ಅದರ ಫಲ ಒಳ್ಳೆಯದೇ ಆಗಿತ್ತು. ಅವರ ಜಮೀನಿನಲ್ಲಿ ಈಗ ಪ್ರತಿ ವರ್ಷ ೮೦೦ ರಿಂದ ೧೦೦೦ ಟನ್ ದ್ರಾಕ್ಷಿಯನ್ನು ಉತ್ಪಾದಿಸುತ್ತಿದ್ದಾರೆ. ಇದರಿಂದ ಅವರು ವಾರ್ಷಿಕವಾಗಿ ೨೫ ರಿಂದ ೩೦ ಲಕ್ಷದವರೆಗೆ ಸಂಪಾಧನೆ ಮಾಡುತ್ತಿದ್ದಾರೆ. ಅದರ ಜೊತೆ ಟೊಮೊಟೊ ಕೂಡ ಬೆಳೆಯುತ್ತಿದ್ದಾರೆ. ಇದು ಸಣ್ಣ ಪ್ರಮಾಣದಲ್ಲಿ ಬೆಳೆ ಬೆಳೆಯಲಾಗುತ್ತಿದೆ. ಸಂಗೀತ ಅವರ ಮಗಳು ಪದವಿ ವ್ಯಾಸಂಗ ಮಾಡುತ್ತಿದ್ದಾರೆ ಹಾಗು ಅವರ ಮಗ ಖಾಸಗಿ ಶಾಲೆಯಲ್ಲಿ ಓದುತ್ತಿದ್ದಾರೆ. ತಮ್ಮ ಅಧಯವನ್ನು ಹೆಚ್ಚಿಸಲು ಮುಂದಿನ ವರ್ಷದಿಂದ ದ್ರಾಕ್ಷಿ ಹಾಗು ಟೊಮೊಟೊ ಅನ್ನು ರಫ್ತು ಮಾಡಲು ಯೋಚಿಸುತ್ತಿದ್ದಾರೆ ಸಂಗೀತ.