ಮಾವಿನ ಹಣ್ಣು ಕದ್ದು ರೆಡ್ ಹ್ಯಾಂಡ್ ಸಿಕ್ಕಿ ಬಿದ್ದ ಪೊಲೀಸ್: ವಿಚಾರಣೆಯಲ್ಲಿ ಈತನ ಹಿನ್ನೆಲೆ ತಿಳಿದ ಬಳಿಕ ದೇಶವೇ ಶಾಕ್ ಆಗಿದ್ದು ಯಾಕೆ ಗೊತ್ತೇ??
ಕೇರಳದಲ್ಲಿ ಪೊಲೀಸ್ ಅಧಿಕಾರಿ ಒಬ್ಬರ ವಿಚಾರದಲ್ಲಿ ಒಂದು ಘಟನೆ ನಡೆದಿದ್ದು, ಮಾರ್ಕೆಟ್ ನಲ್ಲಿ ಮಾವಿನಹಣ್ಣು ಕಳ್ಳತನ ಮಾಡಿ ಸಿಕ್ಕಿಹಾಕಿಕೊಂಡಿದ್ದ ಪೊಲೀಸ್ ತಲೆಮರೆಸಿಕೊಂಡಿದ್ದರು. ಆತನ ದೂರು ದಾಖಲಾದ ಬಳಿಕ ಪೊಲೀಸ್ ಆಫೀಸರ್ ಹಿನ್ನಲೆ ತಿಳಿದು ಇವರನ್ನು ಅರೆಸ್ಟ್ ಮಾಡಲು ಆರ್ಡರ್ ನೀಡಿದ ಡಿಜಿಪಿ ಅವರೆ ಶಾಕ್ ಆಗಿದ್ದಾರೆ. ನಿಜಕ್ಕೂ ಈ ವ್ಯಕ್ತಿ ಯಾರು ? ಆಗಿದ್ದೇನು ಎಂದು ತಿಳಿಸುತ್ತೇವೆ ನೋಡಿ..
ಮಾವಿನ ಹಣ್ಣನ್ನು ಕಳ್ಳತನ ಮಾಡಿ ಸಿಕ್ಕಿಹಾಕಿಕೊಂಡ ವ್ಯಕ್ತಿಯ ಹೆಸರು ಶಿಹಾಬ್. ಈತ ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಕೇರಳದ ಕಂಜಿರಪಲ್ಲಿ ಎನ್ನುವ ಊರಿನ, ಅಂಗಡಿಯಲ್ಲಿ ಮಾವಿನ ಹಣ್ಣನ್ನು ಕಳ್ಳತನ ಮಾಡಿ ಸಿಕ್ಕಿಹಾಕಿಕೊಂಡ ಆರೋಪ ಇವರ ಮೇಲಿದೆ. ಡಿಜಿಪಿ ಅವರು ಈತನನ್ನು ಬಂಧಿಸಿ ಅಮಾನತು ಮಾಡಿದ್ದಾರೆ. ಆದರೆ ಈತನ ಹಿನ್ನಲೆ ಕೇಳಿ ಡಿಜಿಪಿ ಅವರೇ ಶಾಕ್ ಆಗಿದ್ದಾರೆ, ಶಿಹಾಬ್ ಎನ್ನುವ ಈ ವ್ಯಕ್ತಿ 2019ರಲ್ಲಿ ಕಂಜಿರಪಳ್ಳಿಯ ಜೆನೆರಲ್ ಆಸ್ಪತ್ರೆಯಲ್ಲಿ ಮಹಿಳಾ ಉದ್ಯೋಗಿಯೊಬ್ಬರನ್ನು ನಂಬಿಸಿ, ಲೈಂಗಿಕವಾಗಿ ಬಳಸಿಕೊಂಡಿರುವ ಆರೋಪ ಈ ವ್ಯಕ್ತಿಯ ಮೇಲಿದೆ. ಈ ಆರೋಪಕ್ಕೆ ಜೈಲಿಗೆ ಹೋಗಿ ಹೊರಬಂದ ನಂತರ ಆ ಮಹಿಳೆಯನ್ನು ಮತ್ತೆ ಬೆದರಿಸಿದ್ದಕ್ಕೆ ಮಂಡಕ್ಕಯಂ ಪೊಲೀಸ್ ಠಾಣೆಯವರು ದೂರು ದಾಖಲಿಸಿದ್ದರು.
2007ರಲ್ಲಿ ಪೊಲೀಸ್ ಕೆಲಸ ಸಿಗುವ ಮೊದಲು, ಒಬ್ಬ ವ್ಯಕ್ತಿಯ ಮನೆಗೆ ನುಗ್ಗಿ ಹಲ್ಲೆ ಮಾಡಿರುವ ಆರೋಪದಿಂದ ಶಿಹಾಬ್ ಮೇಲೆ ಕೇಸ್ ದಾಖಲಾಗಿದೆ. ಇವುಗಳ ಜೊತೆಗೆ ಗಣಿಗಾರಿಕೆ ಮಾಫಿಯಾ ಜೊತೆ ಸಹ ಸಂಪರ್ಕ ಇಟ್ಟುಕೊಂಡಿದ್ದು, ಶಬರಿಮಲೆಯಲ್ಲಿ ವಿಐಪಿ ದರ್ಶನ ಮಾಡಿಸುತ್ತೇನೆ ಎಂದು ಭಕ್ತರಿಂದ ಹಣ ಪಡೆದಿರುವುದು, ಡ್ಯೂಟಿ ಇಲ್ಲದ ಟೈಮ್ ನಲ್ಲಿ ಯೂನಿಫಾರ್ಮ್ ಧರಿಸಿ ಹಣ ವಸೂಲಿ ಮಾಡಿರುವುದು ಇಂತಹ ಕೇಸ್ ಗಳು ಈಗಾಗಲೇ ಈತನ ಮೇಲೆ ಇದೆ, ಆದರೆ ದೊಡ್ಡ ಮಟ್ಟದ ರೆಕಮೆಂಡೇಶನ್ ಇಂದ ಸಿಕ್ಕಿಹಾಕಿಕೊಳ್ಳದೆ ತಪ್ಪಿಸಿಕೊಂಡಿದ್ದಾನೆ. ಇಂತಹ ಅಪರಾಧ ಮಾಡಿರುವ ವ್ಯಕ್ತಿಗೆ ಕೆಲಸ ಹೇಗೆ ಸಿಕ್ಕಿತು ಎನ್ನುವ ಪ್ರಶ್ನೆ ಸಹ ಈಗ ಶುರುವಾಗಿದೆ.