ಮೋದಿಜಿಯವರು ಮಾಡಿದ ನೋಟು ಬ್ಯಾನ್ ಗು ಕೋಟಕ್ ಮಹಿಂದ್ರಾ ದ ಈ ಹೊಸ ೮೧೧ ಖಾತೆಗೂ ಏನು ಸಂಬಂಧ? ಇಲ್ಲಿದೆ ಮಾಹಿತಿ.

1,015

ಕೋಟಕ್ ಬ್ಯಾಂಕ್ ಭಾರತದ ಪ್ರೈವೇಟ್ ಬ್ಯಾಂಕುಗಳಲ್ಲಿ ಒಂದಾಗಿರುವ ಬ್ಯಾಂಕ್. ಉತ್ತಮ ಲಾಭದೊಂದಿಗೆ ಈ ಬ್ಯಾಂಕ್ ವ್ಯವಹಾರ ನಡೆಸುತ್ತಿದೆ. ಮಾರ್ಕೆಟ್ ಬಂಡವಾಳ ಕೂಡ ಉತ್ತಮವಾಗಿದೆ. ಇದಕ್ಕೆಲ್ಲ ಕಾರಣ ಇದು ತಂದಂತಹ ಜನ ಸ್ನೇಹಿ ಯೋಜನೆಗಳು. ಕೋಟಕ್ ಬ್ಯಾಂಕ್ ನ ಉಳಿತಾಯದ ಬಡ್ಡಿ ಇಂದ ಹಿಡಿದು ಅವರು ಗ್ರಾಹಕರ ಉಳಿತಾಯದ ಮೇಲೆ ಹಾಕುವ ಬಡ್ಡಿ ವರೆಗೆ ಬೇರೆ ಬ್ಯಾಂಕ್ ಗಳಿಗೆ ಹೋಲಿಸಿದರೆ ಉತ್ತಮವಾಗಿದೆ.

ಅಂದ ಹಾಗೆ ಕೋಟಕ್ ಬ್ಯಾಂಕ್ ನ ಒಂದು ಉಳಿತಾಯ ಖಾತೆ ೮೧೧ ಅಕೌಂಟ್ ಬಗ್ಗೆ ನೀವೆಲ್ಲರೂ ಕೇಳಿದ್ದೀರಾ. ಆ ಹೆಸರು ಬರಲು ಕಾರಣವೇನು? ಇಲ್ಲಿದೆ ಅದರ ಮಾಹಿತಿ, ಕೋಟಕ್ ಬ್ಯಾಂಕ್ ನ ೮೧೧ ಖಾತೆ ಜೀರೋ ಬ್ಯಾಲೆನ್ಸ್ ಖಾತೆ ಆಗಿದೆ ಅಂದರೆ ನೀವು ಇಲ್ಲಿ ಖಾತೆ ಓಪನ್ ಮಾಡಿದರೆ ನಿಮಗೆ ಇಂತಿಷ್ಟು ಹಣ ನಿಮ್ಮ ಖಾತೆಯಲ್ಲಿ ಇರಲೇಬೇಕು ಅಂತ ನಿಯಮ ಇಲ್ಲ, ಈ ಖಾತೆಯಲ್ಲಿ ಏನು ಇಲ್ಲದಿದ್ದರೆ ನಿಮಗೆ ಯಾವ ಮಿನಿಮಮ್ ಬ್ಯಾಲೆನ್ಸ್ ಚಾರ್ಜಸ್ ಅಂತ ಏನು ಹಾಕುವುದಿಲ್ಲ. ಮತ್ತು ಈ ಖಾತೆ ನಿಮ್ಮ ಮೊಬೈಲ್ ಅಲ್ಲಿಯೇ ೧೦ ನಿಮಿಷದಲ್ಲಿ ತೆರೆಯಬಹುದು. ಉತ್ತಮ ಮೊಬೈಲ್ ಸೇವೆ ಜೊತೆ ಡೆಬಿಟ್ ಕಾರ್ಡ್ ಸಮೇತ ನಿಮ್ಮ ಮನೆ ಬಾಗಿಲಿಗೆ ಬರುತ್ತದೆ.

ಈ ಕೋಟಕ್ ಬ್ಯಾಂಕ್ ಈ ಹೊಸ ಯೋಜನೆಯ ಹೆಸರು ೮೧೧ ಇಡಲು ಮೋದಿ ನಡೆಸಿದ ನೋಟ್ ಅಮಾನ್ಯಕರಣ ಅಥವಾ ನೋಟ್ ಬ್ಯಾಂಕ್ ಕಾರಣವಂತೆ. ಈ ೮೧೧ ರಲ್ಲಿ ೮ ನೇ ತಾರೀಕು ೧೧ ನೇ ತಿಂಗಳಿಗೆ ಮೋದಿ ೫೦೦ ಹಾಗು ೧೦೦೦ ರೂಪಾಯಿಗಳ ನೋಟನ್ನು ನಿಷೇದಿಸಿದ ದಿನ. ಆ ದಿನದ ನೆನಪಿಗಾಗಿ ಕೋಟಕ್ ಬ್ಯಾಂಕ್ ೮೧೧ ಹೆಸರಿನಲ್ಲಿ ಹೊಸ ಯೋಜನೆಯನ್ನು ಪ್ರಾರಂಭಿಸಿತ್ತು. ಇದು ಯಶಸ್ವೀ ಕೂಡ ಆಗಿದೆ. ಮುಖ್ಯವಾಗಿ ಸಂಬಳ ಹಾಗು ದಿನಗೂಲಿ ನೌಕರರಿಗೆ ಈ ಜೀರೋ ಬ್ಯಾಲೆನ್ಸ್ ಅಕೌಂಟ್ ತುಂಬಾ ಸಹಾಯಕಾರಿಯಾಗಿದೆ.

Leave A Reply

Your email address will not be published.