ಮೋಸ ದರೋಡೆ ಮಾಡಿ ಬದುಕುವ ಈ ಜಗದಲ್ಲಿ 100 ವರ್ಷವಾದರೂ ಸ್ವಂತ ದುಡಿಮೆಯಿಂದ ಬದುಕುತ್ತಿದ್ದಾರೆ ಈ ನಿಂಗಮ್ಮ. ಇವರ ಸ್ವಾವಲಂಬಿ ಜೀವನದ ಒಂದು ಸಣ್ಣ ಪರಿಚಯ ಇಲ್ಲಿದೆ.

616

ಮೋಸ, ದರೋಡೆ, ಕಳ್ಳತನ ಇಂದ ಬದುಕೋ ಈ ಪ್ರಪಂಚದಲ್ಲಿ 100 ವರ್ಷವಾದರೂ ತನ್ನ ಸ್ವಂತ ದುಡಿಮೆಯಿಂದ ಬದುಕುತ್ತಿದ್ದಾರೆ ನಮ್ಮ ಈ ಕರುನಾಡಿನ ಹೆಮ್ಮೆಯ ನಿಂಗಮ್ಮ. ಎರಡು ಮಕ್ಕಳಿದ್ದರು ಅವರ ಹಂಗಿನಲ್ಲಿ ಇರಲ್ಲ ಅಂತ ಹೇಳಿ ಸಣ್ಣ ಜೋಪಡಿಯಲ್ಲಿ ಕೋಳಿ ಸಾಕಿಕೊಂಡು ತಮ್ಮ ಜೀವನ ಸಾಗಿಸುತ್ತಿದ್ದಾರೆ. ೧೦೦ ವರ್ಷ ವಾದರೂ ಯಾವುದೇ ಅರೋಗ್ಯ ಸಮಸ್ಯೆ ಇಲ್ಲದೆ ಗಟ್ಟಿ ಮುಟ್ಟಾಗಿ ಇದ್ದಾರೆ ನಮ್ಮ ನಿಂಗಮ್ಮ.

ಸರಿಯಾಗಿ ಕಿವಿ ಕೇಳಿಸದ ನಿಂಗಮ್ಮ ೨೦ ಕೋಳಿಗಳನ್ನು ಸಾಕುತ್ತಿದ್ದಾರೆ. ನಾಟಿ ಕೋಳಿ ಹಾಗು ಕೋಳಿ ಮೊಟ್ಟೆ ಮರಿ ತಮ್ಮ ದೈನಂದಿನ ಜೀವನ ಸಾಗಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ತಮಗಿರುವ ಸ್ವಲ್ಪ ಜಮೀನಿನಲ್ಲಿ ವ್ಯವಸಾಯ ಕೂಡ ಮಾಡಿದ್ದಾರೆ. ಒಂದು ಕೋಳಿ ಮೊಟ್ಟೆಗೆ ೧೫ ರೂಪಾಯಿಗಳಂತೆ ಪ್ರತಿ ದಿನ ೫-೧೦ ಕೋಳಿ ಮೊಟ್ಟೆ ಗಳನ್ನೂ ಮಾರುತ್ತಾರೆ. ಇಂತಹ ಛಲಗಾರ್ತಿ ಅಜ್ಜಿಯರನ್ನು ನಾವು ಕರ್ನಾಟಕದಲ್ಲಿ ಬಹಳ ನೋಡಿದ್ದೇವೆ ಅಂತಹ ಮಹಿಳೆಯರಲ್ಲಿ ನಮ್ಮ ನಿಂಗಮ್ಮ ಕೂಡ ಒಬ್ಬರಾಗಿದ್ದಾರೆ. ಸಾಲುಮರದ ತಿಮ್ಮಕ್ಕ, ಇನ್ಫೋಸಿಸ್ ನ ಸುಧಾಮೂರ್ತಿ ಇವರ ಸಾಲಿಗೆ ಇಂದು ನಮ್ಮ ನಿಂಗಮ್ಮ ಅಜ್ಜಿ ಕೂಡ ಸೇರಿದ್ದಾರೆ.

ಎಲ್ಲ ಸರಕಾರದಿಂದ ಉಚಿತವಾಗಿ ಬೇಕು ಅಥವಾ ಏನು ಮಾಡದೇ ಸೋಂಬೇರಿಯಾಗಿ ಯಾವುದೇ ಕೆಲಸ ಸಿಗುತ್ತಿಲ್ಲ ಅಂತ ಉಳಿದವರ ಮೇಲೆ ದೋಷ ಹೇರುತ್ತಾ ಕುಳಿತಿರುವ ನಮ್ಮ ಯುವ ಜನರಿಗೆ ಈ ನಿಂಗಮ್ಮ ಸ್ಫೂರ್ತಿ ಚಿಲುಮೆಯಾಗಿದ್ದರೆ. ಸ್ಕೀಮ್ ಗಳ ಮೂಲಕ ಕ್ವಿಕ್ ಕ್ಯಾಶ್ ಮಾಡಿಕೊಳ್ಳುವ ಈ ಕಾಲದಲ್ಲಿ ಸ್ವಂತ ಪರಿಶ್ರಮದಿಂದ ತನ್ನ ಊಟಕ್ಕೆ ತಾನೇ ದುಡಿಯುವ ಈ ನಿಂಗಮ್ಮ ಅಜ್ಜಿ ಎಲ್ಲರಿಗು ಸ್ಫೂರ್ತಿ.

 

Leave A Reply

Your email address will not be published.