ಯಾವುದೇ ಚಾರ್ಜ್ ಮಾಡದೇ ಒಟ್ಟು 4011 KM ಚಲಿಸಿ ದಾಖಲೆ ಬರೆದ ಮೇಡ್ ಇನ್ ಇಂಡಿಯಾ ಎಲೆಕ್ಟ್ರಿಕ್ ಬೈಕ್. ಖರೀದಿ ಹೇಗೆ ಮಾಡೋದು?

9,290

ಭಾರತ ಜಗತ್ತಿನ ಅತ್ಯಂತ ದೊಡ್ಡ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಒಂದಾಗಿದೆ. ಭಾರತ ಸರಕಾರ ಎಲೆಕ್ಟ್ರಿಕ್ ವೆಹಿಕಲ್ ಕಡೆಗೆ ತನ್ನ ಹೆಚ್ಚಿನ ಒಲವು ತೋರಿಸುತ್ತಿದೆ, ಅದೇ ರೀತಿ ಭಾರತದಲ್ಲಿ ಈ ಎಲೆಕ್ಟ್ರಿಕ್ ಗಡಿಗಳ ಕ್ಷೇತ್ರದಲ್ಲಿ ದಿನಕೊಂದು ಹೊಸ ಆವಿಷ್ಕಾರಗಳು ನಡೆಯಿತ್ತಿದೆ. ಆದರೆ ಇಲ್ಲಿವರೆಗೂ ಈ ಎಲೆಕ್ಟ್ರಿಕ್ ವಾಹನಗಳಲ್ಲಿ ಚಾರ್ಜ್ ಮಾಡುವುದೇ ದೊಡ್ಡ ಸಮಸ್ಯೆ ಆಗಿದೆ. ಅದೇ ಕಾರಣಕ್ಕೆ ಸರಕಾರ ಹೆಚ್ಚಿನ ಒತ್ತು ನೀಡಿದರು ಕೂಡ ಅದನ್ನು ಖರೀದಿಸುವವರ ಸಂಖ್ಯೆ ಜಾಸ್ತಿ ಆಗಿಲ್ಲ. ಅದೇ ಸಮಸ್ಯೆಯನ್ನು ದೂರ ಮಾಡಲು ಇಂದು ಅನೇಕ ಸ್ಟಾರ್ಟ್ ಅಪ್ ಗಳು ವೇಗವಾಗಿ ಚಾರ್ಜ್ ಆಗಬಲ್ಲ ರೀತಿಯನ್ನು ಕಂಡುಕೊಳ್ಳುತ್ತಿವೆ ಹಾಗೇನೇ ಬ್ಯಾಟರಿ ಬದಲಾಯಿಸುವಂತಹ option ಇರುವ ಗಾಡಿಗಳನ್ನು ತಯಾರಿಸುತ್ತಿದೆ.

ಇದೆ ಆವಿಷ್ಕಾರದಲ್ಲಿ ತೆಲಂಗಾಣದ ಒಂದು ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಒಂದು ಧಾಖಲೆ ಮಾಡಿ ಸುದ್ದಿ ಅಲ್ಲಿದೆ. ಹೈದೆರಾಬಾದ್ ನ ಎಲೆಕ್ಟ್ರಿಕ್ ವೆಹಿಕಲ್ ಸ್ಟಾರ್ಟ್ ಅಪ್ ಕಂಪನಿ ಗ್ರಾವಿಟಾನ್ ಮೋಟರ್ಸ್ ನ qunata ಎಲೆಕ್ಟ್ರಿಕ್ ಬೈಕ್ ನ ಚಾಲಕ ಈ ಬೈಕ್ ಅಲ್ಲಿ ಯಾವುದೇ ಚಾರ್ಜ್ ಮಾಡದೇ ಬರೋಬ್ಬರಿ 4011 ಕಿಲೋ ಮೀಟರ್ ಪ್ರಯಾಣ ಮಾಡಿ ಸುದ್ದಿಯಲ್ಲಿದ್ದಾರೆ. ಕಂಪನಿ ಪ್ರಕಾರ ಈ ಮೊಪೆಡ್ ತರಹ ಕಾಣಿಸುವ ಎಲೆಕ್ಟ್ರಿಕ್ ಬೈಕ್ ಅಲ್ಲಿ ಕನ್ಯಾಕುಮಾರಿ ಇಂದ ಖಾರದೊಂಗ (ಲಢಾಕ್ ) ವರೆಗೆ ಕೇವಲ ೧೬೪ ಗಂಟೆ ಹಾಗು ೩೦ ನಿಮಿಷ ಅಂದರೆ ೬.೫ ದಿನಗಳಲ್ಲಿ ಈ ಪ್ರಯಾಣ ಪೂರ್ಣಗೊಳಿಸಿದ್ದಾರೆ.

ಈ ಪ್ರಯಾಣ ಶುರು ಮಾಡಿದ್ದು ೧೩ ಸೆಪ್ಟೆಂಬರ್ ೨೦೨೧ ಗೆ ಹಾಗು ಪೂರ್ತಿ ಗೊಳಿಸಿದ್ದು ೨೦ ಸೆಪ್ಟೆಂಬರ್ ೨೦೨೧ ಕ್ಕೆ. ಈ ಪ್ರಯಾಣದಲ್ಲಿ ಒಂದು ವಿಶೇಷ ಏನೆಂದರೆ ಈ ಪ್ರಯಾಣದ ಸಮಯದಲ್ಲಿ ಒಂದೇ ಒಂದು ಬಾರಿ ಬ್ಯಾಟರಿ ಚಾರ್ಜ್ ಮಾಡಲು ನಿಲ್ಲಿಸಲಿಲ್ಲ. ಕಂಪನಿ ಪ್ರಕಾರ ಈ ಬೈಕ್ ಯಾವುದೇ ಚಾರ್ಜ್ ಮಾಡದೇ ಪ್ರಯಾಣ ನಡೆಸಿದೆ. ಚಾರ್ಜ್ ಬದಲು ಬ್ಯಾಟರಿ ತೆಗೆದು ಹೊಸ ಬ್ಯಾಟರಿ ಹಾಕಲಾಗಿದೆ ಎಂದಿದ್ದಾರೆ. ಈ ಬ್ಯಾಟರಿ ಸ್ವಾಪ್ಪಿಂಗ್ ಅಂದರೆ ವಾಹನವನ್ನು ಚಾರ್ಜ್ ಮಾಡಲು ನಿಲ್ಲಿಸುವ ಅವಶ್ಯಕತೆ ಇಲ್ಲ. ಬದಲಿಗೆ ವಾಹನದಲಿರುವ ಬ್ಯಾಟರಿ ಜೊತೆಗೆ ಹೊಸ ಬ್ಯಾಟರಿ ಕೊಂಡೊಯ್ಯಬಹುದು. ಒಂದು ಬ್ಯಾಟರಿ ಮುಗಿದ ತಕ್ಷಣ ಹೊಸ ಬ್ಯಾಟರಿ ಅಳವಡಿಸಿ ವಾಹನ ಓಡಿಸಬಹುದಾಗಿದೆ.

ಈ ಬ್ಯಾಟರಿ ಚಾರ್ಜ್ ಆಗಲು ಕೆಲ ಗಂಟೆ ಹಿಡಿಯುತ್ತದೆ. ಅದೇ ಕಾರಣಕ್ಕೆ ಬ್ಯಾಟರಿ ಸ್ವಾಪ್ಪಿಂಗ್ ಒಂದು ಉತ್ತಮ ಆಯ್ಕೆ ಆಗಿದೆ. ಏಕೋ ಮೋಡ್ ಅಲ್ಲಿ ಈ ದ್ವಿಚಕ್ರ ವಾಹನ ೧೫೦ ಕಿಲೋ ಮೀಟರ್ ವರೆಗೆ ಹೋಗುವ ಸಾಮರ್ಥ್ಯ ಹೊಂದಿದೆ. ಎರಡು ಬ್ಯಾಟರಿ ಜೊತೆ ಈ ವಾಹನದ ಸಾಮರ್ಥ್ಯ ೩೨೦ ಕಿಲೋ ಮೀಟರ್ ವರೆಗೆ ಇದೆ. ಈ ವಾಹನ ಮಾರ್ಕೆಟ್ ಅಲ್ಲಿ ೯೯೦೦೦ ರುಪಾಯಿಗೆ ಸಿಗುತ್ತದೆ. ಈ ದ್ವಿಚಕ್ರ ವಾಹನ ಸಂಪೂರ್ಣವಾಗಿ ಭಾರತದಲ್ಲೇ ತಯಾರಿಸಿದ್ದು ಅಂತ ಕಂಪನಿ ಹೇಳುತ್ತಿದೆ. ಸದ್ಯಕ್ಕೆ ಈ ವಾಹನ ಕೆಂಪು ಬಿಳಿ ಹಾಗು ಕಪ್ಪು ಬಣ್ಣಗಳಲ್ಲಿ ಸಿಗುತ್ತಿದೆ. ಸರಕಾರ ಕೂಡ ಇಂತಹ ಬ್ಯಾಟರಿ ಸ್ವಾಪ್ಪಿಂಗ್ ವಾಹನಗಳಿಗೆ ಪ್ರೋತ್ಸಾಹ ನೀಡೋದಾಗಿ ಹೇಳಿದೆ.

Leave A Reply

Your email address will not be published.