ಯಾವುದೇ ಬಂಡವಾಳವಿಲ್ಲದೆ ತಿಂಗಳಿಗೆ ಬರೋಬ್ಬರಿ 50 ಸಾವಿರ ಗಳಿಸುವ ಉದ್ಯಮ ಯಾವುದು ಗೊತ್ತೇ?? ಹೇಗೆ ಆರಂಭ ಮಾಡಬೇಕು ಗೊತ್ತೇ??-

254

ಹೌದು ನಿಜವಾಗಿಯೂ ಕೂಡ ಯಾವುದೇ ರೀತಿಯ ಬಂಡವಾಳ ಇಲ್ಲದೆ ಕನಿಷ್ಠ ಅಂದ್ರು ಕೂಡ ತಿಂಗಳಿಗೆ ಐವತ್ತು ಸಾವಿರ ರೂ.ಗಳವರೆಗೆ ಸಂಪಾದನೆ ಮಾಡಬಹುದು‌. ಅರೇ, ಅದೇಗಪ್ಪಾ ಬಂಡವಾಳ ಇಲ್ಲದೆ ತಿಂಗಳಿಗೆ ಅಷ್ಟೊಂದು ಸಂಪಾದನೆ. ಇಂದು ಲಕ್ಷ, ಕೋಟಿ ಹೂಡಿಕೆ ಮಾಡಿ ಹತ್ತು ಸಾವಿರ ಲಾಭ ಪಡೆಯಲು ಒದ್ದಾಡುತ್ತಿದ್ದಾರೆ. ಅಂತಹದರಲ್ಲಿ ಅದ್ಹೇಗೆ ಅಷ್ಟು ಸುಲಭವಾಗಿ ನಷ್ಟಭಯ ಇಲ್ಲದೆ ಲಾಭದಾಯಕವಾಗಿ ವ್ಯವಹಾರ ನಡೆಸಬಹುದು ಅಂತೀರಾ. ಹಾಗಿದ್ರೇ ಸಂಪೂರ್ಣವಾಗಿ ಈ ಲೇಖನವನ್ನ ಓದಿ. ಇಂದು ಹಣ ಜೀವನದ ಬಹುಮುಖ್ಯ ಅಗತ್ಯವಾದ ವಸ್ತು ಅಂತಾನೇ ಹೇಳ್ಬೇಕು. ಇಂದು ಹಣ ಇಲ್ಲದವ ಹೆಣಕ್ಕೆ ಸಮಾನ.

ಹಣ ಕಂಡ್ರೆ ಹೆಣ ಕೂಡ ಬಾಯಿ ಬಿಡುತ್ತೆ ಅನ್ನೋ ಮಾತನ್ನ ನೀವು ಕೇಳೇ ಇರ್ತಿರಾ. ಹೀಗಿರೋವಾಗ ಮನುಷ್ಯ ಹಣವನ್ನ ನಿರ್ಲಕ್ಷ್ಯ ಮಾಡ್ತಾನಾ. ದುಡ್ಡು ದುಡಿಯುವ ದಾರಿನ ಬೇಡ ಅಂತಾನಾ ಖಂಡಿತಾ ಇಲ್ಲ.ಕೋವಿಡ್ ಸಂಕಷ್ಟದ ಬದುಕು ಪ್ರತಿಯೊಬ್ಬರಿಗೂ ಆರ್ಥಿಕ ಸಂಕಷ್ಟವನ್ನ ಎದುರೊಡ್ಡಿದೆ. ಹಾಗಾಗಿ ಅನೇಕರು ಉತ್ತಮ ಆರ್ಥಿಕ ಸ್ಥಿತಿಗತಿ ಹೊಂದಿದವರು ಕೂಡ ಕೊವಿಡ್ ಸಂಧರ್ಭದಲ್ಲಿ ಆರ್ಥಿಕವಾಗಿ ದಿವಾಳಿ ಆಗ್ಬಿಟ್ರು. ಇಂತಹ ಸಂಧರ್ಭದಲ್ಲಿ ಇದೀಗ ನಾವು ನಿಮಗೆ ಶೂನ್ಯ ಬಂಡವಾಳದಲ್ಲಿ ಸಾವಿರಾರು ಆದಾಯ ಗಳಿಸುವ ಯೋಜನೆವೊಂದನ್ನ ತಿಳಿಸುವ ಪ್ರಯತ್ನ ಇಲ್ಲಿದೆ.

ಇಂದಿನ ಆಧುನಿಕ ಯುಗದಲ್ಲಿ ಎಲ್ಲವು ಕೂಡ ಬಹುಬೇಗ ಕೈ ಸೇರುತ್ತದೆ. ಅದು ನಾವು ತೊಡುವ ಬಟ್ಟೆಯಿಂದ ಹಿಡಿದು ತಿನ್ನುವ ಆಹಾರದವರೆಗೆ ಮನೆಯ ಬಾಗಿಲಿಗೆ ಬಂದು ಕೈ ಸೇರುತ್ತವೆ. ಅಷ್ಟರ ಮಟ್ಟಿಗೆ ಇಂದು ಆನ್ಲೈನ್ ವ್ಯವಹಾರಗಳು ಬೆಳೆದು ನಿಂತಿವೆ. ಅದೇ ರೀತಿ ಈ ಇವೆಂಟ್ ಮ್ಯಾನೇಜ್ ಮೆಂಟ್ ಕೂಡ ಅಪಾರವಾಗಿ ಪ್ರಸಿದ್ದಿಯಾಗಿದೆ. ಅದರಲ್ಲಿಯೂ ಕೂಡ ಈ ಮ್ಯಾರೇಜ್ ಇವೆಂಟ್ ಮ್ಯಾನೇಜ್ ಮೆಂಟ್ ಸಖತ್ ಟ್ರೆಂಡ್ ಮತ್ತು ಬೇಡಿಕೆಯನ್ನು ಸೃಷ್ಟಿಸಿಕೊಂಡಿದೆ. ಯಾಕಂದ್ರೆ ಇಂದು ಜನರಿಗೆ ಬಿಡುವಿಲ್ಲ. ಒತ್ತಡದ ಬದುಕು. ತಮ್ಮದೇ ಮನೆಯ ಶುಭ ಸಮಾರಂಭಗಳಿಗೆ ಸಮಯ ಕೊಡದಷ್ಟು ಬಿಝಿ಼ ಆಗಿರ್ತಾರೆ.

ಇದೀಗ ತಮ್ಮ ಮನೆಯ ಶುಭ ಕಾರ್ಯಕ್ರಮಗಳಿಗೆ ಸಹ ಏಜೆನ್ಸಿ ಗಳನ್ನ ಬುಕ್ ಮಾಡ್ತಾರೆ. ಅದೇ ರೀತಿ ಈ ಮದುವೆಯಂತಹ ಶುಭ ಕಾರ್ಯಕ್ರಮಗಳಿಗೆ ಮ್ಯಾನೇಜ್ ಮೆಂಟ್ ಸಂಸ್ಥೆಗಳ ಮೊರೆ ಹೋಗ್ತಾರೆ. ಹಿಂದೆ ಒಂದು ಮನೆಯಲ್ಲಿ ಮದುವೆ ಆಗುತ್ತಿದೆ ಅಂದ್ರೆ ಇಡೀ ಕುಟುಂಬದ ಸದಸ್ಯರು, ಊರಿನ ಬಂಧು ಬಳಗದವರು ಸೇರಿ ಚಪ್ಪರದಿಂದ ಹಿಡಿದು ಅಡುಗೆ ಮಾಡಿ ಬಡಿಸುವವರೆಗೆ ಜವಬ್ದಾರಿ ತಗೋಳ್ತಾ ಇದ್ರು. ಆದ್ರೆ ಈಗ ಅಡುಗೆ ಅವರಿಗೆ , ಪ್ಲವರ್ ಡೆಕೊರೇಶನ್, ಅರೆಂಜ್ ಮೆಂಟ್ ಅಂತ ಪ್ರತಿಯೊಂದಕ್ಕೂ ಕೂಡ ದುಡ್ಡು ಕೊಟ್ಟು ನಿಯೋಜನೆ ಮಾಡಿ ಬಿಡ್ತಾರೆ. ಕಂಟ್ರಾಕ್ಟ್ ತಗಂಡವ್ರು ಅಚ್ಚು ಕಟ್ಟಾಗಿ ಇಡೀ ಮದುವೆಯ ಮೂಲಭೂತ ಸೌಲಭ್ಯಗಳ ಜವಬ್ದಾರಿಯನ್ನ ನಿಭಾಯಿಸುತ್ತಾರೆ.

ಅಂತದ್ದೇ ಒಂದು ಹೊಸ ಉದ್ಯೋಗ ಏನಪ್ಪಾ ಅಂದ್ರೆ. ವೆಡ್ಡಿಂಗ್ ಪ್ಲಾನರ್. ಈ ವೆಡ್ಡಿಂಗ್ ಪ್ಲಾನರ್ ಅಂದ್ರೆ ನೀವು ಮದುವೆಗೆ ಯಾವೆಲ್ಲಾ ರೀತಿ ವ್ಯವಸ್ಥೆ ಬೇಕು ಅನ್ನೋದರ ಜವಬ್ದಾರಿ ನಿಭಾಯಿಸುವುದು. ಇದನ್ನ ಹೇಗೆ ಮಾಡೋದು. ನಿಮ್ಮ ಕಾರ್ಯ ಕೆಲಸಗಳು ಹೇಗೆ ಇರ್ತವೆ ಊಟ ತಿಂಡಿ, ಲೈಟಿಂಗ್ಸ್, ಫ್ಲವರ್ ಡೆಕೊರೇಶನ್, ಮ್ಯೂಸಿಕ್ ಇವೆಂಟ್, ಪ್ರೀ ವೆಡ್ಡಿಂಗ್ ಶೂಟ್ ಹೀಗೆ ಎಲ್ಲಾ ಜವಬ್ದಾರಿಯನ್ನ ತೆಗೆದುಕೊಳ್ಳುವಂತದ್ದು. ಇದರ ಕೆಲಸದಲ್ಲಿ ನುರಿತ ವ್ಯಕ್ತಿಗಳ ಜೊತೆಗೆ ಉತ್ತಮ ಸಂಪರ್ಕ ಇಟ್ಟುಕೊಂಡು ಅವರಿಗೆ ದಿನದ ಲೆಕ್ಕದಲ್ಲಿ ಸಂಭಾವನೆ ನೀಡಿ ನಿರ್ವಹಣೆ ಮಾಡುವಂತದ್ದು.

ನೀವು ಮದುವೆ ಮನೆಯವರಿಂದ ಮುಂಗಡವಾಗಿ ಒಂದಷ್ಟು ಹಣ ಪಡೆಯುವುದರಿಂದ ಅದನ್ನ ಈ ಎಲ್ಲಾ ಕೆಲಸದವರನ್ನ ನೇಮಿಸಿಕೊಂಡು ನಿಮ್ಮ ಕೆಲಸವನ್ನ ಸುಲಭಾವಾಗಿ ಆರಂಭಿಸಬಹುದು. ಕನಿಷ್ಟ ಅಂದ್ರು ವರ್ಷದಲ್ಲಿ ಎರಡು ಸೀಸನ್ ಗಳಲ್ಲಿ ಮದುವೆಗಳು ನಡೆಯುತ್ತವೆ. ಇಂತಹ ಅವಕಾಶಗಳನ್ನ ಸಮಯಚಿತ್ತವಾಗಿ ಸಮರ್ಪಕವಾಗಿ ಬಳಸಿಕೊಂಡರೆ ಒಂದು ಮದುವೆಯಲ್ಲಿ ಲಕ್ಷ ದುಡಿಯಬಹುದು.

ಒಂದು ಮದುವೆಯಲ್ಲಿ ಲಕ್ಷ ದುಡಿದರೆ ಒಂದು ಸೀಸನ್ ನಲ್ಲಿ ಐದರಿಂದ ಹತ್ತು ಮದುವೆಯ ಆರ್ಡರ್ ತೆಗೆದುಕೊಂಡ್ರೆ ಏನಿಲ್ಲ ಅಂದ್ರು ಐದರಿಂದ ಹತ್ತು ಲಕ್ಷ ರೂ.ಗಳವರೆಗೆ ದುಡಿಯಬಹುದು. ಹೀಗೆ ಯಾವುದೇ ರೀತಿಯ ಬಂಡವಾಳ ಇಲ್ಲದೆ ಕೇವಲ ನಿಮ್ಮ ಮಾತು, ಚಾಣಾಕ್ಷ್ಯತನದಿಂದ ತಿಂಗಳಿಗೆ ಲಕ್ಷಾಂತರ ರೂ.ಗಳನ್ನ ಈ ವೆಡ್ಡಿಂಗ್ ಪ್ಲಾನರ್ ನಿಂದ ಸಂಪಾದನೆ ಮಾಡಬಹುದು. ಬದುಕಬೇಕು ನಾವು ಯಾವುದೇ ರೀತಿ ಅಡ್ಡ ದಾರಿ ಹಿಡಿಯದೇ ಹಣ ಸಂಪಾದನೆ ಮಾಡಬೇಕು ಅಂದ್ರೆ ಅನೇಕ ದಾರಿಗಳಿವೆ. ಆ ದಾರಿಗಳಲ್ಲಿ ಈ ವೆಡ್ಡಿಂಗ್ ಪ್ಲಾನರ್ ಕೂಡ ಒಂದಾಗಿದೆ. ಇದರ ಬಗ್ಗೆ ಆಸಕ್ತಿ ಇರುವವರು ಆತ್ಮ ವಿಶ್ವಾಸವಿದ್ದಲ್ಲಿ ಈ ವೆಡ್ಡಿಂಗ್ ಪ್ಲಾನರ್ ಕೆಲಸವನ್ನ ಮಾಡಬಹುದಾಗಿರುತ್ತದೆ.

Leave A Reply

Your email address will not be published.