ರತನ್ ಟಾಟಾ ಅವರ ಜೊತೆ ಇರುವ ಈ ಹುಡುಗ ಅವರ ಸಂಬಂಧಿಕ ಅಲ್ಲ. ಆದರೂ ಇಷ್ಟೊಂದು ಒಡನಾಟವೇಕೆ ಈ ಹುಡುಗನ ಬಳಿ?
ರತನ್ ಟಾಟಾ ಎಂದರೆ ಗೊತ್ತಿರದ ವ್ಯಕ್ತಿ ಈ ಭೂಮಿಯಲ್ಲಿ ಯಾರು ಇಲ್ಲ ಎಂದರೂ ತಪ್ಪಾಗಲಾರದು. ಯಾಕೆಂದರೆ ಅವರ ವ್ಯಕ್ತತ್ವ ಅಂತಹುದು. ಸದಾ ಜನ ಕಲ್ಯಾಣದ ಕಾರ್ಯದ ಬಗ್ಗೆ ಯೋಚಿಸುತ್ತಾ, ತನ್ನೆಲ್ಲಾ ಸಂಪತ್ತಿನ ಲಾಭಾಂಶವನ್ನು ಜನರ ಒಳಿತಿಗಾಗಿ ಖರ್ಚು ಮಾಡುತ್ತಾರೆ. ಕೇವಲ ಮನುಷ್ಯರಲ್ಲ ಪ್ರಾಣಿಗಳ ಮೇಲೂ ಬಲು ಪ್ರೀತಿ. ನಾಯಿ ಎಂದರೆ ಅವರಿಗೆ ತುಂಬಾ ಇಷ್ಟ . ಹಾಗಾದರೆ ಈ ಹುಡುಗ ಮತ್ತು ಅವರ ಈ ವಿಷಯಕ್ಕೂ ಏನು ಸಂಬಂಧ ಎಂದು ಕೇಳಿದರೆ ಖಂಡಿತವಾಗಿಯೂ ಸಂಬಂಧ ಇದೆ.
ರತನ್ ಟಾಟಾ ಅವರ ಜೊತೆ ಇರುವ ಈ ಹುಡುಗನ ಹೆಸರು ಶಾಂತನು ನಾಯ್ಡು. ಇವರು ಟಾಟಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಸಾಮಾನ್ಯ ಕೆಲಸಗಾರ. ರತನ್ ಟಾಟಾ ಅವರ ಹಾಗೆ ಈ ಹುಡುಗನಿಗೂ ನಾಯಿಗಳ ಮೇಲೆ ಬಲು ಪ್ರೀತಿ. ವಾಹನಗಳಿಗೆ ಸಿಕ್ಕಿ ಮೃತ ಪಡುವ ಬೀದಿ ನಾಯಿಗಳಿಗೆ ಏನಾದರೂ ಮಾಡಬೇಕು ಎಂದು ಈತನ ಮನಸಿನಲ್ಲಿ ಇತ್ತು. ಶಾಂತನೂ ಅವರ ತಂದೆ ಮಾತಿನ ಪ್ರಕಾರ ಅವರು ರತನ್ ಟಾಟಾ ಅವರಿಗೆ ಪತ್ರ ಬರೆಯುತ್ತಾರೆ ಮತ್ತು ಅವರ ಆಲೋಚನೆಗಳನ್ನು ಅವರ ಮುಂದಕ್ಕೆ ಇಡುತ್ತಾರೆ.
ಪತ್ರ ಬರೆದ ಎರಡು ತಿಂಗಳ ಅಂತರದಲ್ಲಿ ಅವರಿಗೆ ಉತ್ತರದ ಜೊತೆ ತಮ್ಮನ್ನು ಭೇಟಿ ಆಗಲು ರತನ್ ಟಾಟಾ ಅವರು ಆಹ್ವಾನ ನೀಡುತ್ತಾರೆ. ಇದೆ ಶಾಂತನು ಮತ್ತು ರತನ್ ಟಾಟಾ ಅವರ ಮೊದಲ ಭೇಟಿ. ಅಲ್ಲಿ ಅವರು ನಾಯಿಗಳ ಕೊರಳಿಗೆ ಹೊಳೆಯುವ ಪಟ್ಟಿಯನ್ನು ಕಟ್ಟುವ ಬಗ್ಗೆ ಪ್ರಸ್ತಾಪ ಮಾಡುತ್ತಾರೆ ಇದರಿಂದ ಬೀದಿ ನಾಯಿಗಳ ಪ್ರಾಣ ಉಳಿಸಬಹುದು ಎಂದು. ಅವರಿಬ್ಬರ ಮಾತುಕತೆಯಿಂದ ಶುರುವಾದ ಅವರ ಭೇಟಿ ಇದುವರೆಗೂ ಇಬ್ಬರು ಒಟ್ಟಿಗೆ ಇರುವಂತೆ ಮಾಡಿದೆ.
ನಾಲ್ಕು ತಲೆಮಾರುಗಳ ಅಂತರ ಇದ್ದರೂ ರತನ್ ಟಾಟಾ ಅವರಿಗೆ ಶಾಂತನು ಎಂದರೆ ಬಲು ಇಷ್ಟ ಸದಾ ಇಬ್ಬರು ಒಟ್ಟಿಗೆ ಕಾಲ ಕಳೆಯುತ್ತಾರೆ. ಶಾಂತನು ಅಮೆರಿಕಾದಲ್ಲಿ ಹೈಯರ್ ಸ್ಟಡಿ ಮುಗಿಸಿದಾಗ ರತನ್ ಟಾಟಾ ಅಲ್ಲಿ ಕೂಡ ಹೋಗಿದ್ದರು. ನಂತರ ಅವರಿಗೆ ಬ್ಯುಸಿನೆಸ್ ಸೆಕ್ರೆಟರಿ ಆಗುವ ಆಫರ್ ಕೊಟ್ಟರು. ಹೀಗೆ 27 ವರ್ಷದ ಶಾಂತನು ಮತ್ತು 80 ವರ್ಷದ ರತನ್ ಟಾಟಾ ಅವರ ಜೋಡಿ ಮೋಡಿ ಮಾಡುತ್ತಲೇ ಇದೆ. ಟಾಟಾ ಅವರಿಗೆ ಸೋಶಿಯಲ್ ಮೀಡಿಯಾ ಬಗೆಗೆ ಹೇಳಿದ್ದು ಶಾಂತನು ಅವರನ್ನು ಸೋಶಿಯಲ್ ಮೀಡಿಯಾ ದುನಿಯಾಗೆ ಪರಿಚಯಿಸಿದ್ದೇ ಶಾಂತನು. ಅದೇನೇ ಇರಲಿ ಸಂಬಂಧ ಬೆಳೆಯಲು ವರ್ಷಗಳ ಅಂತರ ಇಲ್ಲ ಬದಲಾಗಿ ನಮ್ಮೊಳಗಿನ ಭಾವನೆಗಳು ಎಂಬುದಕ್ಕೆ ಇವರು ನೈಜ ಉದಾಹರಣೆ.