ರತನ್ ಟಾಟಾ ಬದುಕಿನಲ್ಲಿ ಪ್ರೀತಿಸಿದ ಹೆಣ್ಣೊಬ್ಬಳು ಇದ್ದರೂ ,ಮದುವೆ ಆಗದೆ ಬ್ರಹ್ಮಚಾರಿ ಆಗಿದ್ದು ಯಾಕೆ?

744

ರತನ್ ಟಾಟಾ ಎಂದರೆ ಎಲ್ಲರಿಗೂ ಗೊತ್ತು. ಅವರ ಬಗ್ಗೆ ತಿಳಿಯದ ಜನರೇ ಇಲ್ಲ. ಸದಾ ಸಾಮಾಜಿಕ ಸೇವೆಯಲ್ಲಿ ನಿರತರಾಗಿರುವ ಇವರು , ಸಮಾಜಮುಖಿ ಕೆಲಸದಿಂದಲೇ ಎಲ್ಲರಿಗೂ ಚಿರ ಪರಿಚಿತರು. ಎಲ್ಲರ ಜೀವನದಲ್ಲಿ ಏರು ತಗ್ಗುಗಳು ಇದ್ದೆ ಇರುತ್ತದೆ. ಸಿರಿವಂತ ಇರಲಿ , ಬಡವನೆ ಇರಲಿ ಜೀವನದಲ್ಲಿ ಮೇಲೆ ಕೆಳಗೆ ಬಂದೆ ಬರುತ್ತದೆ. ಅದರಿಂದ ಹೊಸತನದ ಪಾಠ ಕಲಿತು ಮುಂದೆ ಸಾಗಬೇಕು ಎಂದು ಅನುಭವಿಸಿದವರು ಹೇಳುತ್ತಾರೆ.

ಜೀವನದಲ್ಲಿ ಯಶಸ್ಸು ಕಾಣಬೇಕು, ಮತ್ತೊಬ್ಬರು ಮಾತನಾಡಿಕೊಳ್ಳುತ್ತವಂತೆ ಬದುಕಬೇಕು ಎಂಬುದು ಎಲ್ಲರ ಆಸೆ. ಅದರ ಹಿಂದೆ ಸ್ತ್ರೀ ಶಕ್ತಿ ಒಂದು ಇದ್ದೆ ಇರುತ್ತದೆ ಎಂಬುದು ಹಿಂದಿನಿಂದ ಕೇಳಿಕೊಂಡು ಬಂದಿರುವ ವಿಚಾರ. ಆದರೆ ರತನ್ ಟಾಟಾ ಅವರ ಜೀವನದಲ್ಲಿ ಸುಳ್ಳು ಎಂದರೂ ತಪ್ಪಾಗಲಿಕ್ಕಿಲ್ಲ. ಯಾಕೆಂದರೆ ಬಾಲ್ಯದಲ್ಲೇ ತಂದೆ ತಾಯಿ ವಿಚ್ಚೇದನ ಪಡೆದು ಬರ್ಪಟ್ಟಿದ್ದರು. ಇದರಿಂದಾಗಿ ತುಂಬಾ ಮುಜುಗರ ಅನುಭವಿಸಿದ್ದರು. ಹಾಗೆಯೇ ಮರು ಮದುವೆ ಆದಾಗ ಎಲ್ಲರೂ ಶಾಲೆಯಲ್ಲಿ ಅವರನ್ನು ಗೇಲಿ ಮಾಡಿದ್ದರು. ಹಾಗಾದರೆ ರತನ್ ಟಾಟಾ ಅವರು ಮದುವೆ ಯಾಕೆ ಆಗಲಿಲ್ಲ ಎಂಬ ಪ್ರಶ್ನೆ ಮೂಡಬಹುದು, ಅದಕ್ಕೆ ಉತ್ತರ ಮುಂದಕ್ಕೆ ಇದೆ ಓದಿರಿ.

ಎಲ್ಲರ ಜೀವನದಲ್ಲಿರುವ ಹಾಗೆ ರತನ್ ಟಾಟಾ ಅವರ ಜೀವನದಲ್ಲೂ ಒಬ್ಬಾಕೆ ಇದ್ದಳು. ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಅವರು ವಿದೇಶದಲ್ಲಿರುವಾಗ ಈ ಪ್ರೀತಿ ಹುಟ್ಟಿದ್ದು. ಕಾಲಾಂತರದಲ್ಲಿ ಅವರನ್ನು ಸಾಕಿದ ಅಜ್ಜಿ ಅನಾರೋಗ್ಯದಿಂದ ಬಳಲುತ್ತಿರುವ ಸಂದರ್ಭದಲ್ಲಿ ಅವರನ್ನು ನೋಡಲೆಂದು ಭಾರತಕ್ಕೆ ಹೊರಟಿದ್ದರು. ರತನ್ ಟಾಟಾ ಅವರು ತಾನು ಪ್ರಿತಿಸಿದಾಕೆ ಜೊತೆಗೆ ಬರುವಳು ಎಂದು ನಂಬಿದ್ದರು. ಆದರೆ ಇಂಡೋ ಚೈನಾ ಯುದ್ಧದ ಸಮಯದಲ್ಲಿ, ಹುಡುಗಿಯ ಮನೆಯವರು ಇದಕ್ಕೆ ಒಪ್ಪಲಿಲ್ಲ. ಇದೆ ಕಾರಣಕ್ಕೆ ಇವರ ಪ್ರೀತಿ ಮುರಿದು ಬಿದ್ದಿತ್ತು. ಹೀಗೆ ಪ್ರೀತಿ ಮುರಿದು ಹೋದ ನಂತರ ಅವರು ಮತ್ತೆ ಹುಡುಗಿಯ ಬಗ್ಗೆ ಯೋಚನೆ ಮಾಡಲೇ ಇಲ್ಲ. ಬದಲಾಗಿ ದೇಶ ಸೇವೆಗೆ ಮುಂದಾದರು. ಹೀಗೆ ಸಾಗುತ್ತ ಬಂದ ದೇಶ ಸೇವೆಯ ಕೆಲಸ ಈಗಲೂ ನಡೆಯುತ್ತಾ ಇದೆ. ಅದರಲ್ಲೇ ಅವರು ಸಂತೃಪ್ತಿ ಕಾಣುತ್ತಿದ್ದಾರೆ.

Leave A Reply

Your email address will not be published.