ರತನ್ ಟಾಟ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂದು ಸಲ್ಲಿಸಿದ್ದ ಅರ್ಜಿ ವಜಾ ಮಾಡಿ ಅರ್ಜಿದಾರರ ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್. ಏನಿದು ವಿಷಯ?

971

ರತನ್ ಟಾಟಾ ಎಂದರೆ ಯಾರಿಗೆ ತಾನೆ ಗೊತ್ತಿಲ್ಲ,ಇಡೀ ಭಾರತ ದೇಶ ಕಂಡ ಅತ್ಯಂತ ಧೀಮಂತ ವ್ಯಕ್ತಿ. ರಾಷ್ಟ್ರ ಸೇವೆಗೆ ಸದಾ ಮುಂದೆ ಇರುವ ವ್ಯಕ್ತಿಗಳ ಸಾಲಿನಲ್ಲಿ ಇವರು ಮುಂಚೂಣಿಯಲ್ಲಿ ಇರುತ್ತಾರೆ. ತಮ್ಮ ಸಂಪಾದನೆಯ 60% ಹಣವನ್ನು ಸಾಮಾಜಿಕ ಕಾರ್ಯಗಳಲ್ಲಿ ವಿನಿಯೋಗ ಮಾಡುವ ಇವರು ಸದಾ ಚರ್ಚೆಯಲ್ಲಿ ಇರುತ್ತಾರೆ. ಆದರೆ ಇಂದು ಅವರು ಚರ್ಚೆಯಲ್ಲಿ ಇರುವ ಕಾರಣ ಬೇರೆ ಏನು ಬನ್ನಿ ತಿಳಿಯೋಣ.

ಸಾಮಾಜಿಕ ಕಾರ್ಯಕರ್ತ ಒಬ್ಬರು ರತನ್ ಟಾಟಾ ಅವರಿಗೆ ಭಾರತದ ಅತ್ಯುನ್ನತ ಪ್ರಶಸ್ತಿ ಭಾರತ ರತ್ನ ನೀಡಬೇಕು ಎಂದು PIL ಸಲ್ಲಿಸಿದ್ದರು. ಇದರ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ವಿಪಿನ್ ಸಂಘಿ ಮತ್ತು ನ್ಯಾಯಮೂರ್ತಿ ನವೀನ್ ಚಾವಲ ಅವರಿದ್ದ ವಿಭಾಗೀಯ ಪೀಠ, ಇದೊಂದು ದಂಡ ವಿಧಿಸಲು ಅರ್ಹವಾಗಿರುವ ಅರ್ಜಿ ಎಂದು ಅರ್ಜಿದಾರರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು. ಭಾರತ ರತ್ನ ಯಾರಿಗೆ ನೀಡಬೇಕು ಎಂದು ನಿರ್ಧರಿಸುವ ಹಕ್ಕು ಕೋರ್ಟ್ ಗೆ ಬರುವುದಿಲ್ಲ. ಅದು ಏನಿದ್ದರೂ ಸರ್ಕಾರದ ಆಡಳಿತ ವ್ಯಾಪ್ತಿಯೊಳಗೆ ಬರುತ್ತದೆ. ಒಂದಾ ನೀವು ಅರ್ಜಿ ಹಿಂಪಡೆಯಿರಿ ಇಲ್ಲವಾದರೆ ದಂಡ ವಿಧಿಸಲಾಗುವುದು ಎಂದು ಹೇಳಿದರು.

ಕೋರ್ಟ್ ಸಮಯ ಅತ್ಯಮೂಲ್ಯ ಇದನ್ನು ಹಾಳುಮಾಡಬಾರದು. ನಮ್ಮ ಕಾರ್ಯ ವ್ಯಾಪ್ತಿಗೆ ಬಾರದ ವಿಚಾರಗಳನ್ನು ಮುನ್ನಲೆಗೆ ತಂದು ಕೋರ್ಟ್ ಸಮಯ ಹಾಳು ಮಾಡುವುದು ಉಚಿತವಲ್ಲ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದೆ. ಹೀಗೆ ಇದನ್ನು ಆಲಿಸಿದ ಅರ್ಜಿದಾರರ ಪರವಾದ ವಕೀಲರು ಅರ್ಜಿಯನ್ನು ಹಿಂಪಡೆಯಲು ನಿರ್ಧರಿಸಿದ್ದಾರೆ. ಇದೀಗಾಗಲೆ ದೇಶದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ ಪದ್ಮ ಭೂಷಣ ಮತ್ತು ಪದ್ಮ ವಿಭೂಷಣ ಪ್ರಶಸ್ತಿ ಸಿಕ್ಕಿದ್ದು ಭಾರತ ರತ್ನ ನೀಡುವಂತೆ ಅರ್ಜಿ ಸಲ್ಲಿಸಲಾಗಿತ್ತು. ಅದೇನೇ ಇರಲಿ ಸರ್ಕಾರ ಇವರ ಈ ಸಾಧನೆ ಗುರುತಿಸಿ ಭಾರತ ರತ್ನ ಕೂಡ ನೀಡಲಿ ಎಂಬುವುದು ಎಲ್ಲರ ಆಶಯ.

Leave A Reply

Your email address will not be published.