ರೈಲ್ವೇ ಸ್ಟೇಶನ್ ನಲ್ಲಿ ಕೂಲಿ ಮಾಡುವ ಈ ವ್ಯಕ್ತಿ ಅಲ್ಲಿನ ಉಚಿತ ವೈಫೈ ಬಳಸಿಕೊಂಡು ಮಾಡಿದ ಸಾಧನೆ ಏನು ಗೊತ್ತೇ? ಓದಿದರೆ ನೀವು ಅಚ್ಚರಿ ಪಡುವಿರಿ.

555

ಜೀವನದಲ್ಲಿ ಸಾಧನೆ ಮಾಡಲು ಸಮಸ್ಯೆಗಳು ಮತ್ತು ಬಡತನ ಒಂದು ನೆಪ ಮಾತ್ರ ಹೊರತು ಕಾರಣ ಅಲ್ಲ. ಅದೆಷ್ಟೋ ಜನರು ತಮ್ಮ ಸ್ವಂತ ಕಷ್ಟಗಳ ಮೆಟ್ಟಿ ನಿಂತು ಯಶಸ್ಸಿನ ಹಾದಿಯಲ್ಲಿ ಸಾಗಿದವರು ಇದ್ದಾರೆ. ಕಾರಣ ಹೇಳಿಕೊಂಡು ಕೂತರೆ ಜೀವನ ಎಂಬ ಗಾಡಿ ಪಂಕ್ಚರ್ ಆದ ಹಾಗೆ ಅದು ಮುಂದಕ್ಕೆ ಸಾಗುವುದಿಲ್ಲ, ಬದಲಾಗಿ ಇಲ್ಲ ನಾನು ಮಾಡಿಯೇ ಮಾಡುತ್ತೇನೆ ಎಂಬ ಛಲ ಹೊತ್ತು ಮುಂದಕ್ಕೆ ಸಾಗಿದರೆ ಯಶಸ್ಸು ಖಂಡಿತಾ ಸಿಗುತ್ತದೆ. ಇಂದು ನಾವು ತಿಳಿಯಲು ಹೊರಟ ವಿಷಯ ಅಂತಹುದೇ ಒಬ್ಬ ವ್ಯಕ್ತಿಯ ಕಥೆ.

ಯುಪಿಎಸ್ಸಿ ಎಂದರೆ ಯಾರಿಗೆ ತಾನೆ ಗೊತ್ತಿಲ್ಲ, ನಮ್ಮ ದೇಶದಲ್ಲಿ ಅತ್ಯಂತ ಕಷ್ಟಕರ ಪರೀಕ್ಷೆ ಒಂದಿದ್ದರೆ ಅದು upsc ಮಾತ್ರ. ಅದೆಷ್ಟೋ ಜನರು 10 15 ವರ್ಷಗಳ ಕಾಲ ಓದಿಕೊಂಡು ಕೂತು ಪರೀಕ್ಷೆ ಪಾಸ್ ಮಾಡುತ್ತಾರೆ. ಈ ಪರೀಕ್ಷೆ ಪಾಸ್ ಮಾಡಿದವರು ಬೆರಳೆಣಿಕೆ ಅಷ್ಟು ಜನರು. ಈ upsc ಪರೀಕ್ಷೆ ಒಂಥರಾ ಚಕ್ರವ್ಯೂಹ ಇದ್ದ ಹಾಗೆ, ಆದರೆ ಈ ಚಕ್ರವ್ಯೂಹ ಭೇದಿಸಿದ ಅಭಿಮನ್ಯು ಒಬ್ಬರು ಇದ್ದಾರೆ ಅವರು ಮತ್ಯಾರು ಅಲ್ಲ ಶ್ರೀನಾಥ್ . ಹೌದು ಕೇರಳ ಮೂಲದ ಈ ವ್ಯಕ್ತಿ ವೃತ್ತಿಯಲ್ಲಿ ರೈಲ್ವೆ ಸ್ಟೇಷನ್ ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದವರು.

ಅದೆಷ್ಟೋ ಜನ ಉಚಿತ ವೈಫೈ ಸಿಕ್ಕರೆ ಸಾಕು ಮೊಬೈಲ್ ಅಪ್ಡೇಟ್ , ಸಿನೆಮಾ ಡೌನ್ಲೋಡ್ ಇದನ್ನೇ ಮಾಡುತ್ತಾರೆ ಆದರೆ ಅಂತವರ ಮಧ್ಯೆ ಇವರಿಬ್ಬರೂ ಭಿನ್ನ. ಇವರು ಈ ಉಚಿತ ವೈಫೈ ಬಳಸಿಕೊಂಡು ಯೂಟ್ಯೂಬ್ ಅನ್ನು ಕಲಿಕಾ ಸಾಧನವಾಗಿ ಬಳಸಿಕೊಂಡು ಅದರಲ್ಲೇ upsc ತಯಾರಿ ನಡೆಸುತ್ತಿದ್ದರು. ಅದೆಷ್ಟೋ ಲಕ್ಷ ಗಟ್ಟಲೆ ಹಣ ಸುರಿದು ಕೋಚಿಂಗ್ ಹೋಗುತ್ತಾರೆ, ಆದರೆ ಇವರು ಸರ್ಕಾರದ ಉಚಿತ ವೈಫೈ ಬಳಸಿಕೊಂಡು ಪರೀಕ್ಷಾ ತಯಾರಿ ನಡೆಸಿ ಅದರಲ್ಲಿ ಈಗ ಯಶಸ್ಸನ್ನು ಕಂಡಿದ್ದಾರೆ.

ಹೌದು ಈ ಬಾರಿಯ upsc ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಇದೀಗ ಉನ್ನತ ಹುದ್ದೆ ಏರಲು ಸಜಾಗಿದ್ದರೆ. ಅದೇನೇ ಇರಲಿ ಇದು ಅವರ ಪರಿಶ್ರಮ ಮತ್ತು ನಿಷ್ಠೆ ಇಂದ ಮಾತ್ರ ಸಾಧ್ಯ ಆಗಿದ್ದು. ಇಂತಹ ವ್ಯಕ್ತಿಗಳು ಮುಂದಿನ ಪೀಳಿಗೆಗೆ ಸ್ಫೂರ್ತಿ ಆಗಲಿ ಎಂದು ಹಾರೈಸುತ್ತೇವೆ. ಶ್ರೀನಾಥ್ ಅವರಿಗೂ ಕೂಡ ಒಳ್ಳೆದಾಗಲಿ , ಜನಪರ ಕೆಲಸ ಮಾಡಲು ಶಕ್ತಿ ಕೊಡಲಿ ಎಂದು ಹಾರೈಸುವ.

Leave A Reply

Your email address will not be published.