ಲಂಕೆಯಲ್ಲಿ ದಿನನಿತ್ಯದ ವಸ್ತುಗಳಿಗೆ ಜನರ ಪರದಾಟ. ನಿತ್ಯದ ವಸ್ತುಗಳ ಬೆಲೆ ಎಷ್ಟಾಗಿದೆ ಗೊತ್ತೇ? ಭಾರತದಲ್ಲಿ ಹುಟ್ಟಿರಲು ಪುಣ್ಯ ಮಾಡಿರಬೇಕು ನಾವು.
ಶ್ರೀಲಂಕಾ ಇದೀಗ ಸುದ್ದಿಯಲ್ಲಿ ಇರುವ ದೇಶ. ಒಂದೊಮ್ಮೆ ಅತೀವ ಆಡಳಿತ ವೈಖರಿಗೆ ಹೆಸರುವಾಸಿ ಆದ ಈ ದೇಶ, ಇದೀಗ ದಿವಾಳಿ ಆಗುವತ್ತ ಸಾಗುತ್ತಿದೆ. ಹೌದು ಪ್ರವಾಸೋದ್ಯಮ ಮುಖ್ಯ ಆದಾಯ ಮೂಲ ಆಗಿರುವ ಈ ದೇಶದಲ್ಲಿ ಕೋರೋನ ದ ರೌದ್ರ ನರ್ತನದಿಂದ ಎಲ್ಲವೂ ನೆಲ ಕಚ್ಚಿ ಹೋಗುವಂತೆ ಮಾಡಿದೆ. ಪ್ರವಾಸೋದ್ಯಮದಿಂದ ದೇಶದ ಬಹುಪಾಲು ಆದಾಯ ಬರುತ್ತಿತ್ತು ಆದರೆ ಕೊವಿಡ್ ನಿಂದಾಗಿ ಎಲ್ಲವೂ ಬಂದಾಗಿದ್ದ ಕಾರಣ ಯಾವುದೇ ವಿದೇಶಿಯರು ಬರುತ್ತಿರಲಿಲ್ಲ ಇದರಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿ ತೀವ್ರ ಹದಗೆಟ್ಟಿದೆ.
ಎಲ್ಲರೂ ವಲಸೆ ಹೋಗಲು ಆರಂಭ ಮಾಡಿದ್ದಾರೆ. ದಿನ ನಿತ್ಯದ ಜೀವನ ಸಾಗಿಸುವುದು ಬಲು ಕಷ್ಟ ಆಗಿ ಹೋಗಿದೆ. ಹಾಗಾದರೆ ಇಂದು ದಿನ ಬಳಕೆಯ ವಸ್ತುಗಳ ಬೆಲೆ ಹೇಗಿದೆ ಬನ್ನಿ ತಿಳಿಯೋಣ. ದಿನ ನಿತ್ಯಕ್ಕೇ ಬಳಸುವ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ಪಾಪದವರಿಗೆ ಬದುಕುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. 400 ಗ್ರಾಂ ಹಾಲಿನ ಪುಡಿಗೆ 790 ರೂಪಾಯಿ ಆಗಿದ್ದು, 1ಕೆಜಿ ಅಕ್ಕಿಯ ಬೆಲೆ 300ರೂಪಾಯಿ ಗಡಿ ದಾಟಿದೆ.
ಹೋಟೆಲ್ ಗಳಲ್ಲಿ ಒಂದು ಕಪ್ ಟೀ ಬೆಲೆ 100ರೂಪಾಯಿಗೆ ತಲುಪಿದೆ. ಗೋದಿ ಹಿಟ್ಟು 160 ಬೇಳೆಕಾಳುಗಳು 270 ಪೆಟ್ರೋಲ್ 283 ಡೀಸೆಲ್ 254 ಮತ್ತು ದಿನ ನಿತ್ಯದ ಬಳಕೆಗೆ ಬಳಸುವ ಎಲ್ ಪೀ ಜಿ ದರ 2000ರೂಪಾಯಿ ದಾಟಿದೆ. ಹೌದು ಎಲ್ಲದರ ಬೆಲೆ ಗಗನಕ್ಕೆ ಏರಿದೆ ಬದುಕುವುದೇ ಕಷ್ಟವಾಗಿ ಹೋಗಿದೆ. ಎಲ್ಲರೂ ವಿದೇಶಗಳಿಗೆ ವಲಸೆ ಹೋಗಲು ಸಿದ್ಧರಾಗಿದ್ದಾರೆ. ಭಾರತ ಮೂಲದ ತಮಿಳು ಜನರು ಭಾರತಕ್ಕೆ ವಾಪಸ್ಸಾಗುತ್ತಿದ್ದರೆ ಕೆಲವರು ವಿದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಇದೆ ಸ್ಥಿತಿ ಮುಂದುವರಿದರೆ ದೇಶ ದಿವಾಳಿ ಆಗಿ ಬಿಡುತ್ತದೆ