ವಿದೇಶಿ ಕಂಪನಿ ಕೆಲಸ ಬಿಟ್ಟು ಸ್ವಂತ ಉದ್ಯಮ ಪ್ರಾರಂಭಿಸಿದ ಹುಡುಗ ಇಂದು ಸಂಪಾದಿಸುತ್ತಿದ್ದಾನೆ ಕೋಟ್ಯಂತರ ಹಣ. ಬೆಂಗಳೂರಿನವರಾದರೆ ನೀವು ಇವರ ಪ್ರಾಡಕ್ಟ್ ಖಂಡಿತ ಬಳಸಿರುತ್ತೀರ.

238

ಜೀವನದಲ್ಲಿ ಎಲ್ಲವೂ ನಾವು ಅಂದುಕೊಂಡ ಹಾಗೆ ನಡೆಯುವುದಿಲ್ಲ. ಹಾಗೆ ಒಂದು ವೇಳೆ ನಡೆದರೂ ಕೂಡ ನಾವು ಅದನ್ನು ಅಷ್ಟು ಸೀರಿಯಸ್ ಆಗಿ ತೆಗೆದು ಕೊಳ್ಳುವುದಿಲ್ಲ, ಯಾಕೆಂದರೆ ನಮ್ಮ ಒಳಗಿನ ಭಂಡತನ ಅದು ನಾನು ಎನಿಸಿಕೊಂಡ ಹಾಗೆ ನಡೆಯಿತು ಎಂದು ಸುಮ್ಮನೆ ಕೂರುವಂತೆ ಮಾಡುತ್ತದೆ. ಆದರೆ ನಾವು ಎಣಿಸದ್ದು ನಡೆಯದೆ ಹೋದಾಗ ಮಾತ್ರ ನಾವು ಮತ್ತಷ್ಟು ಪ್ರಯತ್ನ ಮಾಡಿ ಜೀವನದಲ್ಲಿ ಯಶಸ್ಸು ಕಾಣುತ್ತೇವೆ . ಇಂತಹ ಒಂದು ಸಾಧನೆ ಮಾಡಿದ ಈ ವ್ಯಕ್ತಿಯ ಬಗೆಗೆ ತಿಳಿಯಲೇ ಬೇಕು ನಾವು.

ಉತ್ತಮ ಸ್ಥಿರ ಕುಟುಂಬದಿಂದ ಬಂದ ಈ ಹುಡುಗನ ಮನೆಯವರು ಕೂಡ ಐಐಟಿ ಅಲ್ಲಿ ಕಲಿತವರು. ಹಾಗೆಯೇ ಈತ ಕೂಡ ಐಐಟಿ ಅಲ್ಲಿ ಕಲಿತವ. ಕಲಿತ ನಂತರ ಒಂದು ಒಳ್ಳೆಯ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿ ಸೇರುವುದು ಎಲ್ಲರ ಕನಸು, ಇದರಲ್ಲಿ ಎಷ್ಟೋ ಜನ ಯಶಸ್ಸು ಕಾಣುತ್ತಾರೆ. ಮತ್ತೊಂದಷ್ಟು ಜನ ಸೋಲೊಪ್ಪಿಕೊಂಡ ಸುಮ್ಮನಾಗುತ್ತಾರೆ. ಇವರಿಗೆ ಉತ್ತಮ ಅವಕಾಶ ಸಿಕ್ಕಿತ್ತು. ಇವರು ಮೈಕ್ರೋಸಾಫ್ಟ್ ಸಂಸ್ಥೆಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡರು. ಆದರೆ ಮನಸಿನೊಳಗೆ ಯಾಕೋ ಸಮಾಧಾನ ಇರಲಿಲ್ಲ ಅದಕ್ಕಾಗಿ ತನ್ನದೇ ಏನಾದರೂ ಮಾಡಬೇಕು ಎಂದು ನಿರ್ಧರಿಸಿ ಆ ಉಳ್ಳೆಯ ಸಂಬಳದ ಕೆಲಸ ಬಿಟ್ಟು ಹೊರ ಬಂದರು.

ಅವರ ಹೆಸರೇ ಭವಿಷ್ ಅಗರ್ವಾಲ್, ಇವರು ತಮ್ಮ ಉದ್ಯೋಗವನ್ನು ಬಿಟ್ಟು ಇವರದ್ದೇ ಆದ ಆಂಡ್ರಾಯ್ಡ್ ಆ್ಯಪ್ ಮೂಲಕ ಎಲ್ಲಾ taxi ಗಳನ್ನು ಒಂದೇ ಸೂರಿನಡಿ ತಂದರು. ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಸವಾರಿ ಮತ್ತು ಅದಕ್ಕೆ ಬೇಕಾದ GPS techonlogy ಬಳಸಿ ರೂಪುಗೊಂಡ ಆ್ಯಪ್ ಇದು ಇವರನ್ನು ಯತ್ತರದ ಶಿಖರಕ್ಕೆ ಕೊಂಡೊಯ್ದು ಬಿಟ್ಟಿತು. ಆ ಕಂಪನಿ ಮತ್ಯಾವುದೋ ಅಲ್ಲ ಅದು “OLA”. ಇದರ ಬಗ್ಗೆ ಎಲ್ಲರಿಗೂ ಗೊತ್ತಿದೆ, ಆದರೆ ಇದನ್ನು ಸಂಸ್ಥಾಪಿಸಿದ ವ್ಯಕ್ತಿಯ ಹಿನ್ನಲೆ ಗೊತ್ತಿರಲಿಲ್ಲ ಇಂದು ಗೊತ್ತಾಯಿತು ಎಲ್ಲರಿಗೂ. 2500 ಕೋಟಿಗೂ ಅಧಿಕ ವ್ಯವಹಾರ ನಡೆಸುತ್ತಿದೆ ಕಂಪನಿ.

Leave A Reply

Your email address will not be published.