ವಿದೇಶಿ ಕಂಪನಿ ಹುಂಡೈ ಕಾರು ಮಾರಾಟವನ್ನು ಮೀರಿಸಿದ ದೇಶಿಯ ಟಾಟಾ ಕಾರುಗಳು. ಮೇ ತಿಂಗಳಲ್ಲಿ ಟಾಟಾ ಮೋಟರ್ಸ್ ಮಾರಾಟ ಮಾಡಿದ ಕಾರುಗಳ ಸಂಖ್ಯೆ ಎಷ್ಟು ಗೊತ್ತೇ?

346

ಟಾಟಾ ಮೋಟರ್ಸ್ ಭಾರತದ ಹೆಮ್ಮೆ ರತನ್ ಟಾಟಾ ಅವರ ಒಂದು ಕಂಪನಿ. ಈ ಕಂಪನಿ ಭಾರತದ ಹೆಮ್ಮೆ ಏಕೆಂದರೆ ಟಾಟಾ ಅವರದ್ದು ಕಂಪನಿ ಆಗಿದ್ದು, ತಮ್ಮ ಲಾಭದ ಬಹುಪಾಲು ಇವರು ದಾನ ಮಾಡುತ್ತಾರೆ. ಅಲ್ಲದೆ ಭಾರತದಲ್ಲಿ ವಿದೇಶಿ ಕಂಪನಿ ಗಳ ಕಾರುಗಳ ಪಾರುಪತ್ಯದ ಸಮಯದಲ್ಲಿ ಭಾರತದ್ದೇ ಒಂದು ಸ್ವಂತ ಕಾರ್ ನಿರ್ಮಾಣ ಮಾಡಿದ ಸಂಸ್ಥೆ. ಭಾರತದವರು ಯಾವುದರಲ್ಲಿಯೂ ಕಡಿಮೆ ಇಲ್ಲ ಎಂದು ತೋರಿಸಿದ ಸಂಸ್ಥೆ. ಲಕ್ಷಾಂತರ ಜನರಿಗೆ ಉದ್ಯೋಗ ನೀಡಿ ಸಲಹುತ್ತಿರುವ ಸಂಸ್ಥೆ ಟಾಟಾ ಸಂಸ್ಥೆ.

ಇಂದಿನ ದಿನಗಳಲ್ಲಿ ಭಾರತದಲ್ಲಿ ಅನೇಕ ಕಾರ್ ಉತ್ಪಾದನೆ ಮಾಡುವ ಕಂಪನಿ ಗಳಿವೆ. ಹಾಗೇನೇ ಆ ಕಂಪನಿ ಗಳ ಅನೇಕ ಮಾಡೆಲ್ ಗಳಿವೆ. ಒಂದೊಂದರ ಶೈಲಿ ಹಾಗೇನೇ ಉಪಯೋಗ ಬೇರೆ ಬೇರೆ ಆಗಿದೆ. ಈ ಜಟಾಪಟಿಗಳ ನಡುವೆಯೂ ಭಾರತದಲ್ಲಿ ಅತಿ ಹೆಚ್ಚು ಕಾರುಗಳ ಮಾರಾಟ ಮಾಡುತ್ತಿರುವ ಸಂಸ್ಥೆಗಳು ಭಾರತದ ಟಾಟಾ ಹಾಗು ಕೊರಿಯಾ ದ ಹುಂಡೈ ಸಂಸ್ಥೆ. ಇವೆರಡರ ನಡುವೆ ಮಾರಾಟ ವಿಚಾರದಲ್ಲಿ ಜಿದ್ದಾ ಜಿದ್ದಿ ನಡೆಯುತ್ತಲೇ ಇದೆ. ಮೇ ತಿಂಗಳಲ್ಲಿ ಟಾಟಾ ಮೋಟರ್ಸ್ ಹುಂಡೈ ಕಾರುಗಳಿಗಿಂತ ಅತಿ ಹೆಚ್ಚು ಕಾರುಗಳನ್ನು ಮಾರಾಟ ಮಾಡಿ ಭೇಷ್ ಎನಿಸಿಕೊಂಡಿದೆ.

ಟಾಟಾ ಮೋಟರ್ಸ್ ಕಾರುಗಳ ಮಾರಾಟದಲ್ಲಿ ಏರಿಕೆ ಕಾಣುತ್ತಿದೆ, ಕಾರಣ ಸೆಮಿ ಕಾಂಡಕ್ಟಾರ್ ಕೊರತೆ ಇದೀಗ ಇಲ್ಲ ಹಾಗೇನೇ ಉತ್ಪಾದನೆ ಟಾಟಾ ಹೆಚ್ಚು ಮಾಡಿದೆ. ಇನ್ನೊಂದೆಡೆ ಹುಂಡೈ ಭಾರತದ ಪ್ಲಾಂಟ್ ಗಳು ನಿರ್ವಹಣೆ ಕಾರ್ಯಕ್ಕಾಗಿ ಮುಚ್ಚಿದ್ದವು. ಇದೆಲ್ಲ ಕಾರಣಕ್ಕೆ ಟಾಟಾ ಈ ಬಾರಿ ಹುಂಡೈ ಗಿಂತ ಹೆಚ್ಚಿನ ಕಾರುಗಳ ಮಾರಾಟ ಮಾಡಿದೆ. ಇನ್ನು ಇವೆರಡು ಕಂಪನಿಗಳ ಕಾರ್ ಮಾರಾಟದಲ್ಲಿ ಅತಿ ಹೆಚ್ಚಿನ ವ್ಯತ್ಯಾಸ ಇಲ್ಲ. ಕೇವಲ ೧೦೦೦ ಚಿಲ್ಲರೆ ಅಷ್ಟೇ ವ್ಯತ್ಯಾಸ ಇದೆ. ಒಟ್ಟಾರೆ ಟಾಟಾ ಮೇ ತಿಂಗಳಲ್ಲಿ ಮಾರಾಟ ಮಾಡಿದ ಕಾರ್ ಸಂಖ್ಯೆ ೪೩,೩೪೧ ಹಾಗೇನೇ ಹುಂಡೈ ಮಾರಾಟ ಮಾಡಿದ ಕಾರುಗಳ ಸಂಖ್ಯೆ ೪೨,೨೯೩.

ಇನ್ನು ಒಟ್ಟಾರೆ 2022 ವರ್ಷದ ಮಾರಾಟ ನೋಡಿದರೆ ಹುಂಡೈ ಟಾಟಾ ಗಿಂತ ಹೆಚ್ಚಿನ ಮಾರಾಟ ಮಾಡಿದೆ. ಹುಂಡೈ ಒಟ್ಟು ಜನವರಿ ೨೦೨೨ ರಿಂದ ೨,೧೮,೯೬೬ ಕಾರುಗಳ ಮಾರಾಟ ಮಾಡಿದರೆ ಟಾಟಾ ಮೋಟರ್ಸ್ ಜನವರಿ ೨೦೨೨ ರಿಂದ ಮೇ ೨೦೨೨ ರ ವರೆಗೆ ಒಟ್ಟು ೨,೦೭,೯೮೬ ಕಾರುಗಳ ಮಾರಾಟ ಮಾಡಿದೆ. ಇವೆರಡರ ನಡುವಿನ ವ್ಯತ್ಯಾಸ ಕೇವಲ ೧೦,೦೦೦-೧೧,೦೦೦ ಅಷ್ಟೇ ಇರುವುದು. ವರ್ಷಾಂತ್ಯದಲ್ಲಿ ಯಾರು ಎಷ್ಟು ಕಾರುಗಳು ಮಾರಾಟ ಮಾಡುತ್ತಾರೆ ಎನ್ನುವ ಕುತೂಹಲ ಎಲ್ಲರಿಗು ಇದೆ. ಇನ್ನು ಈ ಬೆಲೆ ಏರಿಕೆ ಸಮಯದಲ್ಲಿ ಮುಂದೆ ಇದೆ ರೀತಿ ಮಾರಾಟ ಆಗುತ್ತಾ ಎನ್ನುವ ಸಂಶಯ ಕೂಡ ಸಾಮಾನ್ಯರಲ್ಲಿ ಹಾಗೇನೇ ಕಂಪೆನಿಗಳಲ್ಲಿ ಮೂಡಿದೆ.

Leave A Reply

Your email address will not be published.