ವಿಮಾನ ಕಂಡು ಹಿಡಿದದ್ದು ರೈಟ್ ಸಹೋದರರಲ್ಲ ಬದಲಾಗಿ ಇವರೊಬ್ಬ ಭಾರತೀಯ ವಿಜ್ಞಾನಿ. ಎಷ್ಟು ಜನರಿಗೆ ಗೊತ್ತಿದೆ ಈ ವಿಷಯ?
ವಿಮಾನ ಎಂದಾಕ್ಷಣ ಮೊದಲಿಗೆ ಬರುವುದು ರೈಟ್ ಸಹೋದರರು ಎಂದು. ಹೌದು ವಿಮಾನ ಕಂಡು ಹಿಡಿದ ಕೀರ್ತಿ ಮುದ್ರಿತ ಇತಿಹಾಸದ ಪ್ರಕಾರ ರೈಟ್ ಸಹೋದರರಿಗೆ ಸಲ್ಲುತ್ತದೆ. ಇವರು ಇಡೀ ವಿಶ್ವದಲ್ಲೇ ಮೊದಲ ಬಾರಿಗೆ ವಿಮಾನ ಹಾರಿಸಿದರು ಎಂದು ಹೇಳಲಾಗಿದೆ. ಅದೇ ಪಠ್ಯ ಪುಸ್ತಕದಲ್ಲೂ ಮುದ್ರಿತವಾಗಿದೆ. ಹಾಗಾದರೆ ಇದರಲ್ಲಿ ಎಷ್ಟು ಸತ್ಯಾಂಶ ಇದೆ ಎಂದು ನಾವು ಇಂದು ತಿಳಿಯೋಣ.
ಎಲ್ಲರೂ ತಿಳಿದಂತೆ ರೈತ ಸಹೋದರರು 1903 ರಲ್ಲಿ ಮೊದಲ ವಿಮಾನ ಹಾರಾಟ ಮಾಡಿದರು ಎಂದು. ಇದೆ ಎಲ್ಲಾ ಇತಿಹಾಸ ಪುಸ್ತಕದಲ್ಲೂ ಮುದ್ರಿಯವಾಗಿದೆ. ಆದರೆ ಇವರಿಗಿಂತಲು ಮುಂಚೆ ಅಂದರೆ 1895ರಲ್ಲಿ ಭಾರತೀಯ ಮೂಲದ ವಿಜ್ಞಾನಿ ಒಬ್ಬರು ವಿಮಾನ ಹಾರಾಟ ನಡೆಸಿದ್ದಾರೆ ಎಂಬುವುದಕ್ಕೆ ದಾಖಲೆ ಇದೆ.ಆದರೆ ಆ ಸಮಯದಲ್ಲಿ ಯಾವುದೇ ಪ್ರಸರಣ ಮಾಧ್ಯಮ ಇರಲಿಲ್ಲ . ಅದರಿಂದಾಗಿ ಅವರು ಮಾಡಿದ ಸಾಧನೆ ಯಾರಿಗೂ ಕಾಣದೆ ಹೋಗಿದ್ದು ನಿಜ. ಇದರಿಂದಾಗಿ ಮೊದಲು ವಿಮಾನ ಹಾರಾಟ ಮಾಡಿದ ಕೀರ್ತಿ ಅಮೆರಿಕಾಗೆ ಸಲ್ಲುತ್ತದೆ. ಆದರೆ ನಾವು ನಮ್ಮ ಭಾರತೀಯರೊಬ್ಬರ ಸಾಧನೆಗೆ ನಾವು ಮೆಚ್ಚಲೇ ಬೇಕು. ಇದರ ಬಗ್ಗೆ ಸಾಕಷ್ಟು ಜನರಿಗೆ ಅರಿವು ಮೂಡಿಸುವ ಕೆಲಸ ಕೂಡ ಆಗಬೇಕು.
ಇವರ ಹೆಸರು ಶಿವಕರ್ ಬಾಪೂಜಿ ತಲ್ಪಡೆ ,ಮೂಲತಃ ಮುಂಬೈ ನವರು. ಇವರು ಸರ್ ಜೇಜೆ ಸ್ಕೂಲ್ ಆಫ್ ಆರ್ಟ್ಸ್ ನಲ್ಲಿ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. ಇವರಿಗೆ ಸಂಸ್ಕೃತ ಮತ್ತು ಗಗನಯಾನ ದಲ್ಲಿ ಬಹಳಷ್ಟು ಆಸಕ್ತಿ ಇತ್ತು. ಅಮೆರಿಕಾದ ರೈಟ್ ಬ್ರದರ್ಸ್ ಗಿಂತ 8 ವರ್ಷ ಮುಂಚೆಯೇ ಇವರು ವಿಮಾನವನ್ನು ಕಂಡು ಹಿಡಿದು ಹಾರಾಟ ನಡೆಸಿದ್ದರು. ಇನ್ನಾದರೂ ನಾವು ನಮ್ಮವರ ಬಗ್ಗೆ ಹೆಮ್ಮೆ ಪಡೋಣ. ಇನ್ನು ಎಷ್ಟು ಎಂದು ನಮಗೆ ಬಲವಂತದ ಇತಿಹಾಸ ಓದಿಸುತ್ತಿರಿ. ಇದೀಗ ಅವರ ಜೀವನಾಧಾರಿತ ಚಿತ್ರ” ಹವಾಯ್ಜಾದ” ಬಿಡುಗಡೆ ಆಗಿದ್ದು, ಎಲ್ಲರೂ ನೋಡಿ ನಮ್ಮ ಭಾರತೀಯ ಸಾಧಕರ ಬಗೆಗೆ ತಿಳಿಯಬೇಕು ಮತ್ತುಅದನ್ನು ಪಸರಿಸಬೇಕು.