ವಿರಳ ತಳಿಯ ಗೋವುಗಳನ್ನು 30 ವರ್ಷದಿಂದ ಸಂರಕ್ಷಿಸುತ್ತಿರುವ ಈ ಮಹಾತಾಯಿಗೆ ಪದ್ಮಶ್ರೀ ಕೊಟ್ಟು ಸನ್ಮಾನ ಮಾಡಿದ ಭಾರತ ಸರಕಾರ.
೨೦೨೨ ರ ಗಣತಂತ್ರ ದಿವಸದಂದು ಪದ್ಮಶ್ರೀ ಪ್ರಶಸ್ತಿಗೆ ಸಾಧಕರ ಪಟ್ಟಿ ತಯಾರಿಸಿತ್ತು. ಈ ಲಿಸ್ಟ್ ಅಲ್ಲಿ ದೇಶದ ಅನೇಕ ಗಣ್ಯಾತಿ ಗಣ್ಯರ ಹೆಸರು ಕೂಡ ಇತ್ತು. ದಿವಂಗತ ಸಿಡಿಎಸ್ ಬಿಪಿನ್ ರಾವತ್, ಕಲ್ಯಾಣ್ ಸಿಂಗ್ ರವರು ಇದರಲ್ಲಿ ಪ್ರಮುಖರಾಗಿದ್ದವರು. ಪದ್ಮ ಭೂಷಣ, ಪದ್ಮ ವಿಭೂಷಣ ಹಾಗು ಪದ್ಮಶ್ರೀ ಪುರಸ್ಕಾರದ ದೊಡ್ಡ ಲಿಸ್ಟ್ ಇದೆ. ಈ ಲಿಸ್ಟ್ ಅಲ್ಲಿ ೧೨೯ ಗಣ್ಯರಿದ್ದರು. ಇದರಲ್ಲಿ ಕೇರಳದಲ್ಲಿ ವಾಸಿಸುವ ರಿಟೈರ್ಡ್ ಪ್ರೊಫೆಸ್ಸರ್ ಸೊಸ್ಸಮ್ಮ ಐಪೆ (Sosamma Iype) ಅವರು ಕೂಡ ಇದ್ದರು.
ಯಾರಿದು ಈ ಸೊಸ್ಸಮ್ಮ ಐಪೆ( Sosamma Iype )?
ಸೋಸಮ್ಮ ಅವರು ಕೇರಳದ ಮೂಲದವರಾಗಿದ್ದು ನಿವೃತ್ತ ಪ್ರಾಧ್ಯಾಪಕರಾಗಿದ್ದಾರೆ. ಅಲ್ಲದೆ ಇವರು ಪಶುಗಳ ಚಿಕಿತ್ಸೆ ಕೂಡ ಮಾಡುತ್ತಾರೆ. ಕೇಂದ್ರ ಬಿಜೆಪಿ ಸರಕಾರ ಇವರ ಸೇವೆಗೆ ಪದ್ಮಶ್ರೀ ಪುರಸ್ಕಾರ ನೀಡುತ್ತದೆ ಎಂದು ತಿಳಿದಾಗ ಇವರ ಕುಶಿಗೆ ಪಾರವೇ ಇರಲಿಲ್ಲ. ಸೋಸಮ್ಮ ಅವರಿಗೆ ೮೦ ರ ದಶಕದ ವಿಶಿಷ್ಟ ಹಾಗು ವಿರಳ ವೇಚೂರ್ ತಳಿ ಸಂರಕ್ಷಿಸಲು ನಡೆಸುತ್ತಿರುವ ಕೆಲಸಕ್ಕಾಗಿ ಈ ಪುರಸ್ಕಾರ ದೊರಕಿದೆ. ( Vechur Cow Conservation Trust ).
ವೇಚೂರ್ ಹಸು ಇದು ಸ್ಥಳೀಯ ತಳಿಯ ಹಸು. ಈ ತಳಿಯ ಹಸುಗಳ ಬಗ್ಗೆ ಕೆಲವೇ ಜನರಿಗೆ ತಿಳಿದಿರುತ್ತದೆ. ವೇಚೂರ್ ಹಸು ಗಾತ್ರದಲ್ಲಿ ಚಿಕ್ಕದಾಗಿದೆ, ಆದರೆ ಅದರ ಹಾಲಿನ ಪ್ರಮಾಣವು ಇತರ ಹಸುಗಳಿಗಿಂತ ಸ್ವಲ್ಪ ಹೆಚ್ಚಾಗಿರುತ್ತದೆ. ಇದಲ್ಲದೇ ಇದರ ಹಾಲಿನಲ್ಲಿ ಔಷಧೀಯ ಗುಣಗಳು ಹೇರಳವಾಗಿ ಕಂಡುಬರುತ್ತವೆ. ಇದರ ಜೊತೆಗೆ ಅದರ ನಿರ್ವಹಣೆ ಮತ್ತು ಮೇವಿನ ಖರ್ಚು ಕೂಡ ಕಡಿಮೆಯಿರುತ್ತದೆ.
ಸೋಸಮ್ಮ ಅವರು ಕೇರಳದ ತ್ರಿಶೂರ್ ನಲ್ಲಿರುವ ವೆಟರ್ನರಿ ಮೆಡಿಸಿನ್ ಮತ್ತು ಅನಿಮಲ್ ಸೈನ್ಸ್ ವಿಶ್ವವಿದ್ಯಾಲದಲ್ಲಿ ನಿವೃತ್ತ ಪ್ರಾಧ್ಯಾಪಕರಾಗಿದ್ದಾರೆ. ಸೋಸಮ್ಮ ಕಳೆದ ೩೦ ವರ್ಷಗಳಿಂದ ವೇಚೂರ್ ತಳಿಯ ಹಸುಗಳನ್ನು ಉಳಿಸುವಲ್ಲಿ ತೊಡಗಿದ್ದಾರೆ. ಇದನ್ನು ಅಳಿವಿನಂಚಿನಿಂದ ರಕ್ಷಿಸಲು ಹಾಗು ಅವುಗಳ ಸಂಖ್ಯೆ ಹೆಚ್ಚಿಸಲು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇದಕ್ಕಾಗಿ ಎಲ್ಲ ಪ್ರಯತ್ನಗಳನ್ನು ಕೂಡ ಮಾಡುತ್ತಿದ್ದಾರೆ.
President Kovind presents Padma Shri to Prof Sosamma Iype for Animal Husbandry. She is a Director of Projects of the Vechur Conservation Trust, an NGO that works towards the conservation of the indigenous cattle breeds of Kerala – the Vechur and Kasaragod cows. pic.twitter.com/QYhMxk2f42
— President of India (@rashtrapatibhvn) March 21, 2022
ಈ ಹಸುಗಳನ್ನು ಸಂರಕ್ಷಿಸುವುದು ಅಷ್ಟು ಸುಲಭವಾಗಿರಲಿಲ್ಲ ಸೋಸಮ್ಮ ಅವರಿಗೆ. ಅವರು ತಮ್ಮ ಚಿಕ್ಕ ಪ್ರಾಯದಲ್ಲಿಯೇ ಈ ಕಾರ್ಯಕ್ಕೆ ತಮ್ಮನ್ನು ತಾವು ತೊಡಗಿಸಿಕೊಂಡವರು. ಈ ವೇಚೂರ್ ತಳಿಯ ಹಸುಗಳನ್ನು ಒಂದು ಊರಿನಿಂದ ಇನ್ನೊಂದು ಊರಿಗೆ ವಿಚಾರಿಸಿಕೊಂಡು ಹೋಗುವುದು ರೈತರ ಬಳಿ ಮಾತನಾಡುವುದು ಅದು ಕೂಡ ಅವರ ಇಳಿ ವಯಸ್ಸಿನಲ್ಲಿ ಸುಲಭದ ಮಾತಾಗಿರಲಿಲ್ಲ. ಇದಕ್ಕಾಗಿ ಅವರ ಕುಟುಂಬದ ಜೊತೆ ಮುನಿಸುಕೂಡ ಮಾಡಿಕೊಳ್ಳಬೇಕಾಯಿತು. ಆದರೂ ಛಲ ಬಿಡದೆ ತಮ್ಮ ಗುರಿ ತಲುಪಿದ ಇವರಿಗೆ ಇಂದು ದೇಶ ಉತ್ತಮ ಪ್ರಶಸ್ತಿ ಕೊಟ್ಟು ಸನ್ಮಾನಿಸಿದೆ.