ವಿಶ್ವದಲ್ಲೇ ಅತಿ ಹೆಚ್ಚು ವೀಕೆಂಡ್ ರಜೆ ಕೊಡುವ ದೇಶದ ಬಗ್ಗೆ ಗೊತ್ತೇ ನಿಮಗೆ ? ಇಲ್ಲಿ ಓದಿರಿ.

320

ರಜೆ ಎಂದರೆ ಎಲ್ಲರಿಗೂ ಖುಷಿ ಇದ್ದೆ ಇರುತ್ತದೆ ನೋಡಿ. ದಿನವಿಡೀ ಕೆಲಸ ಕೆಲಸ ಎಂದು ತಲೆಕೆಡಿಸಿ ಕೊಳ್ಳುವ ಜನರೇ ಹೆಚ್ಚು. ಹೀಗಿರುವಾಗ ಸಂಜೆ ಕೆಲಸದ ಅವಧಿ ಮುಗಿಯಿತೆಂದರೆ ಬಾರಿ ಸಂತಸ. ಮಕ್ಕಳಿಗೆ ಶಾಲೆ ಬಿಟ್ಟ ಅನುಭವ ನೋಡಿ. ವೀಕೆಂಡ್ ಬಂದರೆ ಒಂತರಾ ರಿಲಾಕ್ಸ್ ಮೋಡ್. ಆದರೆ ಹೀಗೆ ಅತೀ ಹೆಚ್ಚು ವೀಕೆಂಡ್ ರಜೆ ಸಿಗುವ ದೇಶದ ಬಗ್ಗೆ ನಿಮಗೆ ಗೊತ್ತೇ ಇಲ್ಲವಾದರೆ ಇಲ್ಲಿ ಓದಿರಿ.

ಅದು ಮತ್ಯಾವ ದೇಶವೂ ಅಲ್ಲ ಯುಎಇ ಹೌದು ಸಾಮಾಜಿಕ ಮತ್ತು ಸಂಸ್ಕಾರಿಕ ಜೀವನದ ಸಮತೋಲನವನ್ನು ಕಾಯ್ದು ಕೊಳ್ಳುವುದು ಅತ್ಯಂತ ಮುಖ್ಯ. ಇದನ್ನು ಮನಗಂಡ ಯುಎಇ ಸರ್ಕಾರ ಜನವರಿ 1 2022 ರಿಂದ ಹೊಸ ಕಾನೂನು ಜಾರಿಗೆ ತರಲು ಮುಂದಾಗಿದೆ. ಇದರ ಪ್ರಕಾರ ಇನ್ನು ಯುಎಇ ನಲ್ಲಿ ವಾರಕ್ಕೆ ಬರಿ 4.5 ದಿನ ಕೆಲಸ ಮಾಡಿದರೆ ಆಯ್ತು ಮತ್ತೆ ಮಿಕ್ಕಿದ ಎಲ್ಲಾ ದಿನ ನಿಮ್ಮ ಸಂಸಾರದ ಜೊತೆ ನೀವು ಕಾಲ ಕಳೆಯಬಹುದು. ಹೌದು ಅಚ್ಚರಿ ಎನಿಸಿದರು ಇದು ಸತ್ಯ. ಹಾಗೆಯೇ ಕೆಲಸದ ಸಮಯದ ಅವಧಿಯಲ್ಲೂ ಬದಲಾವಣೆ ಮಾಡಲಾಗಿದೆ. ಬೆಳಗ್ಗಿನ ಜಾವ 7.30 ರಿಂದ ಸಂಜೆ 3.30ರ ವರೆಗೆ ಕೆಲಸ ನಡೆಯುತ್ತದೆ. ಶುಕ್ರವಾರ 7.30 ರಿಂದ ಮಧ್ಯಾಹ್ನ 12 ಗಂಟೆ ಒರೆಗೆ ಕೆಲಸ ನಡೆಯುತ್ತದೆ.

ಶುಕ್ರವಾರದ ದಿನದಂದು ಸರ್ಕಾರಿ ನೌಕರರು ಮನೆಯಿಂದಲೇ ಕೆಲಸ ಮಾಡಬಹುದು. ಹಾಗೂ ತಮಗೆ ಬೇಕಾದ ಹಾಗೆ ಸಮಯವನ್ನು ಹೊಂದಿಸಿ ಕೊಳ್ಳಬಹುದು. ಈ ನಿರ್ಣಯ ಕೈಗೊಂಡಿರುವ ಹಿನ್ನಲೆ ಎಂದರೆ ಇದರಿಂದಾಗಿ ಜನರ ಕಾರ್ಯ ಕ್ಷಮತೆ ಹೆಚ್ಚುತ್ತದೆ ಮತ್ತು ಇದು ದೇಶದ ಅಭಿವೃದ್ದಿ ಕಾರ್ಯದಲ್ಲಿ ಮಹತ್ತರ ಪಾತ್ರ ವಹಿಸುತ್ತದೆ ಎಂದು ಯುಎಇ ಸರ್ಕಾರ ತಿಳಿಸಿದೆ.

Leave A Reply

Your email address will not be published.