ವಿಷ್ಣುವಿನ ಅವತಾರ ಹಾಗೂ ಮಹಾಶಿವನ ಮಗ, ಗಣೇಶನ ನಡುವೆ ನಡೆದ ಯುದ್ಧ ಎಷ್ಟು ಭೀಕರವಾಗಿತ್ತು ಗೊತ್ತೇ?? ಯಾಕೆ ಈಗಾಯಿತು ಗೊತ್ತೇ??

134

ನಮಸ್ಕಾರ ಸ್ನೇಹಿತರೇ ನಮ್ಮ ಪುರಾಣಗಳಲ್ಲಿ ಅನೇಕ ರೋಚಕ ಸಂಗತಿಗಳನ್ನು ಓದಿರುತ್ತೇವೆ. ಕೇಳಿರುತ್ತೇವೆ. ಅವುಗಳಲ್ಲಿ ಪರಶುರಾಮ ಮತ್ತು ಗಣೇಶನ ನಡುವೆ ನಡೆದ ಕಾಳಗ ಕೂಡ ಅತ್ಯಂತ ರೋಚಕತೆಯನ್ನು ಹೊಂದಿದೆ. ಒಮ್ಮೆ ಪರಶಿವನು ಧ್ಯಾನಕ್ಕೆ ಕುಳಿತುಕೊಳ್ಳುತ್ತಾರೆ. ಆದರೆ ಆ ಸಮಯದಲ್ಲಿ ಋಷಿ ಮುನಿಗಳು ಹಾಗೂ ದೇವತೆಗಳು ಶಿವನನ್ನು ನೋಡಲು ಬರುತ್ತಾರೆ. ಇದರಿಂದ ಶಿವನ ಧ್ಯಾನ ಭಂಗವಾಗುತ್ತದೆ. ಈ ಕಾರಣಕ್ಕೆ ಪರಶಿವ ತನ್ನ ಪುತ್ರ ಗಣೇಶನನ್ನು ಕರೆದು ಪುತ್ರನಿಗೆ ಹೀಗೆ ತಿಳಿಸುತ್ತಾರೆ.”ಹೇ ಪುತ್ರ ನನ್ನ ಧ್ಯಾನ ಪೂರ್ತಿಯಾಗುವವರೆಗೂ ಯಾರನ್ನು ಕೂಡ ನನ್ನ ಬಳಿ ಬರಲು ಬಿಡಬೇಡ”. ಎಂದು ಹೇಳಿ ಪರಮಾತ್ಮ ಧ್ಯಾನಕ್ಕೆ ಕುಳಿತುಕೊಳ್ಳುತ್ತಾರೆ.

ತನ್ನ ತಂದೆಯ ಮಾತಿನಂತೆ ಗಣೇಶ ಕೈಲಾಸದ ಮುಖ್ಯ ದ್ವಾರದ ಬಳಿ ಕಾವಲಿಗೆ ನಿಂತಿಕೊಳ್ಳುತ್ತಾನೆ. ಆ ದಿನ ಎಂದಿನಂತೆ ಋಷಿ ಮುನಿಗಳು ಹಾಗೂ ದೇವತೆಗಳು ಪರಶಿವನನ್ನು ಭೇಟಿ ಮಾಡಲು ಕೈಲಾಸದ ಬಳಿ ಬಂದರು. ಆದರೆ ತಂದೆಯ ಮಾತಿನಂತೆ ಮುಖ್ಯ ದ್ವಾರದ ಬಳಿ ಕಾವಲು ನಿಂತಿದ್ದ ಗಣೇಶ ಯಾರನ್ನು ಕೈಲಾಸದ ಒಳಗೆ ಬಿಡಲಿಲ್ಲ. ನಂತರ ಶ್ರೀ ವಿಷ್ಣುವಿನ ಆರನೇ ಅವತಾರವಾದ ಪರಶುರಾಮ ಕೂಡ ಬಹಳ ವರ್ಷಗಳ ತಪಸ್ಸಿನ ನಂತರ ತನ್ನ ಗುರುವಾದ ಶಿವನನ್ನು ನೋಡಲು ಕೈಲಾಸದ ಬಳಿ ಬರುತ್ತಾರೆ.

ಹೀಗೆ ಶಿವನನ್ನು ನೋಡಲು ಬಂದ ಪರಶುರಾಮನನ್ನು ಕೂಡ ಗಣೇಶ ತಡೆದು ನಿಲ್ಲಿಸುತ್ತಾನೆ. ಇದರಿಂದ ಕೋಪಗೊಂಡ ಪರಶುರಾಮ ಗಣೇಶನನ್ನು ಹೀಗೆ ಪ್ರಶ್ನೆ ಮಾಡುತ್ತಾರೆ. ” ಹೇ ಗಜಮುಖ ಬಾಲಕ ಯಾರೂ ನೀನು ? ನನ್ನ ಮಾರ್ಗವನ್ನೇ ತಡೆಯುತ್ತಿರುವೆಯ ಎಂದು ಕೋಪದಿಂದ ಕೇಳುತ್ತಾರೆ. ಆಗ ಗಣೇಶ ಸಮಾಧಾನದಿಂದಲೇ ನಾನು ಪಾರ್ವತಿ ನಂದ, ಮಹಾದೇವ ಪುತ್ರ ಗಣೇಶ ಎಂದು ಪರಶುರಾಮನಿಗೆ ಹೇಳುತ್ತಾನೆ. ಹಾಗೇಯೇ ನನ್ನ ತಂದೆ ಧ್ಯಾನಕ್ಕೆ ಕುಳಿತ್ತಿದ್ದಾರೆ, ಅವರ ಆದೇಶದಂತೆ ಯಾರನ್ನು ಒಳಗೆ ಬಿಡದೆ ನಾನು ಕಾವಲು ಕಾಯುತ್ತಿದ್ದೇನೆ. ನೀವು ಕೂಡ ಅವರನ್ನು ಬೇಟಿ ಮಾಡುವಂತಿಲ್ಲ ಎಂದು ಹೇಳುತ್ತಾನೆ.

ಇದನ್ನು ಕೇಳಿದ ಪರಶುರಾಮ ಮತ್ತೆ ಗಣೇಶನಿಗೆ ನಾನು ಮಹಾದೇವನ ಪರಮ ಶಿಷ್ಯ. ನನ್ನ ಆರಾಧ್ಯ ದೇವರ ಭೇಟಿ ಮಾಡುವುದನ್ನು ತಡೆಯಲು ಸಾಧ್ಯವಿಲ್ಲ ನೀನು ಈ ಕೂಡಲೇ ನನ್ನ ಮಾರ್ಗದಿಂದ ದೂರ ಹೋಗು ಎಂದು ಹೇಳಿ ಕೈಲಾಸವನ್ನು ಪ್ರವೇಶ ಮಾಡಲು ಪ್ರಯತ್ನಿಸುತ್ತಾರೆ. ಇದರಿಂದ ಗಣೇಶ ಪರಶುರಾಮನನ್ನು ತನ್ನ ಬಲದಿಂದ ದೂರ ಸರಿಸುತ್ತಾನೆ. ಈ ಘಟನೆಯಿಂದ ಕೋಪಗೊಂಡ ಪರಶುರಾಮ ಗಣೇಶನ ಜೊತೆ ಯುದ್ದ ಪ್ರಾರಂಭ ಮಾಡಿಯೇ ಬಿಡುತ್ತಾರೆ. ಪರಶುರಾಮ ಗಣೇಶನ ಮೇಲೆ ಶಕ್ತಿಶಾಲಿ ಅಸ್ತ್ರಗಳನ್ನು ಪ್ರಯೋಗಿಸುತ್ತಾರೆ.

ಗಣೇಶನು ಕೂಡ ಅವರ ಎಲ್ಲ ಅಸ್ತ್ರಗಳನ್ನು ವಿಫಲಗೊಳ್ಳುವಂತೆ ಮಾಡುತ್ತಾನೆ. ಹೀಗೆ ಯುದ್ದ ಭೀಕರವಾಗಿ ಸಾಗುತ್ತಿರುತ್ತದೆ. ಗಣೇಶ ತನ್ನ ಶಕ್ತಿಯಿಂದ ಪರಶುರಾಮರನ್ನು ತನ್ನ ಕೈ ನಲ್ಲಿ ಎತ್ತಿ ಹಿಡಿಯುತ್ತಾನೆ. ಬಾಲಕ ತನ್ನ ಎಲ್ಲಾ ಅಸ್ತ್ರಗಳನ್ನು ವಿಫಲಗೊಳಿಸಿದ್ದನ್ನ ಕಂಡ ಪರಶುರಾಮ ಮತ್ತಷ್ಟು ಕೋಪಗೊಳ್ಳುತ್ತಾರೆ. ಆಗ ಪರಶುರಾಮ ಮಹಾದೇವ ನಿಂದ ಪಡೆದುಕೊಂಡ ಪರಶುರಾಮನನ್ನು ಗಣೇಶನ ಮೇಲೆ ಪ್ರಯೋಗ ಮಾಡುತ್ತಾರೆ. ಇದು ತನ್ನ ತಂದೆಯ ಪರಶು ಇದಕ್ಕೆ ಅವಮಾನ ಆಗಬಾರದು ಎಂದು ತಿಳಿದ ಗಣೇಶ ಏನೂ ಮಾಡದೇ ಸುಮ್ಮನೆ ನಿಂತು ಬಿಡುತ್ತಾನೆ

ಆ ಪರಶು ಗಣೇಶ ನ ಒಂದು ದಂತವನ್ನು ಮುರಿದು ಹಾಕುತ್ತದೆ. ಇದರ ನೋವು ತಾಳದೆ ಗಣೇಶ ತನ್ನ ಅಮ್ಮನನ್ನು ಕರೆದುಬಿಡುತ್ತಾನೆ. ನಂತರ ಬಂದ ಪಾರ್ವತಿ ತನ್ನ ಮಗನ ಸ್ಥಿತಿಯನ್ನು ನೋಡಿ ಉಗ್ರಸ್ವರೂಪಿ ಆಗುತ್ತಾಳೆ. ಇದನ್ನು ನೋಡಿದ ಪರಶುರಾಮ ತನ್ನ ತಪ್ಪನ್ನು ಅರಿವು ಮಾಡಿಕೊಳ್ಳುತ್ತಾರೆ. ಹಾಗೂ ಕೂಡಲೇ ಶಿವನನ್ನು ಧ್ಯಾನ ಮಾಡುತ್ತಾರೆ. ತನ್ನ ಭಕ್ತನ ಪರಿಸ್ಥಿತಿ ಕಂಡು ಶಿವ ಕೂಡಲೇ ಆ ಸ್ಥಳದಲ್ಲೇ ಪ್ರತ್ಯಕ್ಷವಾಗಿ ತನ್ನ ಪತ್ನಿ ಪಾರ್ವತಿಯನ್ನು ಹೀಗೆ ಸಮಾಧಾನ ಮಾಡುತ್ತಾರೆ.

ದೇವಿ ” ವಿಷ್ಣುವಿನ ಆರನೇ ಅವತಾರವಾದ ಪರಶುರಾಮನು ಗಣೇಶನ ದಂತವನ್ನು ಮುರಿದು ಅವನನ್ನು ಅವಮಾನಿಸಿಲ್ಲ. ಬದಲಾಗಿ ಅವನ ಬುದ್ದಿ ಶಕ್ತಿ , ಸಾಮರ್ಥ್ಯ, ಸಹನೆಶೀಲತೆ ಯುಳ್ಳ ಗುಣಗಳನ್ನು ಪ್ರಪಂಚದ ಮುಂದೆ ತಂದು ಅವನನ್ನು ಉದ್ದಾರ ಮಾಡಿದ್ದಾರೆ. ಈ ಘಟನೆಯಿಂದ ಗಣೇಶನನ್ನು ಏಕದಂತ ಎಂದು ಕರಯಲಾಗಲಿ ಎಂದು ಹೇಳಿ ಸಮಾಧಾನ ಮಾಡುತ್ತಾರೆ. ಈ ಮಾತುಗಳನ್ನು ಕೇಳಿದ ನಂತರ ಮಾತಾ ಪಾರ್ವತಿಯ ಕೋಪ ಶಾಂತವಾಗುತ್ತದೆ. ಅಂದು ನಡೆದ ಆ ಯುದ್ಧದ ಫಲವೇ ಇಂದು ನಾವು ಶ್ರೀ ಗಣೇಶನನ್ನು ಏಕದಂತ ಎಂದು ಪೂಜೆ ಮಾಡುತ್ತೇವೆ.

Leave A Reply

Your email address will not be published.