ಶ್ರೀ ಕೃಷ್ಣ ನ ಪಾಂಚಜನ್ಯ ಶಂಖದ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಅಚ್ಚರಿಯ ಸಂಗತಿಗಳು.

271

ಸನಾತನ ಧರ್ಮ ಹಾಗು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಶಂಖಕ್ಕೆ ವಿಶೇಷ ಮಹತ್ವವಿದೆ. ಶಂಖದ ನಾದದಿಂದ ವಾತಾವರಣದಲ್ಲಿ ಧನಾತ್ಮಕ ಶಕ್ತಿಯ ಸಾಂತ್ವನವಿದೆ ಎಂದು ನಂಬಲಾಗಿದೆ. ಇದರ ಶಕ್ತಿ ಹಾಗು ಪವಾಡಗಳು ಪುರಾಣಗಳಲ್ಲಿಯೂ ಉಲ್ಲೇಖವಿದೆ. ಇದನ್ನು ವಿಜಯ, ಸಂತೋಷ, ಶಾಂತಿ, ಖ್ಯಾತಿ ಹಾಗು ಕೀರ್ತಿಯ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಎಲ್ಲಕಿಂತ ಮುಖ್ಯವಾಗಿ ಶಂಖವು ಶಬ್ದದ ಸಂಕೇತ ಹಾಗು ಶಬ್ದವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಶಾಂಕಗಳಲ್ಲಿ ೩ ವಿಧಗಳಿವೆ. ದಕ್ಷಿಣವೃತ್ತಿ, ಮಧ್ಯವೃತ್ತಿ ಹಾಗು ವಾಮವೃತ್ತಿ. ಇದಲ್ಲದೆ ಶ್ರೀಕೃಷ್ಣನ ಪಾಂಚಜನ್ಯ ಶಂಖವಿದ್ದು ಇದು ಎಲ್ಲದಕ್ಕಿಂತ ಶ್ರೇಷ್ಠವಾದ ಶಂಕವಾಗಿದೆ.

ಪುರಾಣಗಳ ಪ್ರಕಾರ ಶ್ರೀ ಕೃಷ್ಣನ ಬಳಿ ಪಾಂಚಜನ್ಯ, ಅರ್ಜುನನ ಬಳಿ ದೇವದತ್ತ, ಯುಧಿಷ್ಠಿರನ ಅನಂತ ವಿಜಯ, ಭೀಷ್ಮನಿಗೆ ಪಂಡ್ರಿಕ್, ನಕುಲನಿಗೆ ಸುಘೋಷ, ಸಹದೇವನ ಬಳಿ ಮಣಿಪುಷ್ಪ ಎಂಬ ಶಂಖಗಳಿದ್ದವು. ಪ್ರತಿಯೊಂದು ಶಾಂಕಗಳ ಮಹತ್ವ ಹಾಗು ಶಕ್ತಿ ವಿಶಿಷ್ಟವಾದವು. ಆದರೆ ಇದೆಲ್ಲದರ ನಡುವೆ ಪಾಂಚಜನ್ಯ ಶಂಖವನ್ನು ಬಹಳ ಅಪರೂಪವೆಂದು ಭಾವಿಸಲಾಗಿದೆ. ಇದು ಸಮುದ್ರ ಮಂಥನದ ಸಮಯದಲ್ಲಿ ಹುಟ್ಟಿಕೊಂಡ ಶಂಕವಾಗಿದೆ. ಸಾಗರ ಮಂಥನದಲ್ಲಿ ದೊರೆತ ೧೪ ರತ್ನಗಳಲ್ಲಿ ೬ ನೇ ರತ್ನ ಈ ಶಂಕವಾಗಿದೆ.

ಶ್ರೀಕೃಷ್ಣನ ಈ ಶಂಖದ ನಾದ ಬಹು ಕಿಲೋಮೀಟರು ಗಳ ವರೆಗೆ ಹೋಗುತ್ತದೆ ಎಂದು ಹೇಳಲಾಗುತ್ತದೆ. ಮಹಾಭಾರತ ಸಮಯದಲ್ಲಿ ಈ ಶಂಖ ಊದುವ ಮೂಲಕ ಪಾಂಡವ ಸೇನೆಯಲ್ಲಿ ಉತ್ಸಾಹ ತುಂಬುತ್ತಿದ್ದ. ಇದರ ಸಡ್ಡು ಸಿಂಹ ಘರ್ಜನೆಗಿಂತಲೂ ಭಯಂಕರವಾಗಿತ್ತು. ಇದು ೫ ಬೆರಳುಗಳ ಆಕಾರವನ್ನು ಹೊಂದಿದೆ. ಇಂದು ಕೂಡ ಇದು ಸಿಗುತ್ತದೆ. ಮನೆಯಲ್ಲಿ ವಸ್ತು ದೋಷಗಳನ್ನು ಮುಕ್ತಿಗೊಳಿಸಲು ಮನೆಯಲ್ಲಿ ಬಳಸುತ್ತಾರೆ. ಇದು ರಾಹು ಕೇತುಗಳ ದುಷ್ಟ ದೃಷ್ಟಿಯನ್ನು ಕೂಡ ಕಡಿಮೆ ಮಾಡುತ್ತದೆ ಎಂದು ಕೂಡ ಹೇಳಲಾಗುತ್ತದೆ.

Leave A Reply

Your email address will not be published.