ಸರಿಯಾಗಿ ಇಂಗ್ಲಿಷ್ ಮಾತಾಡಲು ಬಾರದ ಈ ವ್ಯಕ್ತಿ ಕಟ್ಟಿದ ಉದ್ಯಮದಿಂದ ದೇಶದಾದ್ಯಂತ ಜನರು ಇಂದು ಬಳಕೆ ಮಾಡುತ್ತಿದ್ದಾರೆ.

331

ಜೀವನದಲ್ಲಿ ಎಲ್ಲರನ್ನೂ ಅಳೆಯುವ ಮಾನದಂಡ ಎಂದರೆ ಅದು ಇಂಗ್ಲಿಷ್ ಭಾಷೆ. ನಮ್ಮ ದೇಶವನ್ನು ಅಕ್ರಮವಾಗಿ ಆಳ್ವಿಕೆ ಮಾಡಿದವರ ಭಾಷೆ ಇಂದು ದೇಶದ ಜನರನ್ನು ಅಳೆಯುವ ಮಾನದಂಡ. ವಿಚಿತ್ರ ಎನಿಸಿದರೂ ಸತ್ಯ. ವಿಶ್ವದಲ್ಲೇ ಅತ್ಯಂತ ಹೆಚ್ಚು ಬಳಸುವ ಭಾಷೆ ಇದು.ಅದಕ್ಕಾಗಿ ಕೂಡ ಇರಬಹುದು. ಇಲ್ಲೊಬ್ಬ ವ್ಯಕ್ತಿಯು ಹಾಗೆ ನೋಡಿ ಭಾಷೆಯ ಇಕ್ಕಟ್ಟಿಗೆ ಸಿಲುಕಿ ನಲುಗಿ ಕೊನೆಗೆ ತಮ್ಮದೇ ಉದ್ಯಮ ಶುರುಮಾಡಿ ಈಗ ಕೋಟ್ಯಾಂತರ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ.

ಇವರ ಹೆಸರು ವಿಜಯ್ ಶೇಖರ್ ಶರ್ಮಾ, ದೆಹಲಿ ಮೂಲದ ವ್ಯಕ್ತಿ ಇವರು. ಕಾಲೇಜಿಗೆ ಹೋಗುವ ಸಮಯ ಅದು ದೆಹಲಿ ಕಾಲೇಜ್ ಆಫ್ ಇಂಜಿನಿಯರಿಂಗ್ ನಲ್ಲಿ ಇಂಜಿನಿಯರ್ ಓದುತ್ತಿದ್ದರು. ಆ ಸಂದರ್ಭದಲ್ಲಿ ಸಣ್ಣ ಪುಟ್ಟ ಸ್ಟಾರ್ಟ್ ಅಪ್ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರು. ಇವರು ಅದೆಷ್ಟೋ ಸ್ಪರ್ಧಾತ್ಮಕ ಪರೀಕ್ಷೆ ಬರೆದಿದ್ದಾರೆ ಆದರೆ ಇವರ ಇಂಗ್ಲಿಷ್ ಅಷ್ಟೊಂದು ಗಟ್ಟಿಯಾಗಿ ಇರಲಿಲ್ಲ ಎಂಬ ಕಾರಣದಿಂದ ಅವರು ಅದರಲ್ಲಿ ಯಶಸ್ವಿ ಆಗಲು ಸಾಧ್ಯ ಆಗಿಲ್ಲ ಎಂದು ಅವರು ಹೇಳುತ್ತಾರೆ. ಆದರೆ ಅವರು ತಮ್ಮ ಛಲ ಬಿಡದೆ ಏನಾದರೂ ಮಾಡಬೇಕು ಎಂದು ನಿರ್ಧರಿಸಿ ದೊಡ್ಡ ಮೊತ್ತದ ಹಣವನ್ನು ಸ್ಟಾರ್ಟ್ ಅಪ್ ಗೆ ಹೂಡಿಕೆ ಮಾಡುತ್ತಾರೆ. ಆದರೆ ಇದು ಅವರ ನಿರೀಕ್ಷೆಗೂ ಮೀರಿ ಬೆಳೆದು ನಿಂತಿತು.

ಆ ಕಂಪನಿ ಮತ್ಯಾವುದೋ ಅಲ್ಲ ಅದು Paytm. ಇಂದು ನಾವು ಗಲ್ಲಿ ಗಲ್ಲಿಯಲ್ಲಿ ಕೂಡ QR ಕೋಡ್ ಡಿಜಿಟಲ್ ಪೇಮೆಂಟ್ ಕಾಣುತ್ತೇವೆ. ಇಂತಹ ಒಂದು ಕ್ರಾಂತಿಕಾರಿ ಬೆಳವಣಿಗೆಗೆ ಕಾರಣ ಇವರೇ. ಇವರ ಈ ಒಂದು ಯೋಜನೆಯೇ ಇಂದು ಡಿಜಿಟಲಿಕರಣ ಆಗಲು ಸಹಕಾರಿ ಆಗಿದೆ. ಅಂದು ಇಂಗ್ಲಿಷ್ ಒಂದು ಭಾಷೆಯಿಂದ ಹಿಂದಕ್ಕೆ ಉಳಿದ ಈ ವ್ಯಕ್ತಿಯ ಕೈ ಕೆಳಗೆ ಅದೆಷ್ಟೋ ಉತ್ತಮ ಇಂಗ್ಲಿಷ್ ಮಾತನಾಡುವ ಜನರು ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಜನರನ್ನು ಕೇವಲ ಭಾಷೆಯಿಂದ ಅಳೆಯದೆ ಅವರ ಕಾರ್ಯ ಕ್ಷಮತೆಯ ಮೂಲಕ ಅಳೆಯ ಬೇಕು ಎಂಬುವುದಕ್ಕೆ ಇವರೇ ಉದಾಹರಣೆ.

Leave A Reply

Your email address will not be published.