ಸರ್ಕಾರಿ ಕೆಲಸ ತೊರೆದು ಮಾಡಿದ ಈ ಉದ್ಯಮದಿಂದ ಬರುತ್ತಿದೆ ಬರೋಬ್ಬರಿ 16ಲಕ್ಷ ಲಾಭ. ನೀವು ಮಾಡಲು ಇಚ್ಚಿಸುತ್ತಿರಾ?

1,064

ಸರ್ಕಾರಿ ಕೆಲಸ ಎಂದರೆ ದೇವರ ಕೆಲಸ ಎಂದೇ ಹೇಳಲಾಗುತ್ತದೆ. ಆದರೆ ಕೆಲವೊಂದು ಆಯಕಟ್ಟು ಮತ್ತು ವ್ಯವಸ್ಥೆಯಿಂದ ಬೇಸತ್ತು ಜನರು ಹೊರಗೆ ಬರುತ್ತಾರೆ. ಸರ್ಕಾರ ಕೆಲಸ ಸಿಗಬೇಕು ಎಂಬ ಒಂದು ಕನಸು ಹೊತ್ತು ಅದೆಷ್ಟೋ ಜನರು ರಾತ್ರಿ ಹಗಲು ನಿದ್ದೆ ಬಿಟ್ಟು ಓದುತ್ತಾ ಇರುತ್ತಾರೆ. ಒಂದು ಬಾರಿ ಸರ್ಕಾರಿ ಕೆಲಸ ದೊರೆತರೆ ಜೀವನ ಪರ್ಯಂತ ನೆಮ್ಮದಿಯ ಜೀವನ ಸಾಗಿಸಬಹುದು ಎಂಬ ಆಲೋಚನೆ. ಹಾಗಿರುವ ಈ ಜಗತ್ತಿನಲ್ಲಿ ಇಲ್ಲೊಬ್ಬರು ತಮಗೆ ಇದ್ದ ಸರ್ಕಾರಿ ಕೆಲಸವನ್ನು ತೊರೆದು ಬೇರೆ ಕೆಲಸಕ್ಕೆ ಕೈ ಹಾಕಿದ್ದಾರೆ ಏನಿದು ಘಟನೆ ಬನ್ನಿ ತಿಳಿಯೋಣ.

ಇವರ ಹೆಸರು ಕಮಲೇಶ್ ಗುಜರಾತ್ ಮೂಲದವರು. ಮೂಲತಃ ರೈತ ಹಿನ್ನಲೆಯಿಂದ ಬಂದ ಇವರು ಚಿಕ್ಕಂದಿನಿಂದ ಓದುವುದರಲ್ಲಿ ಆಸಕ್ತಿ. ಅದಕ್ಕಾಗಿ ಅವರು ಓದುವುದು ಮುಂದುವರೆಸಿ ಪದವಿ ಮುಗಿಸಿ ಸರ್ಕಾರಿ ಉದ್ಯೋಗ ಪಡೆದು ಕೊಳ್ಳುತ್ತಾರೆ. ಹಳ್ಳಿಯಿಂದ ದೂರ ಕೆಲಸ ಮಾಡುತ್ತಾ ಇರುತ್ತಾರೆ ಆಗಾಗ್ಗೆ ಹಳ್ಳಿಗೆ ಹೋಗಿ ಎಲ್ಲರನ್ನೂ ಮಾತನಾಡಿಸಿ ಒಂದಷ್ಟು ರೈತರನ್ನು ಭೇಟಿ ಮಾಡುತ್ತಿದ್ದರು. ಆದರೆ ಕೊನೆ ಕೊನೆಗೆ ತಮ್ಮ ಕೆಲಸದ ಮೇಲಿನ ಆಸಕ್ತಿ ಹೋಗಿ ಕೃಷಿಯಲ್ಲಿಯೆ ಆಸಕ್ತಿ ಬೆಳೆಯಿತು. ಕೊನೆಗೂ ಜೀವನದ ದೊಡ್ಡ ನಿರ್ಧಾರ ಎಂಬಂತೆ ಸರ್ಕಾರಿ ಕೆಲಸಕ್ಕೆ ರಾಜೀನಾಮೆ ಕೊಟ್ಟು ಕೃಷಿಯಲ್ಲಿ ಮುಂದುವರೆಯುವ ನಿರ್ಧಾರ ಮಾಡಿದರು. ಆರಂಭದ ದಿನಗಳಲ್ಲಿ ಯಾವುದು ಎಣಿಸಿದಂತೆ ನಡೆಯಲಿಲ್ಲ. ಕೆಲಸ ಬಿಟ್ಟು ತಪ್ಪು ಮಾಡಿದೆನೋ ಏನೋ ಎಂಬ ಭಾವನೆ ಕೂಡ ಬರುವಂತ ಪರಿಸ್ಥಿತಿ .

ಆದರೆ ಅವರು ಬಿಟ್ಟುಕೊಡಲಿಲ್ಲ ಜೈವಿಕ ಕೃಷಿ ವಿಧಾನ ಅಳವಡಿಸಿಕೊಂಡು ದಾಳಿಂಬೆ ಕೃಷಿ ಮಾಡಲು ಶುರು ಮಾಡಿದರು. ಇಲ್ಲಿಂದ ನಂತರ ಅವರು ಹಿಂತಿರುಗಿ ನೋಡಲೇ ಇಲ್ಲ, ಈಗ ಅವರ ಬಳಿ 16 ಎಕರೆ ಕೃಷಿ ಭೂಮಿ ಮತ್ತು 4000 ದಾಳಿಂಬೆ ಪ್ಲಾಂಟ್ ಗಳು ಇದ್ದು ಅವರು ಬರೋಬ್ಬರಿ 16ಲಕ್ಷ ರೂಪಾಯಿ ಅಷ್ಟು ಲಾಭ ಪಡೆಯುತ್ತಿದ್ದಾರೆ. ಅದೇನೇ ಆಗಲಿ ಮಾನಸಿದ್ದರೆ ಮಾರ್ಗ ಎಂಬ ಮಾತಿದೆ. ಸರ್ಕಾರಿ ನೌಕರಿಯನ್ನು ಮಾತ್ರ ಜೀವನ ಮರ್ಯಾದೆ ಎಂದು ತಿಳಿದು ಕೊಳ್ಳುವ ಕೆಲ ಜನರಿಗೆ ಈ ಒಂದು ಘಟನೆ ಪಾಠ ಆಗಲಿ.

Leave A Reply

Your email address will not be published.