ಸಾಂಪ್ರದಾಯಿಕ ಬೇಸಾಯ ಪದ್ಧತಿಯನ್ನು ಬಿಟ್ಟು ಮಾಡಿದ ಈ ಬೆಳೆಯಲ್ಲಿ 3 ತಿಂಗಳಿಗೆ 6 ಲಕ್ಷ ಲಾಭ ಬರುತ್ತಿದೆ? ನೀವು ಕೂಡ ಇದನ್ನು ಬೆಳೆಸಬಹುದು?

403

ಬೇಸಾಯ ಎಂಬುವುದು ಭಾರತದ ಬೆನ್ನೆಲುಬು. ಭಾರತದ ಆದಾಯದ ಮೂಲಗಳಲ್ಲಿ ಹೆಚ್ಚಿನ ಪಾಲು ಕೃಷಿ ಆದಾಯದಿಂದ ಬರುತ್ತದೆ. ಕೃಷಿಯನ್ನೇ ಅವಲಂಬಿಸಿ ಬದುಕುವ ಅದೆಷ್ಟೋ ಕುಟುಂಬಗಳು ಭಾರತದಲ್ಲಿ ಇದೆ. ಸರ್ಕಾರ ಕೂಡ ಕೃಷಿ ಮಾಡುವವರಿಗೆ ಉತ್ತೇಜನ ನೀಡಲು ಹಲವಾರು ಸವಲತ್ತು ನೀಡುತ್ತದೆ. ಎಲ್ಲಾ ರೀತಿಯ ವಿನಾಯಿತಿ, ಬಡ್ಡಿ ರಹಿತ ಸಾಲ, ಸಾಲ ಮನ್ನಾ ಹೀಗೆ ಎಲ್ಲಾ ರೀತಿಯಲ್ಲೂ ರೈತರಿಗೆ ನೆರವು ನೀಡುತ್ತದೆ. ಹಾಗೆ ಬೆಳೆ ಬೆಳೆದು ಲಕ್ಷಗಟ್ಟಲೆ ಲಾಭ ಮಾಡಿದ ಮಾದರಿ ರೈತರೊಬ್ಬರ ಬಗ್ಗೆ ನಾವಿಂದು ತಿಳಿಯೋಣ.

ಇವರ ಹೆಸರು ಪ್ರವೀಣ್ ಮಂಗುಕಿಯ, ಸೂರತ್ ಮೂಲದ ನಿವಾಸಿ ಇವರು. ಮೂಲತಃ ಕೃಷಿಯೇ ಇವರ ಮುಖ್ಯ ಕಸುಬು, ಇದರಲ್ಲಿಯೇ ಜೀವನ ಸಾಗಿಸುತ್ತಿದ್ದರು. ಇವರಿಗೆ 7 ಎಕರೆ ಅಷ್ಟು ಕೃಷಿ ಭೂಮಿ ಇದ್ದು ಅದರಲ್ಲಿ ಬೇಸಾಯ ಮಾಡುತ್ತಾ ಜೀವನ ನಡೆಸುತ್ತಿದ್ದರು. ಹಿಂದಿನವರು ಮಾಡಿಕೊಂಡು ಬಂದಿದ್ದ ಸಾಂಪ್ರದಾಯಿಕ ಬೇಸಾಯ ಪದ್ಧತಿಯನ್ನು ಇವರು ಅಳವಡಿಸಿಕೊಂಡಿದ್ದರು. ಆದರೆ ಇವರಿಗೆ ಹೋದರು ಏನೋ ಮಾಡಬೇಕು ಎಂಬ ಯೋಚನೆ ಇತ್ತು. ಯಾಕೆಂದರೆ ಸಾಂಪ್ರಾದಾಯಿಕ ಬೇಸಾಯ ಪದ್ಧತಿ ಕೇವಲ ಅಲ್ಲಿಂದಲ್ಲಿಗೆ ನಡೆಯುತ್ತಿತ್ತು ಹೊರತು ಯಾವುದೇ ರೀತಿಯ ದೊಡ್ಡ ಮಟ್ಟದ ಲಾಭ ತಂದು ಕೊಡಲಿಲ್ಲ. ಅದಕ್ಕಾಗಿ ಈ ಯೋಜನೆ ಮಾಡುತ್ತಾರೆ.

ಹೌದು ಇವರು ಹಲವಾರು ಬೆಳೆಗಳ ಪ್ರಯೋಗ ತಮ್ಮ ಭೂಮಿಯಲ್ಲಿ ಮಾಡಿದರು. ಆದರೆ ಯಾವುದು ಕೈ ಹಿಡಿಯಲಿಲ್ಲ ಕೊನೆಗೆ ಅವರು ಮೆಣಸಿನ ಕಾಯಿಯ ಬೆಳೆ ಬೆಳೆದು ಅದರಿಂದ ಲಾಭ ಗಳಿಸಲು ಶುರು ಮಾಡಿದರು. ಆರಂಭದಲ್ಲಿ 50,000 ಗಿಡಗಳನ್ನು 60,000ರೂಪಾಯಿ ಕೊಟ್ಟು ತಂದು ನೆಟ್ಟರು, ಇದು 45 ದಿನಗಳ ಕಾಲದಲ್ಲಿ ಬೆಳೆ ಬರಲು ಆರಂಭವಾಯಿತು. ಮತ್ತು ಉತ್ತಮ ಲಾಭ ತಂದು ಕೊಟ್ಟಿತು ಅದಕ್ಕಾಗಿ ಎಲ್ಲಾ 7 ಎಕರೆ ಭೂಮಿಯಲ್ಲಿ ಇದನ್ನು ಬೆಳೆಯಲು ಆರಂಭಿಸಿದೆ, ಮತ್ತು ಬೆಳೆದ ಮೆಣಸಿನ ಕಾಯಿಯನ್ನು ಮಹಾರಾಷ್ಟ್ರ ದಾಲ್ಲು ಮಾರುತ್ತೇನೆ ಮತ್ತು ಇದರ ಮಾರ್ಕೆಟಿಂಗ್ ಕೂಡ ಮಾಡುತ್ತೇನೆ ಎನ್ನುತ್ತಾರೆ. ಹೀಗೆ ಇವರು ಇದನ್ನೇ ಮುಂದುವರೆಸಿ ಬರೋಬ್ಬರಿ 6 ಲಕ್ಷ ಲಾಭ ಪಡೆಯುತ್ತಿದ್ದಾರೆ . ಅದು ಕೇವಲ 3 ತಿಂಗಳ ಅವಧಿಯಲ್ಲಿ. ಅವರು ಹೇಳುವ ಪ್ರಕಾರ ಯಾವುದೇ ರಾಸಾಯನಿಕ ಬಳಕೆ ಮಾಡುವುದಿಲ್ಲ ಬದಲಾಗಿ ದನದ ಸೆಗಣಿ ಮತ್ತು ಮೂತ್ರ ಬಳಸಿ ಗೊಬ್ಬರದ ರೂಪದಲ್ಲಿ ಬಳಕೆ ಮಾಡಿ ಇದನ್ನು ಬೆಳೆಯುತ್ತೇನೆ ಎನ್ನುತ್ತಾರೆ.

Leave A Reply

Your email address will not be published.